Petrol Allowance: ಸರ್ಕಾರೀ ನೌಕರರ ಈ ಖರ್ಚನ್ನು ಇನ್ಮೇಲೆ ಸರ್ಕಾರವೇ ಭರಿಸಲಿದೆ, ಗುಡ್ ನ್ಯೂಸ್
ಸರ್ಕಾರೀ ನೌಕರರಿಗೆ ಬಂಪರ್ ಗುಡ್ ನ್ಯೂಸ್, ಸಂಬಳದಲ್ಲಿ ಮತ್ತೆ 3000 ರೂ ಹೆಚ್ಚಳ.
Petrol Allowance For Constable And Sub Inspector: ದೇಶದಲ್ಲಿ ನೌಕರರ (Government employees) ವೇತನದ ಭತ್ಯೆ ಹೆಚ್ಚಳದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರೀ ನೌಕರರ 7th Pay Commission ಹೆಚ್ಚಳದ ಬಗ್ಗೆ ಸಾಕಷ್ಟು ಸುದ್ದಿಗಳುವೈರಲ್ ಆಗುತ್ತಿದೆ. ಸದ್ಯದಲ್ಲೇ ಸರ್ಕಾರೀ ನೌಕರರ ತುಟ್ಟಿಭತ್ಯೆ ಶೇ. 46 ತಲುಪುವ ಸಾಧ್ಯತೆ ಇದೆ.
ಈ ತುಟ್ಟಿಭತ್ಯೆ ಹೆಚ್ಚಳದ ಅಡಿಯಲ್ಲಿ ಸರ್ಕಾರೀ ನೌಕರರ ವೇತನ 9,000 ರೂ. ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಇದರ ಬೆನ್ನಲ್ಲೇ ಇದೀಗ ಈ ರಾಜ್ಯ ಸರ್ಕಾರ ವಿವಿಧ ನೌಕರರ ಭತ್ಯೆ ಹೆಚ್ಚಳ ಮಾಡಲು ನಿರ್ಧರಿಸಿದೆ. ಪ್ರತಿ ವಿಭಾಗದ ನೌಕರರ ವೇತನ ಹೆಚ್ಚಿಸುವ ಬಗ್ಗೆ ಸರ್ಕಾರ ಘೋಷಣೆ ಹೊರಡಿಸಿದೆ.
ಈ ರಾಜ್ಯದ ಸರ್ಕಾರೀ ನೌಕರರಿಗೆ ಬಂಪರ್ ಗುಡ್ ನ್ಯೂಸ್
ಮಧ್ಯಪ್ರದೇಶ ರಾಜ್ಯದಲ್ಲಿ ಇದೀಗ ಸರ್ಕಾರೀ ನೌಕರರಿಗೆ ಬಂಪರ್ ಗುಡ್ ನ್ಯೂಸ್ ಹೊರಬಿದ್ದಿದೆ. ಮಧ್ಯಪ್ರದೇಶದಲ್ಲಿ ಅಧಿಕಾರಿ ಉದ್ಯೋಗಿಗಳಿಗೆ ಭತ್ಯೆಯನ್ನು ಹೆಚ್ಚಿಸಲಾಗಿದೆ. ಪ್ರತಿ ತಿಂಗಳು ಅಧಿಕಾರಿ ಉದ್ಯೋಗಿಗಳಿಗೆ ಒಂದು ಮೊತ್ತದ ಪೆಟ್ರೋಲ್ ಭತ್ಯೆ ನೀಡುವುವುದಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಆದೇಶ ಹೊರಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ನಿಯಮ ನಮ್ಮ ರಾಜ್ಯದಲ್ಲಿ ಕೂಡ ಜಾರಿಗೆ ತರುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ತಿಂಗಳಿಗೆ 1,635 ರೂಗಳಲ್ಲಿ ಪೆಟ್ರೋಲ್ ಭತ್ಯೆ
ಮಧ್ಯಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ Constable ನಿಂದ Sub Inspector ಮಟ್ಟದ ಉದ್ಯೋಗಿಗಳಿಗೆ ತಿಂಗಳಿಗೆ 1635 ರೂಪಾಯಿಗಳ ಪೆಟ್ರೋಲ್ ಭತ್ಯೆ ನೀಡಬೇಕು ಎಂದು ಗೃಹ ಇಲಾಖೆ ಆದೇಶವನ್ನು ಹೊರಡಿಸಿದೆ. ಪ್ರಸ್ತುತ ಸಮಾನವಾದ 15 ಲೀಟರ್ ಪೆಟ್ರೋಲ್ ಅನ್ನು ಪ್ರತಿ ವರ್ಷ ಏಪ್ರಿಲ್ 1 ರಂದು ಮರುಪಾವತಿ ಮಾಡಲಾಗುತ್ತದೆ. ಅಧಿಕಾರಿ ನೌಕರರಿಗೆ ಪ್ರಮುಖ ಸವಲತ್ತುಗಳನ್ನು ನೀಡುತ್ತಾ, ಅಧಿಕಾರಿಗಳಿಗೆ ಪ್ರತಿ ತಿಂಗಳು 15 ಲೀಟರ್ ಪೆಟ್ರೋಲ್ ಭತ್ಯೆ ದೊರೆಯುವಂತೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಅವರು ಮಾಹಿತಿ ನೀಡಿದ್ದಾರೆ.
ಪೆಟ್ರೋಲ್ ಭತ್ಯೆ ಪಡೆಯಲು ಯಾರು ಅರ್ಹರು
ಇಲಾಖಾ ಆದೇಶದ ಪ್ರಕಾರ ಪೊಲೀಸ್ ಠಾಣೆಯಲ್ಲಿ ಮಂಜೂರಾದ ಹುದ್ದೆಗಳ ವಿರುದ್ಧ ಕೆಲಸ ಮಾಡುವ ಪೊಲೀಸರು ಮಾತ್ರ ಪೆಟ್ರೋಲ್ ಭತ್ಯೆಗೆ ಅರ್ಹರಾಗಿರುತ್ತಾರೆ. ಇದಕ್ಕೆ ಪೂರಕವಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ. ಪೆಟ್ರೋಲ್ ಭತ್ಯೆಯ ಹೊರತಾಗಿ, ಕಾನ್ಸ್ ಟೇಬಲ್ ನಿಂದ ಇನ್ ಸ್ಪೆಕ್ಟರ್ ಹಂತದ ಗೆಜೆಟೆಡ್ ಅಲ್ಲದ ಅಧಿಕಾರಿಗಳಿಗೆ ಪೌಷ್ಟಿಕ ಆಹಾರ ಭತ್ಯೆಯನ್ನು ಸಹ ನೀಡಲಾಗುವುದು.
ಸಂಬಳದಲ್ಲಿ ಮತ್ತೆ 3000 ರೂ ಹೆಚ್ಚಳ
ಮಾಸಿಕ 650 ರೂ.ಗಳ ಬದಲಿಗೆ ಈಗ 1,000 ರೂ.ಗಳನ್ನು ಭತ್ಯೆಯಾಗಿ ಪಡೆಯಲಿದ್ದಾರೆ. ಇದರೊಂದಿಗೆ 3 ವರ್ಷಗಳಲ್ಲಿ ಎಎಸ್ ಐನಿಂದ ಇನ್ಸ್ ಪೆಕ್ಟರ್ ಹಂತದವರೆಗಿನ ಅಧಿಕಾರಿಗಳಿಗೆ ನೀಡುತ್ತಿದ್ದ ಸಮವಸ್ತ್ರ ನವೀಕರಣ ಅನುದಾನವನ್ನು ರೂ. 500ರಿಂದ ರೂ. 2500ಕ್ಕೆ ಹೆಚ್ಚಿಸಲಾಗಿದೆ.
Constable and Head Constable ಗಳು ವಾರ್ಷಿಕವಾಗಿ ಪಡೆಯುತ್ತಿದ್ದ ಸಮವಸ್ತ್ರ ಭತ್ಯೆ ಮೊತ್ತವನ್ನು 2500 ಮತ್ತು 3,000 ರೂ.ಗಳಿಂದ 5,000 ರೂ.ಗೆ ಹೆಚ್ಚಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭತ್ಯೆ ಹೆಚ್ಚಳದ ಜೊತೆಗೆ ಪೊಲೀಸರ ವೇತನದಲ್ಲಿ ಭಾರಿ ಏರಿಕೆಯಾಗಲಿದೆ. ಅವರ ವೇತನವು 5,000 ರೂ.ವರೆಗೆ ಏರಿಕೆಯಾಗಬಹುದು.