Price Down: ಗ್ಯಾಸ್ ಬೆಲೆ ಇಳಿಕೆಯ ಬೆನ್ನಲ್ಲೇ ಇನ್ನೊಂದು ಘೋಷಣೆ ಮಾಡಿದ ಮೋದಿ, ಇದು ಮುಂದಿನ ನವರಾತ್ರಿ ಗಿಫ್ಟ್.
ಬೆಲೆ ಏರಿಕೆಯ ಬೆನ್ನಲ್ಲೇ ಜನತೆಗೆ ಕೇಂದ್ರದಿಂದ ಗುಡ್ ನ್ಯೂಸ್.
Price Down In India: ಏಪ್ರಿಲ್ 1, 2023 ರಿಂದ ಹೊಸ ಹಣಕಾಸು ವರ್ಷ ಪ್ರಾರಂಭವಾಗಿದೆ. ಈ ಬಾರಿಯ ಹಣಕಾಸು ವರ್ಷ ಹೆಚ್ಚಿನ ಹಣದುಬ್ಬರತೆಯನ್ನು ನೀಡಿದೆ. ದಿನ ನಿತ್ಯ ಬಳಕೆಯ ವಸ್ತುಗಳ ಬೆಲೆ ಹೆಚ್ಚು ಏರಿಕೆಯಾಗುತ್ತಿದೆ. ಜನರು ಯಾವುದೇ ವಸ್ತುಗಳನ್ನು ಖರೀದಿಸಬೇಕಿದ್ದರು ಹೆಚ್ಚಿನ ಹಣ ನೀಡಬೇಕಾಗಿದೆ. ಈ ಬಾರಿ ಹಣಕಾಸು ವರ್ಷ ಜನರ ಜೇಬಿಗೆ ಬಾರಿ ಪ್ರಮಾಣದಲ್ಲಿ ಕತ್ತರಿ ಹಾಕಿದೆ. ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಸೇರಿದಂತೆ ಇನ್ನಿತರ ವಸ್ತುಗಳ ಬೆಲೆ ಏರಿಕೆ ಕಾಣುತ್ತಿದೆ.
ಬೆಲೆ ಏರಿಕೆಯ ಬೆನ್ನಲ್ಲೇ ಜನತೆಗೆ ಕೇಂದ್ರದಿಂದ ಗುಡ್ ನ್ಯೂಸ್
ಇತೀಚೆಗಷ್ಟೇ ದೇಶದಲ್ಲಿ ಟೊಮೊಟೊ ದರ ಗಣನೀಯ ಏರಿಕೆ ಕಂಡಿದೆ. ಮೊದಲು 20 ರೂ. ಗೆ ಒಂದು ಕೆಜಿ ಟೊಮೊಟೊ ಸಿಗುತ್ತಿತ್ತು. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ 20 ರೂ. ಗೆ ಒಂದು ಟೊಮೊಟೊ ಕೂಡ ಸಿಗದಂತಾಗಿದೆ. ಟೊಮೊಟೊ ಕೆಜಿಗೆ 200 ರಿಂದ 250 ರೂ. ಆಗಿದ್ದು ನಿಮಗೆಲ್ಲ ತಿಳಿದೇ ಇದೆ. ಟೊಮೊಟೊ ಬೆಲೆಯ ಏರಿಕೆಯ ಬೆನ್ನಲ್ಲೇ ಹೋಟೆಲ್ ತಿನಿಸುಗಳ ಬೆಲೆ ಕೂಡ ಏರಿಕೆಯಾಗಿದೆ.
ಹೋಟೆಲ್ ನಲ್ಲಿ ಹೆಚ್ಚಿನ ಆಹಾರ ಪದಾರ್ಥಗಳ ತಯಾರಿಕೆಗೆ ಟೊಮೇಟೊ ಹೆಚ್ಚು ಬಳಕೆಗೆ ಅಗತ್ಯವಿರುವ ಕಾರಣ ಹೋಟೆಲ್ ತಿನಿಸುಗಳ ದರ ಕೂಡ ಏರಿಕೆಯಾಗಿದೆ. ಸದ್ಯ ಟೊಮೇಟೊ ಬೆಲೆ ಇಳಿಕೆ ಆಗಿದ್ದು ಇದರ ನಡುವೆ ಕೇಂದ್ರ ಸರ್ಕಾರ ಗ್ಯಾಸ್ ಬೆಲೆಯಲ್ಲಿ ಇಳಿಕೆ ಮಾಡುವುದರ ಬಗ್ಗೆ ಮಾಹಿತಿ ನೀಡಿದೆ. ಗ್ಯಾಸ್ ಬೆಲೆಯ ಇಳಿಕೆಯ ಖುಷಿಯಲ್ಲಿದ್ದ ಜನತೆಗೆ ಇದೀಗ ಮತ್ತೊಂದು ಸಿಹಿ ಸುದ್ದಿ ಲಭಿಸಿದೆ.
ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಇಳಿಕೆ ಸಾಧ್ಯತೆ
ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಗಳ ಮೇಲೆ 200 ರೂ. ಸಬ್ಸಿಡಿಯನ್ನು ಸರ್ಕಾರ ಘೋಷಿಸಿದೆ. ಇದರ ಜೊತೆಗೆ ಈ ಯೋಜನೆಯಡಿ ಕೇಂದ್ರವು ದೇಶದಲ್ಲಿ 75 ಲಕ್ಷ ಹೊಸ ಎಲ್ ಪಿಜಿ ಸಂಪರ್ಕವನ್ನು ಘೋಷಿಸಿದೆ. ಇನ್ನು ಗ್ಯಾಸ್ ಸಿಲಿಂಡರ್ ಸಬ್ಸಿಡಿ ಬೆನ್ನಲ್ಲೇ ಇದೀಗ ಶೀಘ್ರದಲ್ಲೇ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಇಳಿಕೆ ಮಾಡುವ ಬಗ್ಗೆ ಸೂಚನೆ ಲಭಿಸಿದೆ.
ಕಚ್ಚಾ ತೈಲಗಳ ಬೆಲೆಯ ಏರಿಕೆಯಿಂದಾಗ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಯಲ್ಲಿ ಮೇಲುಗೈ ಸಾದಿಸುತ್ತಿವೆ. ಪೆಟ್ರೋಲ್, ಡೀಸೆಲ್ ಚಾಲಿತ ವಾಹನಗಳು ಬೇಡಿಕೆ ಕಳೆದುಕೊಳ್ಳುತ್ತಿದೆ. ಈ ಕಾರಣಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಅನಿವಾರ್ಯವಾಗಿದೆ. ಇನ್ನು ಸರ್ಕಾರ ಪೆಟ್ರೋಲ್, ಡೀಸೆಲ್ ಬೆಳೆಯನ್ನು ಇಳಿಕೆ ಘೋಷಿಸುವವರೆಗೂ ಕಾದು ನೋಡಬೇಕಿದೆ. ಮುಂದಿನ ದಿನಗಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಆಗುವುದಾರ ಬಗ್ಗೆ ಕೇಂದ್ರದಿಂದ ಮಾಹಿತಿ ಸಿಕ್ಕಿದೆ.