Petrol Price History India 2000 To 2025: ಜನರ ದಿನನಿತ್ಯದ ಮೂಲಭೂತ ವಸ್ತುಗಳಲ್ಲಿ ಪೆಟ್ರೋಲ್ ಕೂಡ ಒಂದಾಗಿದೆ. ದೇಶದಲ್ಲಿ ಡೀಸೆಲ್ ವಾಹನಗಳಿಗೆ ಹೋಲಿಕೆ ಮಾಡಿದರೆ ಪೆಟ್ರೋಲ್ ವಾಹನಗಳ ಸಂಖ್ಯೆ ಬಹಳ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ವಾಹನಗಳ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು ಇಂಧನದ ಬೇಡಿಕೆ ಕೂಡ ಅದೇ ರೀತಿಯಲ್ಲಿ ಏರಿಕೆ ಆಗಿದೆ. ಕಳೆದ 25 ವರ್ಷಗಳಿಂದ ಇಂಧನದ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಿರುವುದನ್ನು ನಾವು ಗಮನಿಸಬಹುದು. ಕಳೆದ 25 ವರ್ಷಗಳ ಹಿಂದೆ ಅತೀ ಕಡಿಮೆ ಬೆಲೆಗೆ ಸಿಗುತ್ತಿದ್ದ ಪೆಟ್ರೋಲ್ ಬೆಲೆ ಈಗ ಗಗನಕ್ಕೆ ಏರಿಕೆಯಾಗಿದೆ. ಹಾಗಾದರೆ 2000 ನೇ ಇಸವಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ ಎಷ್ಟಾಗಿದ್ದು ಮತ್ತು ಈಗಿನ ಬೆಲೆಗೆ ಹೇಗೆ ಹೋಲಿಕೆ ಮಾಡಬಹುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
2000 ವರ್ಷದಲ್ಲಿ ಪೆಟ್ರೋಲ್ ಬೆಲೆ
2000 ಇಸವಿಯಲ್ಲಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಸುಮಾರು 28.44 ರೂಪಾಯಿ ಇತ್ತು. ಅದಕ್ಕಿಂತ ಮೊದಲು 1990 ರ ದಶಕದಲ್ಲಿ ಇನ್ನೂ ಕಡಿಮೆ, ಅಂದರೆ ಸುಮಾರು 20 ರಿಂದ 25 ರೂಪಾಯಿಯ ಆಸುಪಾಸಿನಲ್ಲಿ ಇದ್ದಿತ್ತು. ಆ ಕಾಲದಲ್ಲಿ ಸರ್ಕಾರಿ ನಿಯಂತ್ರಣದಲ್ಲಿ ಬೆಲೆ ಇದ್ದ ಕಾರಣ ಮತ್ತು ಕ್ರೂಡ್ ಆಯಿಲ್ ಅಂತಾರಾಷ್ಟ್ರೀಯ ಬೆಲೆ ಕಡಿಮೆ ಇದ್ದ ಕಾರಣ ಪೆಟ್ರೋಲ್ ಬೆಲೆ ಅಷ್ಟೊಂದು ಕಡಿಮೆ ಇದಿತ್ತು. ಹಾಗೆ ವಾಹನಗಳ ಸಂಖ್ಯೆ ಕೂಡ ಕಡಿಮೆ ಇದ್ದ ಕಾರಣ ಪೆಟ್ರೋಲ್ ಬೇಡಿಕೆಯು ಕಡಿಮೆ ಆಗಿತ್ತು. ಒಂದು ಬೈಕ್ ತುಂಬಿಸಲು 100 ರಿಂದ 200 ರೂಪಾಯಿ ಸಾಕಾಗುತ್ತಿತ್ತು.
ವರ್ಷವಾರು ಬೆಲೆ ಬಗ್ಗೆ ನೋಡುವುದಾದರೆ
* 2000 ದಶಕದಲ್ಲಿ, ದೆಹಲಿಯಲ್ಲಿ ಪ್ರತಿ ಲೀಟರ್ ಗೆ ಸುಮಾರು 28 ರೂಪಾಯಿ ಆಗಿತ್ತು.
* 2005-2014 ರ ವರ್ಷದಲ್ಲಿ ಪ್ರತಿ ಲೀಟರ್ ಗೆ 38 ರಿಂದ 72 ಕ್ಕೆ ಏರಿಕೆ ಆಗಿದೆ.
* 2020 ಕ್ಕೆ ಪ್ರತಿ ಲೀಟರ್ ಗೆ ಸುಮಾರು 80 ರೂಪಾಯಿ ಏರಿಕೆ ಆಗಿದೆ.
* 2022 ಕ್ಕೆ ಪ್ರತಿ ಲೀಟರ್ ಗೆ ಸುಮಾರು 95 ರಿಂದ 110 ರೂಪಾಯಿ ಏರಿಕೆ ಆಗಿದೆ.
* 2024 ಕ್ಕೆ ಪ್ರತಿ ಲೀಟರ್ ಗೆ ಸುಮಾರು 100 ರೂಪಾಯಿ ಏರಿಕೆ ಆಗಿದೆ.
* 2025 ಕ್ಕೆ ಪ್ರತಿ ಲೀಟರ್ ಗೆ ಸುಮಾರು 105 ರೂಪಾಯಿ ಏರಿಕೆ ಆಗಿದೆ.
ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್ ಬೆಲೆಯಲ್ಲಿ ಅಂತರವಿದ್ದು ಕೆಲವು ರಾಜ್ಯದಲ್ಲಿ ಒಂದೆರಡು ರೂಪಾಯಿ ಏರಿಕೆ ಅಥವಾ ಇಳಿಕೆ ಇರಬಹುದು.
ಪೆಟ್ರೋಲ್ ಬೆಲೆ ಏರಿಕೆಗೆ ಕಾರಣ ಏನು?
* ಅಂತಾರಾಷ್ಟ್ರೀಯ ಕ್ರೂಡ್ ಆಯಿಲ್ ಬೆಲೆ
ಭಾರತ 84% ತೈಲ ಆಮದು ಮಾಡಿಕೊಳ್ಳುತ್ತದೆ. 2008 ರ ಆರ್ಥಿಕ ಬಿಕ್ಕಟ್ಟು, ಯುದ್ಧಗಳು, OPEC ನಿರ್ಧಾರಗಳಿಂದ ಪೆಟ್ರೋಲ್ ಬೆಲೆ ಏರಿಕೆ ಆಗಿದೆ ಅನ್ನುವುದು ತಜ್ಞರ ಅಭಿಪ್ರಾಯವಾಗಿದೆ.
* ರೂಪಾಯಿ ಮೌಲ್ಯ ಕುಸಿತ
ಡಾಲರ್ ಗೆ ರೂಪಾಯಿ ದುರ್ಬಲವಾದಾಗ ಆಮದು ದುಬಾರಿಯಾಗುತ್ತದೆ. ಈ ಕಾರಣದಿಂದ ಪೆಟ್ರೋಲ್ ಬೆಲೆ ಏರಿಕೆ ಆಗಿದೆ. ಸದ್ಯ ಭಾರತದಲ್ಲಿ ರೂಪಾಯಿ ಮೌಲ್ಯ ಮತ್ತಷ್ಟು ಕುಸಿತವಾಗಿದ್ದು ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
* ತೆರಿಗೆಗಳು
ಅಬಕಾರಿ ಸುಂಕ ಮತ್ತು ಮೌಲ್ಯವರ್ಧಿತ ತೆರಿಗೆ. ಈಗಿನ ಬೆಲೆಯಲ್ಲಿ ಅರ್ಧದಷ್ಟು ತೆರಿಗೆಗೆ ಹೋಗುತ್ತದೆ, 2000 ರಲ್ಲಿ ತೆರಿಗೆ ಕಡಿಮೆ ಇದ್ದ ಕಾರಣ ಇಂಧನದ ಬೆಲೆ ಕೂಡ ಕಡಿಮೆಯಾಗಿತ್ತು.
* ಡೈನಾಮಿಕ್ ಪ್ರೈಸಿಂಗ್
2017 ರಿಂದ ಮಾರುಕಟ್ಟೆ ಬೇಡಿಕೆ ಆಧಾರದ ಮೇಲೆ ನೈಜ ಸಮಯದಲ್ಲಿ ಬೆಲೆಗಳು ಬದಲಾಗುತ್ತದೆ. ಈ ಕಾರಣಗಳಿಂದ ಇಂಧನದ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರಬಹುದು.
2000 ದಿಂದ 2025 ರ ವರೆಗಿನ ಪೆಟ್ರೋಲ್ ದರವು ಸ್ಥಿರವಾದ ಏರಿಕೆಯನ್ನು ತೋರಿಸುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಹೆಚ್ಚಾದರೆ ಪೆಟ್ರೋಲ್ ಬೇಡಿಕೆ ಕಡಿಮೆಯಾಗಬಹುದು. ಆದರೆ ತೆರಿಗೆಗಳು ಮತ್ತು ಜಾಗತಿಕ ಬೆಲೆಗಳು ಮುಂದುವರಿದರೆ ಇನ್ನಷ್ಟು ಏರಿಕೆಯೇ ಸಾಧ್ಯ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಮುಂದಿನ ಹತ್ತು ವರ್ಷದಲ್ಲಿ ಇನ್ನಷ್ಟು ಏರಿಕೆ ಆಗಲಿದೆ ಮತ್ತು ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಏರಿಕೆಯಾದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

