Filling Station ಸ್ವಂತ ಪೆಟ್ರೋಲ್ ಬಂಕ್ ಸ್ಥಾಪಿಸಲು ನಿಮಗೆ ಏನು ಏನು ದಾಖಲೆ ಮತ್ತು ಅರ್ಹತೆ ಬೇಕು, ಬೇಕಾದ ಬಂಡವಾಳ ಎಷ್ಟು.
ಪೆಟ್ರೋಲ್ ಬಂಕ್ ಅನ್ನು ತೆರೆಯುವ ಮುನ್ನ ಅಗತ್ಯವಿರುವ ಅರ್ಹತೆ, ಭೂಮಿ, ಬಂಡವಾಳಗಳ ಬಗ್ಗೆ ಮಾಹಿತಿ ತಿಳಿಯಿರಿ.
Petrol Pump Expenditure: ಭಾರತದಲ್ಲಿ ಸಾಕಷ್ಟು ಪೆಟ್ರೋಲ್ ಬಂಕ್ (Petrol Pump) ಗಳು ಸ್ಥಾಪನೆಯಾಗಿದೆ. ದೇಶದಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಾಹನಗಳ ಚಲಾವಣೆಗೆ ಕಚ್ಚಾತೈಲಗಳ ಬಳಕೆ ಅತ್ಯಗತ್ಯ. ಹೀಗಾಗಿ ಪೆಟ್ರೋಲ್ ಮೇಲಿನ ಬೇಡಿಕೆ ಕೂಡ ಹೆಚ್ಚುತ್ತಿದೆ. ಪೆಟ್ರೋಲ್ ಬಂಕ್ ಸ್ಥಾಪನೆಯಿಂದಾಗಿ ಹೆಚ್ಚಿನ ಲಾಭವನ್ನು ಪಡೆಯಬಹುದು. ಪೆಟ್ರೋಲ್ ಬಂಕ್ ಸ್ಥಾಪನೆ ಕೂಡ ಒಂದು ರೀತಿಯ ಹೂಡಿಕೆಯ ವಿಧಾನವಾಗಿದೆ.
ಇನ್ನು ಕೆಲವರು ಪೆಟ್ರೋಲ್ ಬಂಕ್ ಸ್ಥಾಪಿಸುವ ಯೋಜನೆಯನ್ನು ಹಾಕಿರುತ್ತಾರೆ. ಯಾವುದೇ ಪ್ರದೇಶದಲ್ಲಿ ಪೆಟ್ರೋಲ್ ಬಂಕ್ ಅನ್ನು ಸ್ಥಾಪಿಸಲು ಕೆಲವರು ಅರ್ಹತೆಗಳನ್ನು ಹೊಂದಿರಬೇಕು. ಪೆಟ್ರೋಲ್ ಬಂಕ್ ಸ್ಥಾಪನೆಗೆ ಹೆಚ್ಚಿನ ಬಂಡವಾಳದ ಅಗತ್ಯವಿರುತ್ತದೆ. ಪೆಟ್ರೋಲ್ ಬಂಕ್ ಅನ್ನು ತೆರೆಯುವ ಮುನ್ನ ಅಗತ್ಯವಿರುವ ಅರ್ಹತೆ, ಭೂಮಿಯ ಅವಶ್ಯಕತೆ ಹಾಗೂ ಹೂಡಿಕೆಯ ವಿವರಗಳ ಬಗ್ಗೆ ಮಾಹಿತಿ ತಿಳಿದಿರಬೇಕು.
ಸ್ವಂತ ಪೆಟ್ರೋಲ್ ಬಂಕ್ ಸ್ಥಾಪಿಸಲು ಬೇಕಾಗುವ ಅರ್ಹತೆಗಳೇನು
ಪೆಟ್ರೋಲ್ ಬಂಕ್ ಸ್ಥಾಪಿಸಲು ಮೊದಲು ಅರ್ಜಿ ಸಲ್ಲಿಸಬೇಕು. ಅರ್ಜಿದಾರರ ವಯಸ್ಸು 21 ರಿಂದ 55 ವರ್ಷ ಆಗಿರಬೇಕು. ಇನ್ನು ಅರ್ಜಿದಾರರು 10 ನೇ ತರಗತಿ ಅಥವಾ ಅದಕ್ಕಿಂತ ಹೆಚ್ಚು ಓದಿರಬೇಕು. ಇನ್ನು ರಿಟೇಲ್ ಔಟ್ ಲೇಟ್, ವ್ಯಾಪಾರ ಅಥವಾ ಯಾವುದೇ ಇತರ ಸಂಬಂಧಿತ ಕ್ಷೇತ್ರಗಳಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವವನ್ನು ಹೊಂದಿರಬೇಕು.
ಅರ್ಜಿದಾರರ ವಿರುದ್ಧ ಭಾರತೀಯ ನ್ಯಾಯಾಲಯದಲ್ಲಿ ಯಾವುದೇ ಕ್ರಿಮಿನಲ್ ಮೊಕದ್ದಮೆ ಇರಬಾರದು. ಯಾವುದೇ ಇನಿತರ ವ್ಯಾಪಾರ ಲೋನ್ ನ ಡಿಫಾಲ್ಟ್ ಆಗಿರಬಾರದು. ಇನ್ನು ಜಮೀನಿನ ಮಾಲೀಕರೇ ಅರ್ಜಿದಾರರಾಗಿರಬೇಕು. ಪೆಟ್ರೋಲ್ ಬಂಕ್ ಸ್ಥಾಪಿಸಲು ಉಪಯೋಗಿಸುವ ಜಮೀನು ಕಾನೂನು ವಿವಾದದಲ್ಲಿರಬಾರದು.
ಪೆಟ್ರೋಲ್ ಬಂಕ್ ಸ್ಥಾಪನೆಗೆ ತಗಲುವ ವೆಚ್ಚ ಎಷ್ಟು
ಅರ್ಜಿದಾರರ ಕುಟುಂಬದ ನಿವ್ವಳ ಮೌಲ್ಯವು 50 ಲಕ್ಷಕ್ಕಿಂತ ಕಡಿಮೆ ಇರಬಾರದು ಹಾಗೂ ಅರ್ಜಿದಾರರು ಕನಿಷ್ಠ 25 ಲಕ್ಷ ನಿವ್ವಳ ಮೌಲ್ಯವನ್ನು ಹೊಂದಿರಬೇಕು. ಪೆಟ್ರೋಲ್ ಬಂಕ್ ಸ್ಥಾಪನೆಗೆ ಭೂಮಿ ವೆಚ್ಚ, ಸಲಕರಣೆ ವೆಚ್ಚ, ಪರವಾನಗಿ ಶುಲ್ಕವನ್ನು ಭರಿಸಬೇಕಾಗುತ್ತದೆ. ಭೂಮಿಯ ಬೆಲೆ 20 ಲಕ್ಷದಿಂದ ಕೋಟಿ ರೂ. ನಿರ್ಮಾಣ ವೆಚ್ಚ 30 ಲಕ್ಷದಿಂದ ಕೋಟಿ ರೂ., ಸಾಧನದ ಬೆಲೆ 20 ರಿಂದ 50 ಲಕ್ಷ, ಪರವಾನಗಿ ಶುಲ್ಕ 2 ರಿಂದ 5 ಲಕ್ಷ ಹಣ ಅಗತ್ಯವಿರುತ್ತದೆ.