Petrol Pump: ಇನ್ನುಮುಂದೆ ಪೆಟ್ರೋಲ್ ಬಂಕ್ ನಲ್ಲಿ ಈ 6 ಸೇವೆಗಳು ಉಚಿತ, ವಾಹನ ಸವಾರರೇ ಎಚ್ಛೆತ್ತುಕೊಳ್ಳಿ.
ಈ ಉಚಿತ ಸೌಲಭ್ಯಗಳ ಮಾಹಿತಿ ತಿಳಿದುಕೊಂಡು ಸೌಲಭ್ಯಗಳನ್ನು ಬಳಸಿಕೊಳ್ಳಿ.
Petrol Pump Facility: ದೇಶದಾದ್ಯಂತ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ವಿವಿಧ ಮಾದರಿಯ ವಾಹನಗಳು ಮಾರುಕಟ್ಟೆಗೆ ಬಂದು ಜನರನ್ನು ಆಕರ್ಷಿಸುತ್ತಲೇ ಇರುತ್ತದೆ. ಇನ್ನು ವಾಹನಗಳಿಗೆ ಪೆಟ್ರೋಲ್ (Petrol) ಅಥವಾ ಡೀಸೆಲ್ ಬಳಸುವುದು ತಿಳಿದಿರುವ ವಿಷಯ. ದೇಶದಲ್ಲಿ ಅದೆಷ್ಟೋ ಸಾವಿರ ಪೆಟ್ರೋಲ್ ಬಂಕ್ ಗಳ ವ್ಯವಸ್ಥೆ ಇದೆ. ಇನ್ನು ಕೆಲವು ಪೆಟ್ರೋಲ್ ಬಂಕ್ ಗಳಲ್ಲಿ ವಿಶೇಷ ಸೌಲಭ್ಯ ಕೂಡ ಇದೆ.
ನಿಮ್ಮ ವಾಹನಗಳಿಗೆ ಪೆಟ್ರೋಲ್ ಅಥವಾ ಡೀಸೆಲ್ ಹಾಕಲು ಪೆಟ್ರೋಲ್ ಬಂಕ್ ಗಳಿಗೆ ಈಗಾಗಲೇ ನೀವು ಭೇಟಿ ನೀಡಿರುತ್ತೀರಿ. ಕೆಲವು ಪೆಟ್ರೋಲ್ ಬಂಕ್ (Petrol Pump) ಗಳು ಹೈಫೈ ಆಗಿದ್ದು, ಪೆಟ್ರೋಲ್, ಡೀಸೆಲ್, ಟೈರ್ ಏರ್ ಪ್ರೆಶರ್ ಹಾಗೆ ಶೌಚಾಲಯದ ಸೌಲಭ್ಯಗಳು ಇರುತ್ತದೆ. ಇನ್ನು ಪೆಟ್ರೋಲ್ ಬ್ಯಾಂಕ್ ಗಳಲ್ಲಿ ಒಂದಿಷ್ಟು ಉಚಿತ ಸೌಲಭ್ಯವನ್ನು ನೀಡಿರುತ್ತಾರೆ. ಈ ಉಚಿತ ಸೌಲಭ್ಯಗಳ ಮಾಹಿತಿ ತಿಳಿದುಕೊಂಡ ಸೌಲಭ್ಯಗಳನ್ನು ಬಳಸಿಕೊಳ್ಳಿ.
ಇನ್ನುಮುಂದೆ ಪೆಟ್ರೋಲ್ ಬಂಕ್ ನಲ್ಲಿ ಈ 6 ಸೇವೆಗಳು ಉಚಿತ
*ಇಂಧನ ಪರಿಶೀಲನೆ
ನೀವು ವಾಹನಕ್ಕೆ ಇಂಧನವನ್ನು ಹಾಕಿಸಿದಾಗ ಇಂಧನದ ಗುಣಮಟ್ಟ ಹಾಗು ಪ್ರಮಾಣದ ಪರಿಶೀಲನೆಗೆ ಪೆಟ್ರೋಲ್ ಬಂಕ್ ಗಳಲ್ಲಿ ಪಿಲ್ಟರ್ ಪೇಪರ್ ಪರೀಕ್ಷೆಯನ್ನು ಉಚಿತವಾಗಿ ಪಡೆಯಬಹುದಾಗಿದೆ.
*ಪ್ರಥಮ ಚಿಕಿತ್ಸಾ ಕಿಟ್
ಇನ್ನು ರಸ್ತೆಯಲ್ಲಿ ಅಪಘಾತವಾದಾಗ ನಿಮ್ಮ ಬಳಿ ಪ್ರಥಮ ಚಿಕಿತ್ಸಾ ಕಿಟ್ ಇಲ್ಲದೆ ಇದ್ದಾರೆ ಹತ್ತಿರದ ಪೆಟ್ರೋಲ್ ಬಂಕ್ ಗೆ ಭೇಟಿನೀಡಿ ಅಲ್ಲಿ ನೀವು First Aid Box ಅನ್ನು ಪಡೆಯಬಹುದು.
*ತುರ್ತು ಕರೆ
ಇನ್ನು ಯಾವುದೇ ಅಪಘಾತ ಸಂಭಾವಿಸುದ ಸಮಯದಲ್ಲಿ ನಿಮ್ಮ ಮೊಬೈಲ್ ಫೋನ್ ಗಳು ವರ್ಕ್ ಆಗದೆ ಇದ್ದ ಸಮಯದಲ್ಲಿ ಪೆಟ್ರೋಲ್ ಬಂಕ್ ನಲ್ಲಿ ನೀವು ತುರ್ತು ಕರೆಯ ಸೇವೆಯನ್ನು ಪಡೆಯಬಹುದಾಗಿದೆ.
*ಶೌಚಾಲಯದ ವ್ಯವಸ್ಥೆ
ಇನ್ನು ದೂರದ ಪ್ರಯಾಣ ಮಾಡುತ್ತಿದ್ದ ಸಮಯದಲ್ಲಿ ಸಾಮಾನ್ಯವಾಗಿ ಎಲ್ಲರೂ ಶೌಚಲಯ್ವನ್ನು ಹುಡುಕಾಡುತ್ತಾರೆ. ಇನ್ನು ನೀವು ಚಿಂತಿಸುವ ಅಗತ್ಯವಿಲ್ಲ. ಪೆಟ್ರೋಲ್ ಬಂಕ್ ಗಳಲ್ಲಿ ನೀವು ಯಾವುದೇ ಶುಲ್ಕವನ್ನು ಪಾವತಿ ಮಾಡದೆ ಉಚಿತವಾಗಿ ಶೌಚಾಲಯವನ್ನು ಬಳಸಿಕೊಳ್ಳಬಹುದು.
*ನೀರಿನ ವ್ಯವಸ್ಥೆ
ಇನ್ನು ನಿಮಗೆ ಬಾಯಾರಿಕೆಯ ಸಮಯದಲ್ಲಿ ಪೆಟ್ರೋಲ್ ಬಂಕ್ ಗಲ್ಲಿ ಉಚಿತ ನೀರಿನ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು. ಪೆಟ್ರೋಲ್ ಬಂಕ್ ನಲ್ಲಿ ಯಾವುದೇ ಶುಲ್ಕವನ್ನು ನಿದ್ದೆ ನೀವು ನೀರನ್ನು ಕುಡಿಯಬಹುದಾಗಿದೆ.
*ಟೈರ್ ಗಳಿಗೆ ಗಾಳಿ ತುಂಬುವಿಕೆ
ಇನ್ನು ನಿಮ್ಮ ವಾಹನಗಳ ಟೈರ್ ನಲ್ಲಿ ಗಾಳಿ ಕಡಿಮೆ ಇದ್ದರೆ ಉಚಿತವಾಗಿ ಪೆಟ್ರೋಲ್ ಬಂಕ್ ಗಳಲ್ಲಿ ಗಾಳಿಯನ್ನು ತುಂಬಿಸಿಕೊಳ್ಳಬಹುದು.