Pension Rules: ಯಾವುದೇ ವ್ಯಕ್ತಿಗೂ ಉದ್ಯೋಗ ಅನ್ನೋದು ಬಹಳ ಮುಖ್ಯವಾದ ಸ್ಥಾನ, ಯಾಕಂದ್ರೆ ಸರಿಯಾದ ಕೆಲಸ ಇದ್ದರೆ ಮಾತ್ರ ಜೀವನ ಶೈಲಿಯನ್ನು ಸರಿಯಾಗಿ ನಿರ್ವಹಿಸಲು ಸಾಧ್ಯ. ಕೆಲವೊಂದು ಕಂಪನಿಗಳಲ್ಲಿ ನಿವೃತ್ತಿ ನಿಧಿ ಎಂದೆನಿಸಿರುವ ಇಪಿಎಫ್ (EPFO) ಸೌಲಭ್ಯ ಕೂಡ ನೀಡ್ತಾರೆ. ಈ ಸೌಲಭ್ಯ ಅನೇಕ ಜನರಿಗೆ ಪ್ರಯೋಜನಗಳನ್ನು ನೀಡಿದೆ. ಉದ್ಯೋಗಿಗಳು ತಮ್ಮ ಮೂಲ ವೇತನದ 12% ದಷ್ಟು ಈ ನಿಧಿಗೆ ವ್ಯಯಿಸಿ ನಿವೃತ್ತಿಯ ನಂತರದಲ್ಲಿ ಬಡ್ಡಿಯೊಂದಿಗೆ ಈ ಹಣವನ್ನು ಹಿಂಪಡೆಯಬಹುದಾಗಿದೆ.
ತೆರಿಗೆ ಇದೆಯಾ?
ಇಪಿಎಫ್ ಮೊತ್ತಕ್ಕೆ ತೆರಿಗೆ ಬೀಳುತ್ತದೆಯೇ? ಎಂಬ ಪ್ರಶ್ನೆ ನಿಮ್ಮಲ್ಲಿ ಎದುರಾಗಬಹುದು.ನೀವು ಎಷ್ಟು ತೆರಿಗೆ ಪಾವತಿಸಬಹುದು ? ಹೌದು ಉದ್ಯೋಗಿಗಳು ತಮ್ಮ ಇಪಿಎಫ್ ಖಾತೆಗೆ ನೀಡಿದ ಮೊತ್ತ ಪಡೆಯಲು ಸಾಮಾನ್ಯವಾಗಿ ತೆರಿಗೆ ವಿಧಿಸಲಾಗುವುದಿಲ್ಲ, ಆದ್ರೆ ಸೆಕ್ಷನ್ 80C ಅಡಿಯಲ್ಲಿ ಕಡಿತ ಸಲ್ಲಿಸಬಹುದಾಗಿದ್ದು, ಈ ಸಂದರ್ಭದಲ್ಲಿ, 80C ಕ್ಲೈಮ್ ಮಾಡದಿದ್ದರೆ ಹೆಚ್ಚುವರಿ ತೆರಿಗೆಯನ್ನು ಪಾವತಿಸಬೇಕಾದ ಸಂದರ್ಭ ನಿಮಗೆ ಬರಬಹುದು.
ಲೆಕ್ಕ ಚಾರ ಹೇಗೆ?
ಉದ್ಯೋಗಿಯ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಪ್ರತಿಶತ ಹಣವನ್ನು ಇಪಿಎಫ್ ಖಾತೆಯಲ್ಲಿ ಠೇವಣಿ ಇಟ್ಟು ಬೇಕಾದ ಸಂದರ್ಭದಲ್ಲಿ ಹಣ ಪಡೆಯಬಹುದಾಗಿದೆ. ಅದರಲ್ಲಿ ಶೇಕಡಾ 12 ರಷ್ಟು ಕೊಡುಗೆಯಲ್ಲಿ, 8.33 ಶೇಕಡಾ ಮೊತ್ತವನ್ನು ಉದ್ಯೋಗಿ ಪಿಂಚಣಿ ಖಾತೆಯಲ್ಲಿ ಠೇವಣಿ ಇಟ್ಟು ಉಳಿದ ಮೊತ್ತವು ಇಪಿಎಫ್ ಖಾತೆಗೆ ಸೇರುತ್ತದೆ.
EPF ಹಿಂಪಡೆಯುವಿಕೆಗೆ ಅರ್ಹತೆ?
ಇಪಿಎಫ್ ಬ್ಯಾಲೆನ್ಸ್‌ನ್ನು ಹಿಂಪಡೆಯುವಿಕೆಯನ್ನು ಕೆಲವು ಸಂದರ್ಭಗಳಲ್ಲಿ ಮಾತ್ರ ಪಡೆಯಬಹುದಾಗಿದ್ದು, ವೈದ್ಯಕೀಯ ಉದ್ದೇಶಗಳಿಗೆ ಈ ಹಣ ಪಡೆದು ಕೊಳ್ಳ ಬಹುದಾಗಿದೆ. ಮದುವೆ, ಶಿಕ್ಷಣ, ಭೂಮಿಯ ಖರೀದಿ ಅಥವಾ ಮನೆ ಖರೀದಿ/ನಿರ್ಮಾಣ, ಅಥವಾ ನಿವೃತ್ತಿಯ ಮೊದಲು ಹಿಂಪಡೆಯ ಬಹುದಾಗಿದ್ದು ಉದ್ಯೋಗ ಮಾಡುವರಿಗೆ ಉತ್ತಮ ಅವಕಾಶ ಇದಾಗಿದೆ.