EPF Money Withdrawal In ATM And UPI: ಭಾರತದಲ್ಲಿ ಖಾಸಗಿ ಮತ್ತು ಸರ್ಕಾರೀ ಕೆಲಸ ಮಾಡುವ ಬಹುತೇಕ ಎಲ್ಲರೂ PF ಖಾತೆಯನ್ನು ಹೊಂದಿದ್ದಾರೆ. PF (ಪ್ರಾವಿಡೆಂಟ್ ಫಂಡ್) ಎಂದರೆ ನೌಕರರ ಭವಿಷ್ಯ ಭದ್ರತೆಗಾಗಿ EPFO (Employees’ Provident Fund Organisation) ನಿರ್ವಹಿಸುವ ಉಳಿತಾಯ ಯೋಜನೆ. ಇದರಲ್ಲಿ ನೌಕರ ಮತ್ತು ಉದ್ಯೋಗದಾತ ತಿಂಗಳಿಗೆ ನಿರ್ದಿಷ್ಟ ಶೇಕಡಾವಾರು ಹಣವನ್ನು ಜಮಾ ಮಾಡುತ್ತಾರೆ, PF ಹಣ ನಿವೃತ್ತಿಯ ನಿವೃತ್ತಿಯ ಸಮಯದಲ್ಲಿ ದೊಡ್ಡ ಮೊತ್ತವಾಗಿ ಸಿಗುತ್ತದೆ. ಇದೀಗ ಉದ್ಯೋಗಿಗಳ ಜೀವನವನ್ನು ಸುಲಭಗೊಳಿಸಲು ಕೇಂದ್ರ ಸರ್ಕಾರ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ATM ಮೂಲಕ PF ಹಣವನ್ನು ನೇರವಾಗಿ ಹಿಂಪಡೆಯಬಹುದಾಗಿದೆ.
PF ಎಂದರೇನು? PF Withdrawal ನಿಯಮಗಳೇನು?
PF ಎಂದರೇ, ನಿಮ್ಮ ಭವಿಷ್ಯದ ಭದ್ರತೆಗಾಗಿ ನಿಮ್ಮ ವೇತನದಿಂದ ಕಡಿತಗೊಳಿಸಿದ ಹಣ. ಕಾರ್ಮಿಕರ ಭವಿಷ್ಯ ನಿಧಿಯಲ್ಲಿ ತೊಡಗಸಿದ ಹಣವನ್ನು ಕೆಲ ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಅವಧಿಗೆ ಮುನ್ನ ಹಿಂಪಡೆಯಲು ಅವಕಾಶವಿದೆ. EPF ನಿರ್ವಹಣೆ ಮಾಡುವ ಕಾರ್ಮಿಕರ ಭವಿಷ್ಯ ನಿಧಿ ಪ್ರಾಧಿಕಾರ (Employees’ Provident Fund Organisation – EPFO), ಕೆಲವು ನಿಯಮವನ್ನು ರೂಪಿಸಿದೆ. ಮದುವೆ, ಶಿಕ್ಷಣ, ಹೊಸ ಮನೆ ಖರೀದಿ ಅಥವಾ ಮನೆ ನಿರ್ಮಾಣ, ಮನೆ ಕಟ್ಟಲು ನಿವೇಶನ ಖರೀದಿ, ಮನೆ ನವೀಕರಣ, ಮನೆ ಸಾಲ ಪಾವತಿ ಗೆ ಹಣವನ್ನು ಹಿಂಪಡೆಯಬಹುದು. ನಿವೃತ್ತಿಗೆ 12 ತಿಂಗಳು ಮುಂಚಿತವಾಗಿ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಭಾಗಶಃ EPF ಮೊತ್ತವನ್ನು ಹಿಂಪಡೆಯಲು ಅವಕಾಶವಿದೆ. ಇದೀಗ ನೀವು ATM ಮೂಲಕ UPI ಮೂಲಕ ಹಣವನ್ನು ಹಿಂಪಡೆಯಬಹುದಾಗಿದೆ.
ಈ ರೀತಿಯಾಗಿ PF ಹಣ ವಿಥ್ ಡ್ರಾ ಮಾಡಿಕೊಳ್ಳಿ
* ATM ಗೆ ಭೇಟಿ ಕೊಟ್ಟು, ನಿಮ್ಮ ಡೆಬಿಟ್ ಕಾರ್ಡ್ ಬಳಸಿ PF ಬ್ಯಾಲೆನ್ಸ್ ಚೆಕ್ ಮಾಡಿ ಮತ್ತು ವಿತ್ ಡ್ರಾ ಮಾಡಿಕೊಳ್ಳಿ.
* UPI ಆಪ್ (Phonepay, Googlepay) ಮೂಲಕ PF ಗೆ ಸಂಬಂಧಿಸಿದ ಆಯ್ಕೆಯನ್ನು ಬಳಸಿ Money Transfer ಮಾಡಿಕೊಳ್ಳಬಹುದಾಗಿದೆ.
ಅಗತ್ಯ ದಾಖಲೆಗಳು
* UAN ಸಕ್ರಿಯವಾಗಿರಬೇಕು
* ಆಧಾರ್-ಬ್ಯಾಂಕ್ ಲಿಂಕ್ ಕಡ್ಡಾಯ
* ಗುರುತು ಮತ್ತು ವಿಳಾಸ ಪುರಾವೆ
* ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆ
2025 ರ ಹೊಸ ನಿಯಮಗಳು
* ಭಾಗಶಃ ವಿಥ್ ಡ್ರಾವಲ್
ಮೊದಲು ಒಟ್ಟು PF ಬ್ಯಾಲೆನ್ಸ್ ನಲ್ಲಿ 50% ಮಾತ್ರ ಹಿಂಪಡೆಯಬಹುದಾಗಿತ್ತು. ಆದರೆ ಈಗ 75% ವರೆಗೆ ಯಾವುದೇ ಕಾರಣ ನೀಡದೆ ಹಿಂಪಡೆದುಕೊಳ್ಳಬಹುದು.
* ಅಡ್ವಾನ್ಸ್ ತಗೆದುಕೊಳ್ಳುವುದು
ಕನಿಷ್ಠ ಸೇವಾ ಅವಧಿ 5 ವರ್ಷ ಆಗಿತ್ತು. ಈಗ ಅದನ್ನು 1 ವರ್ಷಕ್ಕೆ ಇಳಿಕೆ ಮಾಡಲಾಗಿದೆ. ಉದಾಹರಣೆಗೆ ಮನೆ ಖರೀದಿ, ವೈದ್ಯಕೀಯ, ಮದುವೆಗಾಗಿ.
* ಸಂಪೂರ್ಣ ವಿಥ್ ಡ್ರಾವಲ್
ನಿವೃತ್ತಿ ಅಥವಾ ಉದ್ಯೋಗ ಬದಲಾವಣೆಯಲ್ಲಿ 12 ತಿಂಗಳ ಕಾಯುವ ಅವಧಿ. ಮೊದಲು 2 ತಿಂಗಳು ಆಗಿತ್ತು.
* ಆನ್ಲೈನ್ ಪ್ರಕ್ರಿಯೆ
ಯಾವುದೇ ದಾಖಲೆಗಳು ಇಲ್ಲದೆ ಎಲ್ಲಾ ಕ್ಲೈಮ್ ಗಳು ಆನ್‌ಲೈನ್ ಮೂಲಕ ಮಾಡಬಹುದಾಗಿದೆ. https://www.epfindia.gov.in/site_en/index.php ಗೆ ಲಾಗಿನ್ ಮಾಡಿಕೊಂಡು ಚೆಕ್ ಮಾಡಿಕೊಳ್ಳಬಹುದಾಗಿದೆ. ತುರ್ತು ಸಂದರ್ಭ ದಲ್ಲಿ (ಉದಾ, ಆಸ್ಪತ್ರೆ ಬಿಲ್, ಮಕ್ಕಳ ಶಿಕ್ಷಣ) ಹಣ ಸುಲಭವಾಗಿ ಲಭ್ಯವಾಗುತ್ತದೆ. ವಿಶೇಷವಾಗಿ ಖಾಸಗಿ ಕ್ಷೇತ್ರದ ಉದ್ಯೋಗಿಗಳಿಗೆ ಉಪಯುಕ್ತವಾಗಿದೆ, ಏಕೆಂದರೆ ಅವರ PF ಬ್ಯಾಲೆನ್ಸ್ ಹೆಚ್ಚಾಗಿರುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

