Smartphone: ಎಲ್ಲೆಂದರಲ್ಲಿ ಫೋನ್ ಚಾರ್ಜ್ ಗೆ ಹಾಕುವವರಿಗೆ ಆಘಾತ, ಕೂಡಲೇ ಗಮನಿಸಿ

ಐಲು ಐಲು ಕೈಲಿದ್ರೆ ಮೊಬೈಲೂ ಸ್ಟೈಲು ಸ್ಟೈಲು ಕೈಲಿದ್ರೆ ಮೊಬೈಲೂ ಸದ್ಯ ಹೀಗಾಗಿದ್ದಾರೆ ನಮ್ಮ ಯುವ ಜನಾಂಕ. ದಿನನಿತ್ಯ ಏನನ್ನು ಬಿಟ್ಟರು ನಮ್ಮ ಯುವ ಪೀಳಿಗೆಗಳು ಮೊಬೈಲ್ ಗಳನ್ನು ಮಾತ್ರ ಬಿಡುವುದಿಲ್ಲ. ಸದ್ಯ ಮೊಬೈಲ್​ ಯುಗದಲ್ಲಿ ನಾವಿದ್ದು ಹೀಗಾಗಿಯೇ Smartphone  ಎಲ್ಲರ ಕೈಯಲ್ಲಿ ಇಂದು ಕಾಣಬಹುದಾಗಿದೆ.

ಹೌದು ಆಧುನಿಕ ಜೀವನಕ್ಕೆ ಸರಿಹೊಂದುವಂತೆ ಕುಳಿತಲ್ಲಿಂದಲೇ ಎಲ್ಲಾ ಕಾರ್ಯವನ್ನು ಒಂದು ಟಚ್​ ಮೂಲಕ ಮಾಡಬಹುದಾಗಿದ್ದು ಈ ಕಾರಣಕ್ಕೆ ಮೊಬೈಲ್​ ಬಳಕೆದಾರರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ ಮೊಬೈಲ್​ಗಳಿಂದ ಸೂಸುವ ವಿಕಿರಣಗಳು ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತಿದ್ದು ಅತಿಯಾದ ಸ್ಮಾರ್ಟ್​ಫೋನ್ ​ಬಳಕೆಯಿಂದ ಭಯಾನಕ ರೋಗಗಳು ಕಾಣಿಸಿಕೊಳ್ಳುತ್ತಿದೆ ಎನ್ನುತ್ತವೆ ಕೆಲ ಅಧ್ಯಾಯನಗಳು.

ಸದ್ಯ ಇಂದು ಮೊಬೈಲ್ ಬಗ್ಗೆ ಮಾತನಾಡಲು ಒಂದು ಕಾರಣವಿದೆ. ಹೌದು ಸ್ಮಾರ್ಟ್​ಫೋನ್​ ಬಳಕೆ ಮಾಡುವವರೆಲ್ಲಾ ಓದಲೇಬೇಕಾದ ಸುದ್ದಿ ಇದಾಗಿದ್ದು ಅದರಲ್ಲೂ ಕೂಡ ಎಲ್ಲೆಂದರಲ್ಲಿ ಮೊಬೈಲ್​ಫೋನ್​ ಚಾರ್ಜಿಂಗ್​ಗೆ ಹಾಕುವವರು ತಪ್ಪದೇ ಓದಬೇಕಾದ ಮಾಹಿತಿ ಇದಾಗಿದೆ. ಏಕೆಂದರೆ ಇಲ್ಲೊಬ್ಬರು ಪಬ್ಲಿಕ್ ನಲ್ಲಿ Mobile phone ಚಾರ್ಜ್​ ಮಾಡಲು ಹೋಗಿ ಲಕ್ಷಾಂತರ ರೂಪಾಯಿಯನ್ನೇ ಕಳೆದುಕೊಂಡಿದ್ದಾರೆ.

ಹೀಗೆ ಕಳೆದುಕೊಂಡಿದ್ದು ಯಾರೋ ಅವಿದ್ಯಾವಂತರಲ್ಲ ಅವರು ಕಂಪನಿಯೊಂದರ ಸಿಇಒ. ಹೌದು ಹೈದರಾಬಾದ್‌ನ ಕಂಪನಿಯೊಂದರ ಸಿಇಒ ಪಬ್ಲಿಕ್ ನಲ್ಲಿ ಯುಎಸ್‌ಬಿ ಪೋರ್ಟ್ ಮೂಲಕ ಮೊಬೈಲ್​ಫೋನ್​ ಚಾರ್ಜಿಂಗ್​ಗೆ ಹಾಕಿದ್ದಯ ಈ ಸಂದರ್ಭದಲ್ಲಿ ಹ್ಯಾಕರ್‌ಗಳು ಅವರ ಡೇಟಾ ಕದ್ದು ಈ ಮೂಲಕವಾಗಿ ಆನ್‌ಲೈನ್ ಬ್ಯಾಂಕಿಂಗ್ ನಡೆಸಿ ಸರಿ ಸುಮಾರು 16 ಲಕ್ಷ ರೂ. ಎಗರಿಸಿದ್ದಾರೆ. ಈ ಕುರಿತು ಸೈಬರ್ ಸೆಲ್​ನಲ್ಲಿ ದೂರು ದಾಖಲಾಗಿದ್ದು ಅಂದಹಾಗೆ ಹೀಗಾಗಲು ಅವರ ಫೋನ್ ಜ್ಯೂಸ್ ಜ್ಯಾಕಿಂಗ್​ಗೆ ಒಳಗಾಗಿತ್ತಂತೆ.

ಈ ಜ್ಯೂಸ್ ಜ್ಯಾಕಿಂಗ್​ ಏನು ಎಂದು ನೋಡುವುದಾದರೆ ಇದು ಕೂಡ ಒಂದು ರೀತಿಯ ಹ್ಯಾಕಿಂಗ್. ಹೌದು ವಿಮಾನ ನಿಲ್ದಾಣ ರೈಲು ನಿಲ್ದಾಣ ಬಸ್ ನಿಲ್ದಾಣ ಅಥವಾ ಮಾಲ್‌ ಹೀಗೆ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಬಳಸುವಂತಹ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಮೂಲಕ ಅಪರಾಧಿಗಳು ಯಾವುದೇ ಮೊಬೈಲ್ ಲ್ಯಾಪ್‌ಟಾಪ್ ಟ್ಯಾಬ್ಲೆಟ್ ಅಥವಾ ಇತರ ಸಾಧನಗಳಲ್ಲಿ ಮಾಲ್‌ವೇರ್ ಅಥವಾ ವೈರಸ್ ಸ್ಥಾಪಿಸಿ ವೈಯಕ್ತಿಕ ಡೇಟಾ ಕಳವು ಮಾಡುವುದನ್ನು ಈ ಜ್ಯೂಸ್ ಜ್ಯಾಕಿಂಗ್ ಎಂದು ಹೇಳುತ್ತಾರೆ.

Join Nadunudi News WhatsApp Group

Image Credit: iSTOCK

ಹೌದು ಸ್ಮಾರ್ಟ್‌ಫೋನ್​ ಡೇಟಾವನ್ನು ಯುಎಸ್‌ಬಿ ಕೇಬಲ್‌ನಿಂದ ವರ್ಗಾವಣೆ ಮಾಡುವುದು ಸಾಮಾನ್ಯ ಸಂಗತಿಯಾಗಿದ್ದು ಸೈಬರ್ ವಂಚಕರು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಹೀಗೆ ಯುಎಸ್​ಬಿ ಮುಖೇನ ಸ್ಮಾರ್ಟ್​ಫೋನ್ ಡೇಟಾ ಕದಿಯುತ್ತಾರಂತೆ. ಅಂಥವರು ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಚಾರ್ಜಿಂಗ್ ಪೋರ್ಟ್‌ ಇರಿಸಿದ್ದು ಅವುಗಳಿಂದ ಯಾರಾದರೂ ಎಲೆಕ್ಟ್ರಾನಿಕ್ ಡಿವೈಸ್ ಚಾರ್ಜಿಂಗ್ ಮಾಡಿಕೊಳ್ಳುವಾಗ ಅದರಲ್ಲಿನ ಡೇಟಾ ಕಳವು ಮಾಡಿಬಿಡುತ್ತಾರೆ.

ಇನ್ನು ತಾವು ಇರಿಸಿದಂತಹ ಯುಎಸ್​ಬಿ ಪೋರ್ಟ್​ಗಳಿಂದ ಯಾರಾದರೂ ಚಾರ್ಜ್​ ಮಾಡಿಕೊಳ್ಳಲು ಮುಂದಾದರೆ ಈ ಸೈಬರ್ ವಂಚಕರು ಅಂಥಹ ಎಲೆಕ್ಟ್ರಾನಿಕ್ ಉಪಕರಣಕ್ಕೆ ವೈರಸ್ ಹಬ್ಬಿಸಲಿದ್ದು ಅಥವಾ ಆ ಉಪಕರಣಗಳಲ್ಲಿನ ಚಟುವಟಿಕೆಗಳನ್ನು ರೆಕಾರ್ಡ್ ಮಾಡಿ ಕಳುಹಿಸುವ ಕಳ್ಳ ಅಪ್ಲಿಕೇಷನ್‌ ಇನ್‌ಸ್ಟಾಲ್ ಆಗುವಂತೆ ಮಾಡುತ್ತಾರೆ. ಹೌದು ಇದರಿಂದಾಗಿ ಆ ಎಲೆಕ್ಟ್ರಾನಿಕ್ ಡಿವೈಸ್​ನಲ್ಲಿರುವ ಎಲ್ಲ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದು ತದ ನಂತರ ಅದೇ ಡೇಟಾ ಬಳಸಿ ಆನ್​​ಲೈನ್​ ಬ್ಯಾಂಕಿಂಗ್ ನಡೆಸಿ ಹಣ ಎಗರಿಸುತ್ತಾರೆ.

ದಯವಿಟ್ಟು ತಾವುಗಳು ಸಾರ್ವಜನಿಕ ಪ್ರದೇಶಗಳಲ್ಲಿ ಸಿಗುವಂತಹ ಡೇಟಾ ಕೇಬಲ್‌ಗಳಲ್ಲಿ ಮೊಬೈಲ್​​​ಫೋನ್​ ಯಾವತ್ತೂ ಚಾರ್ಜ್​ ಮಾಡಿಕೊಳ್ಳಲು ಹೋಗಬೇಡಿ. ಹೌದು ಆದರೆ ಎಸಿ ಪವರ್​ ಸಾಕೆಟ್ ಮೂಲಕ ಚಾರ್ಜಿಂಗ್ ಮಾಡಿಕೊಳ್ಳಬಹುದಾಗಿದ್ದು ಮಾಮೂಲಿ ಚಾರ್ಜರ್ ಮೂಲಕ ಡೇಟಾ ಕಳವು ಸಾಧ್ಯವಿಲ್ಲ. ದಯವಿಟ್ಟು ಈ ವಿಚಾರವನ್ನು ಇತರರಿಗೂ ಕೂಡ ತಿಳಿಸಿ.

Join Nadunudi News WhatsApp Group