Mobile Hack: ನಿಮ್ಮ ಮೊಬೈಲ್ ಹ್ಯಾಕ್ ಆಗಿದೆಯೋ ಅಥವಾ ಇಲ್ಲವೋ ಎನ್ನುವುದನ್ನು ತಿಳಿಯುವುದು ಹೇಗೆ…? ಇಲ್ಲಿದೆ ಡೀಟೇಲ್ಸ್.

ನಿಮ್ಮ ಮೊಬೈಲ್ ಫೋನ್ ಹ್ಯಾಕ್ ಆಗಿದೆಯೋ ಅಥವಾ ಇಲ್ಲವೋ ಎನ್ನುವುದನ್ನು ತಿಳಿಯುವ ಸುಲಭ ಮಾರ್ಗ.

Phone Hacking Check: ಈ ಡಿಜಿಟಲ್ ದುನಿಯಾದಲ್ಲಿ ಸದ್ಯ Mobile ಫೋನ್ ಗಳ ಬಳಕೆ ಹೆಚ್ಚಿದೆ ಎನ್ನಬಹುದು. ಜನರು ಹೆಚ್ಚಾಗಿ ಮೊಬೈಲ್ ಅನ್ನು ಬಳಸುತ್ತಿದ್ದಾರೆ. ಪ್ರಸ್ತುತ ಮೊಬೈಲ್ ಮಾನವನ ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು. ಮೊಬೈಲ್ ನ ಉಪಯೋಗ ಹೆಚ್ಚುತ್ತಿದ್ದಂತೆ ಅದರ ಮೇಲಿನ ಬೇಡಿಕೆ ಕೂಡ ಹೆಚ್ಚಾಗುತ್ತಾ ಹೋಗುತ್ತಿದೆ.

ಇನ್ನು ಮೊಬೈಲ್ ಬಳಸುವುದು ಎಷ್ಟು ಉಪಯೋಗಕಾರಿಯೋ ಕೆಲವೊಮ್ಮೆ ಅಷ್ಟೇ ಅಪಾಯವನ್ನು ಕೂಡ ನೀಡುತ್ತದೆ. ಕೆಲವೊಮ್ಮೆ ಮೊಬೈಲ್ ಫೋನ್ ಗಳನ್ನೂ ಹ್ಯಾಕ್ ಮಾಡುವುದುಂಟು. ಹ್ಯಾಕ್ ಮಾಡಿದಾಗ ಬಳಕೆದಾರರಿಗೆ ಹೆಚ್ಚಿನ ತೊಂದರೆ ಆಗುತ್ತದೆ. ಇದೀಗ ನಿಮ್ಮ ಮೊಬೈಲ್ ಫೋನ್ ಹ್ಯಾಕ್ ಆಗಿದೆಯೋ ಅಥವಾ ಇಲ್ಲವೋ ಎನ್ನುವುದನ್ನು ತಿಳಿಯುವ ಸುಲಭ ಮಾರ್ಗದ ಬಗ್ಗೆ ಮಾಹಿತಿ ಇಲ್ಲಿದೆ.

Mobile Hack
Image Credit: Economictimes

ನಿಮ್ಮ ಮೊಬೈಲ್ ಹ್ಯಾಕ್ ಆಗಿದೆಯೋ ಅಥವಾ ಇಲ್ಲವೋ ಎನ್ನುವುದನ್ನು ತಿಳಿಯುವುದು ಹೇಗೆ..?
*ಬ್ಯಾಕ್ ಗ್ರೌಂಡ್ ನಲ್ಲಿ ರನ್ ಆಗುತ್ತಿರುವ ಹೆಚ್ಚಿನ ಅಪ್ಲಿಕೇಶನ್ ಗಳು ನಿಮ್ಮ ಮೊಬೈಲ್ ನ ಬ್ಯಾಟರಿ ಸಾಮರ್ಥ್ಯವನ್ನು ಕಡಿಮೆ ಮಾಡಬಹುದು. ಮಾಲ್ವೇರ್ ಅಥವಾ ದುಷ್ಪರಿಣಾಮಕಾರಿ ಅಪ್ಲಿಕೇಶನ್ ಗಳು ಕೆಲವೊಮ್ಮೆ ದೋಷಪೂರಿತ ಕೋಡ್ ಅನ್ನು ಬಳಸುವ ಸಾಧ್ಯತೆ ಇರುತ್ತದೆ.

*ನಿಮ್ಮ ಫೋನ್ ನೀವು ಉಪಯೋಗಿಸದೆ ಹೆಚ್ಚು ಬಿಸಿಯಾಗುತ್ತಿದ್ದರೆ ನಿಮ್ಮ ಫೋನ್ ಹ್ಯಾಕರ್ ನಿಯಂತ್ರಣದಲ್ಲಿದೆ ಎಂದರ್ಥ.

*ಇನ್ನು ನೀವು ಬಳಸುತ್ತಿರುವ ಸೋಶಿಯಲ್ ಮೀಡಿಯಾದಲ್ಲಿ ನೀವು ಪೋಸ್ಟ್ ಮಾಡಿದ ಪೋಸ್ಟ್ ಗಳನ್ನೂ ಹೊರತುಪಡಿಸಿ ಇನ್ನಿತರ ಪೋಸ್ಟ್ ನಿಮ್ಮ ಖಾತೆಯಲ್ಲಿದ್ದರೆ ಎಚ್ಚರವಾಗಿರಿ.

Join Nadunudi News WhatsApp Group

Phone Hacking Tip
Image Credit: Securityintelligence

*ಇನ್ನು ನಿಮ್ಮ ಫೋನ್ ನಿಧಾನವಾಗಿ ಕಾರ್ಯನಿರ್ವಹಿಸುತ್ತಿದೆ ಅದು ಹ್ಯಾಕರ್ ನ ನಿಯಂತ್ರಣದಲ್ಲಿದೆ ಎಂದರ್ಥ.

*ಕೆಲವೊಮ್ಮೆ ನೀವು ಅಪ್ಲಿಕೇಶನ್ ಅನ್ನು ಬಳಸುತ್ತಿದ್ದಾರೆ ಅದು ಕ್ರ್ಯಾಶ್ ಆಗುತ್ತವೆ ಅಥವಾ ಲೋಡ್ ಆಗುವುದಕ್ಕೆ ತುಂಬಾ ಸಮಯದ ತೆಗೆದುಕೊಳ್ಳುತ್ತದೆ.

*ನಕಲಿ ವೈರಸ್ ಸಂದೇಶ, ಪಾಪ್ ಅಪ್ ಸಂದೇಶಗಳು ಬಂದರೆ ಎಚ್ಚರವಹಿಸಿ.

*ಇನ್ನು ನಿಮ್ಮ ಮೊಬೈಲ್ ನಲ್ಲಿ ಇರುವ ಅಪ್ಲಿಕೇಶನ್ ಗಳ ಬಗ್ಗೆ ಗಮನ ಹರಿಸಿ. ನಿಮ್ಮ ಗಮನಕ್ಕೆ ಬರದೇ ಹೆಚ್ಚುವರಿ ಅಪ್ಲಿಕೇಶನ್ ಗಳು ಡೌನ್ಲೋಡ್ ಆಗಿರಬಹುದು.

*ಇನ್ನು ನಿಮ್ಮ ಮೊಬೈಲ್ ಡೇಟಾ ಬಳಕೆಯ ಬಗ್ಗೆ ಕೂಡ ಗಮನಹರಿಸಿ. ಹೆಚ್ಚುವರಿ ಡೇಟಾ ಬಳಕೆಯಾಗುತ್ತಿದ್ದರೆ ನಿಮ್ಮ ಮೊಬೈಲ್ ಅಪಾಯದಲ್ಲಿದೆ ಎಂದರ್ಥ.

Phone Hack
Image Credit: Timesnownews

*ಇನ್ನು ಗ್ಯಾಲರಿ ಬಗ್ಗೆ ಕೂಡ ಎಚ್ಚರಿಕೆ ವ್ಹಸಬೇಕು. ಹೆಚ್ಚುವರಿಯಾಗಿ ನಿಮ್ಮ ಗ್ಯಾಲರಿಯಲ್ಲಿ ಫೋಟೋಗಳು ಬಂದರೆ ಎಚ್ಚರವಹಿಸಿ.

*ವಿಚಿತ್ರ ಐಕಾನ್, ವಿಭಿನ್ನ ಅಕ್ಷರ ಸಂಯೋಜನೆಯೊಂದಿಗೆ ಸಂದೇಶ ಬಂದರೆ ನಿಮ್ಮ ಫೋನ್ ಹ್ಯಾಕ್ ಆಗಿದೆ ಎಂದರ್ಥ.

Join Nadunudi News WhatsApp Group