ಸದ್ಯ ತಂತ್ರಜ್ಞಾನ ಮುಂದುವರೆದಿದ್ದು ಜನರು ಬಹುತೇಕ ತಮ್ಮ ಎಲ್ಲ ವ್ಯವಹಾರಗಳನ್ನ ಮೊಬೈಲ್ ನಲ್ಲಿಯೇ ಮಾಡುತ್ತಾರೆ. ಹೌದು ಹಣದ ಬಹುತೇಕ ಎಲ್ಲಾ ವ್ಯವಹಾರವನ್ನ ಜನರು ಈಗ ಮೊಬೈಲ್ ಮೂಲಕ ಮಾಡುತ್ತಾರೆ. ಅನೇಕ ಅಪ್ಲಿಕೇಶನ್ ಗಳು ಬಂದಿದ್ದು ಜನರು ಅಂತಹ ವ್ಯವಹಾರವನ್ನ ಮಾಡಲು ಈ ಅಪ್ಲಿಕೇಶನ್ ಗಳನ್ನ ಬಳಸುತ್ತಾರೆ. ಇನ್ನು ಜನರು ಹೆಚ್ಚಾಗಿ ಹಣವನ್ನ ವರ್ಗಾವಣೆ ಮಾಡಲು, ರಿಚಾರ್ಜ್ ಮಾಡಲು ಮತ್ತು ಇತರೆ ವ್ಯವಹಾರಗಳಿಗೆ ಫೋನ್ ಪೆ ಮತ್ತು ಇತರೆ ಅಪ್ಲಿಕೇಶನ್ ಗಳನ್ನ ಬಳಸುತ್ತಾರೆ ಎಂದು ಹೇಳಬಹುದು. ಇನ್ನು ಈಗ ಜನರಿಗೆ ಶಾಕಿಂಗ್ ಬಂದಿದೆ ಎಂದು ಹೇಳಿದರೆ ತಪ್ಪಾಗಲ್ಲ. ಫೋನ್ ಪೆ ಬಳಸುವ ಎಲ್ಲಾ ಜನರಿಗೆ ಈಗ ಶಾಕಿಂಗ್ ಸುದ್ದಿ ಬಂದಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಹೌದು ಫೋನ್ ಪೆ ಬಳಕೆ ಮಾಡುವವರು ಇನ್ನುಮುಂದೆ ಶುಲ್ಕವನ್ನ ಕಡ್ಡಾಯವಾಗಿ ಕಟ್ಟಲೇಬೇಕು. ಹೌದು ಫೋನ್ ಪೆ ಬಳಕೆ ಮಾಡುವವರಿಗೆ ಹೊಸ ನಿಯಮವನ್ನ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಏನದು ಹೊಸ ನಿಯಮ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಮೊಬೈಲ್ ಮತ್ತು ಡಿಟಿಎಚ್ ರೀಚಾರ್ಜ್ ಮಾಡಲು, ನೀರು ಮತ್ತು ವಿದ್ಯುತ್ ಬಿಲ್ ಪಾವತಿಸಲು, ದಿನಸಿ ಅಂಗಡಿಗಳಿಂದ ವಸ್ತುಗಳನ್ನು ಖರೀದಿಸಲು, ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಅಥವಾ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಲು ನೀವು ಫೋನ್‌ಪೇ ಆಪ್ ಬಳಸುತ್ತಿದ್ದರೆ ನಿಮಗೆ ಬೇಸರದ ವಿಷಯ ಬಂದಿದೆ.
ಹೌದು ಈಗ ಡಿಜಿಟಲ್ ಪಾವತಿ ಕಂಪನಿ ಫೋನ್ ಪೇ ಮೂಲಕ ಮೊಬೈಲ್ ರೀಚಾರ್ಜ್ ಬಳಸುವುದು ದುಬಾರಿಯಾಗಿದೆ. ಫೋನ್ ಪೇ ಕೆಲವು ಬಳಕೆದಾರರಿಂದ ಮೊಬೈಲ್ ರೀಚಾರ್ಜ್‌ಗಾಗಿ 1 ರಿಂದ 2 ರೂಪಾಯಿಗಳ ಪ್ಲಾಟ್‌ಫಾರ್ಮ್ ಶುಲ್ಕವನ್ನ ವಿಧಿಸಲು ಆರಂಭಿಸಿದೆ. ವಿಶೇಷವೆಂದರೆ ಈ ಹೆಚ್ಚುವರಿ ಶುಲ್ಕವನ್ನ ಯಾವುದೇ ಪಾವತಿ ವಿಧಾನದ ಮೂಲಕ ನೀವು ರಿಚಾರ್ಜ್ ಮಾಡಿದರೆ ನೀವು ಪಾವತಿ ಮಾಡಬೇಕು. ಇನ್ನು 50 ರೂಪಾಯಿಗಿಂತ ಹೆಚ್ಚು ಮೊಬೈಲ್ ರಿಚಾರ್ಜ್ ಮಾಡಿದರೆ ಆ ವಹಿವಾಟಿನ ಮೇಲೆ 1 ರಿಂದ 2 ರೂಪಾಯಿ ಪ್ರೊಸೆಸಿಂಗ್ ಶುಲ್ಕ ವಿಧಿಸಲಾಗುವುದು ಎಂದು ಕಂಪನಿ ಹೇಳಿದೆ. ಇನ್ನು 50 ರೂಪಾಯಿಗಿಂತ ಕಡಿಮೆ ರೀಚಾರ್ಜ್ ಗಳಿಗೆ ಶುಲ್ಕ ವಿಧಿಸಲಾಗುವುದಿಲ್ಲ.
50 ರೂಪಾಯಿಯಿಂದ 100 ರೂಪಾಯಿ ನಡುವಿನ ರೀಚಾರ್ಜ್ ಗಳಿಗೆ 1 ರೂಪಾಯಿ ಮತ್ತು ರೂಪಾಯಿ 100 ಕ್ಕಿಂತ ಹೆಚ್ಚಕ್ಕೆ ಎರಡು ರೂಪಾಯಿ ವಿಧಿಸಲಾಗುತ್ತದೆ. ಇನ್ನು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ವ್ಯಾಲೆಟ್ನಿಂದ 50 ರೂಪಾಯಿಗಿಂತ ಹೆಚ್ಚಿನ ಮೌಲ್ಯದ ವಹಿವಾಟು ಮಾಡಿದರೆ ಫೋನ್ ಪೇ ಶುಲ್ಕವನ್ನು ವಿಧಿಸುತ್ತಿದೆ. ಸದ್ಯ ಇದು ಸಣ್ಣ ಪ್ರಮಾಣದ ಪ್ರಯೋಗ ಎಂದು ಕಂಪನಿ ಹೇಳಿದೆ. ಏನೇ ಆಗಲಿ ಇದು ಜನರ ಜೇಬಿಗೆ ಕತ್ತರಿ ಬೀಳುವಂತೆ ಮಾಡಿದೆ ಎಂದು ಹೇಳಬಹುದು, ದೇಶದಲ್ಲಿ ಏರಿಕೆ ಆಗುತ್ತಿರುವ ವಸ್ತುಗಳ ನಡುವೆ ಈ ಶುಲ್ಕ ಜನರ ಬೇಸರಕ್ಕೆ ಕಾರಣವಾಗಿದೆ. ಸ್ನೇಹಿತರೆ ಈ ಮಾಹಿತಿಯನ್ನ ಫೋನ್ ಪೆ ಬಳಕೆ ಮಾಡುವ ಎಲ್ಲರಿಗೂ ತಲುಪಿಸಿ.