PhonePe: PhonePe ಬಳಸುವವರಿಗೆ ಇಂದಿನಿಂದ ಹೊಸ ಸೇವೆ, ಇನ್ನುಮುಂದೆ ಯಾವುದೇ ಕಚೇರಿಗೆ ಹೋಗುವ ಅಗತ್ಯವಿಲ್ಲ.
ಫೋನ್ ಪೇ ತನ್ನ ಬಳಕೆದಾರರಿಗೆ ಹೊಸ ಸೇವೆಯನ್ನು ಆರಂಭಿಸಿದೆ.
PhonePe New Facility: ಜನಪ್ರಿಯ ಯುಪಿಐ ಪಾವತಿಯಲ್ಲಿ ಫೋನ್ ಪೇ (PhonePe) ಕೂಡ ಒಂದಾಗಿದ್ದು ತನ್ನ ಗ್ರಾಹಕರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಯುಪಿಐ ಪಾವತಿ ಅಪ್ಲಿಕೇಶನ್ ಗಳು ಬಳಕೆದಾರರಿಗೆ ಹೆಚ್ಚಿನ ಸೌಲಭ್ಯವನ್ನು ನೀಡಲು ಮುಂದಾಗಿದೆ.
ದಿನೇ ದಿನೇ ತನ್ನ ಸೇವೆಯನ್ನು ವಿಸ್ತರಿಸುತ್ತ ಹೋಗುತ್ತಿದೆ. ಇದೀಗ ಫೋನ್ ಪೆ ತನ್ನ ಬಳಕೆದಾರರಿಗಾಗಿ ಹೊಸ ಸೌಲಭ್ಯ ನೀಡಲು ಮುಂದಾಗಿದೆ. ನೀವು ಫೋನ್ ಪೆ ಬಳಕೆದಾರರಾಗಿದ್ದರೆ ಈ ಸೌಲಭ್ಯದ ಪ್ರಯೋಜನವನ್ನು ಪಡೆಯಬಹುದು.
ಬಳಕೆದಾರರಿಗೆ ಫೋನ್ ಪೆ ಹೊಸ ಸೌಲಭ್ಯ
ಡಿಜಿಟಲ್ ಪಾವತಿ ಪ್ಲಾಟ್ ಫಾರ್ಮ್ ಫೋನ್ ಪೆನಲ್ಲಿ ಈಗ ಇನ್ ಕಾಮ್ ಟ್ಯಾಕ್ಸ್ ಎಂಬ ಹೊಸ ಫೀಚರ್ ಅನ್ನು ಆರಂಭಿಸಲಾಗಿದೆ. ಬಹಳ ಸುಲಭವಾಗಿ ತೆರಿಗೆ ಪಾವತಿಸಲು ಇದು ಸಹಾಯವಾಗುತ್ತದೆ. ಸರ್ಕಾರ ಆದಾಯ ತೆರಿಗೆ ಪಾವತಿ ವ್ಯವಸ್ಥೆಯನ್ನು ಹೆಚ್ಚು ಹೆಚ್ಚು ಸರಳಗೊಳಿಸುತ್ತಾ ಬಂದಿದೆ .
ಈಗ ಫೋನ್ ಪೇ ನಲ್ಲಿ ಇಂಕಮ್ ಟ್ಯಾಕ್ಸ್ ಪೇಮೆಂಟ್ ಎಂಬ ಹೊಸ ಫೀಚರ್ ಆರಂಭವಾಗಿದೆ. ಇದರಲ್ಲಿ ಸೆಲ್ಫ್ ಏಸೇಸಮೆಟ್ ಅಡ್ವಾನ್ಸ್ ಟ್ಯಾಕ್ಸ್ ಅನ್ನು ಪಾವತಿಸಬಹುದು. ಇನ್ ಕಮ್ ಟ್ಯಾಕ್ಸ್ ಪೋರ್ಟಲ್ ಗೆ ಲಾಗಿನ್ ಆಗದೆ ಫೋನ್ ಫೆ ಅಪ್ ನಲ್ಲಿರುವ ಹೊಸ ಫೀಚರ್ ಮೂಲಕವೇ ನೇರವಾಗಿ ತೆರಿಗೆ ಪಾವತಿಸಲು ಸಾಧ್ಯವಾಗಲಿದೆ.
ಇನ್ನುಮುಂದೆ ಫೋನ್ ಪೆ ನಲ್ಲಿಯೇ ಇನ್ ಕಮ್ ಟ್ಯಾಕ್ಸ್ ಸಹ ಪಾವತಿ ಮಾಡಬಹುದು
ಇನ್ ಕಮ್ ಟ್ಯಾಕ್ಸ್ ಪೇಮೆಂಟ್ ಎಂಬ ಹೊಸ ಫೀಚರ್ ಗಾಗಿ ಪೇಮೆಂಟ್ ಎಂಬ ಡಿಜಿಟಲ್ ಬಿ 2 ಬಿ ಬಿಸಿನೆಸ್ ಸಂಸ್ಥೆ ಜೊತೆ ಫೋನ್ ಪೆ ಸಹಭಾಗಿತ್ವ ಹೊಂದಿದೆ. ಇನ್ ಕಮ್ ಟ್ಯಾಕ್ಸ್ ಇಲಾಖೆಯ ಪೋರ್ಟಲ್ ನಲ್ಲಿ ಐಟಿಆರ್ ಫೈಲಿಂಗ್ ಮಾಡಲು ಲೋಡಿಂಗ್ ಸಮಸ್ಯೆಗಳಿವೆ ಎಂದು ಬಹಳ ಮಂದಿ ದೂರು ನೀಡಿದ್ದಾರೆ.
ಇದನ್ನು ತಪ್ಪಿಸಲು ಫೋನ್ ಪೆ ನಲ್ಲಿರುವ ಇನ್ ಕಮ್ ಟ್ಯಾಕ್ಸ್ ಫೀಚರ್ ಅನ್ನು ಬಳಸಿಕೊಳ್ಳಬಹುದು. ಫೋನ್ ಪೆನಲ್ಲಿ ಕ್ರೆಡಿಟ್ ಕಾರ್ಡ್ ಅಥವಾ ಯುಪಿಏ ಬಳಸಿ ತೆರಿಗೆ ಹಣ ಪಾವತಿಸಬಹುದು. ಕೆಲವು ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದರೆ ರಿವಾರ್ಡ್ ಕೂಡ ಸಿಗುತ್ತದೆ.
ಫೋನ್ ಫೇನಲ್ಲಿ ತೆರಿಗೆ ಪಾವತಿ ಮಾಡುವುದು ಹೇಗೆ
* ಮೊಬೈಲ್ ನಲ್ಲಿ ಮೊದಲು ಫೋನ್ ಪೆ ತೆರೆಯಬೇಕು
* ನಂತರ ಮುಖ್ಯಪುಟದಲ್ಲಿ ರಿಚಾರ್ಜ್ ಅಂಡ್ ಪೆ ಬೈಲ್ಸ್ ಸ್ಲಾಟ್ ನಲ್ಲಿ ಇನ್ ಕಮ್ ಟ್ಯಾಕ್ಸ್ ಫೀಚರ್ ಕಾಣಬಹುದು. ಅದನ್ನು ಕ್ಲಿಕ್ ಮಾಡಿ.
* ನೀವು ಅಸೆಸ್ಮೆಂಟ್ ವರ್ಷದಲ್ಲಿ ಯಾವ ತೆರಿಗೆ ಪಾವತಿಸಬೇಕು ಎಂಬುದನ್ನು ಆಯ್ದುಕೊಳ್ಳಿ.
* ಪ್ಯಾನ್ ಕಾರ್ಡ್ ವಿವರ ನೀಡಿ
* ತೆರಿಗೆ ಮೊತ್ತ ನಮೂದಿಸಿ ಕ್ರೆಡಿಟ್ ಕಾರ್ಡ್ ಅಥವಾ ಯುಪಿಏ ಮೂಲಕ ಹಣ ಪಾವತಿಸಿ ಎರಡು ಕಾರ್ಯ ದಿನಗಳೊಳಗೆ ನೀವು ಪಾವತಿಸಿದ ಹಣ ಆದಾಯ ತೆರಿಗೆ ಇಲಾಖೆಗೆ ಸಲ್ಲಿಕೆಯಾಗುತ್ತದೆ.