ಕೆಲವೊಮ್ಮೆ ಈ ಭೂಮಿಯ ಮೇಲೆ ನಡೆಯುವ ಕೆಲವು ಘಟನೆಗಳು ನಮಗೆ ಶಾಕ್ ಆಗುವ ರೀತಿ ಮಾಡುತ್ತದೆ ಎಂದು ಹೇಳಬಹುದು. ಈ ಭೂಮಿಯ ಪ್ರತಿದಿನ ಅದೆಷ್ಟೋ ಮಕ್ಕಳು ಹುಟ್ಟುತ್ತಾರೆ ಮತ್ತು ಅದೆಷ್ಟೋ ಜನರು ಸಾಯುತ್ತಾರೆ ಮತ್ತು ಇದು ಪ್ರಕೃತಿ ಸಹಜ ಕೂಡ ಆಗಿದೆ. ಇನ್ನು ಈಗಿನ ಕಾಲದಲ್ಲಿ ತಂತ್ರಜ್ಞಾನಗಳು ಎಷ್ಟು ಮುಂದುವರೆದಿದೆ ಅನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ ಮತ್ತು ಅದೇ ರೀತಿಯಲ್ಲಿ ಕೆಲವು ವಿಸ್ಮಯಗಳು ಕೂಡ ನಡೆಯುತ್ತದೆ ಮತ್ತು ಅಂತಹ ವಿಸ್ಮಯಗಳು ಜನರಿಗೆ ಶಾಕ್ ಕೂಡ ಕೊಡುತ್ತದೆ ಎಂದು ಹೇಳಬಹುದು. ವಿಜ್ಞಾನ ಲೋಕ, ವೈದ್ಯಲೋಕ ಶಾಕ್ ಆಯುವ ಕೆಲವು ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಇನ್ನು ಈ ಭೂಮಿಯ ಮೇಲೆ ನಡೆಯುವ ಕೆಲವು ವಿಸ್ಮಯಗಳಿಗೆ ಖಚಿತವಾದ ಕಾರಣ ಇನ್ನೂ ಕೂಡ ವಿಜ್ಞಾನಿಗಳು ಹುಡುಕುತ್ತಲೇ ಇದ್ದಾರೆ.
ಸ್ನೇಹಿತರೆ ಈಗ ವಿಜ್ಞಾನಿಗಳು, ವೈದ್ಯರು ಮತ್ತು ಇಡೀ ಮಾನವಕುಲ ಬೆಚ್ಚಿಬೀಳುವ ಘಟನೆ ಬಿಹಾರದ ಔರಂಗಾಬಾದ್ ನಲ್ಲಿ ಆಗಿದ್ದು ಇದನ್ನ ಕೇಳಿ ಇಡೀ ವಿಶ್ವವೇ ಶಾಕ್ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಮಹಿಳೆಯೊಬ್ಬರಿಗೆ ಪ್ಲಾಸ್ಟಿಕ್ ಮಗು ಜನಿಸಿದ್ದು ಇದನ್ನ ನೋಡಿ ವೈದ್ಯರು ಶಾಕ್ ಆಗಿದ್ದಾರೆ. ಹಾಗಾದರೆ ಅಲ್ಲಿ ಆಗಿದ್ದೇನು ಮತ್ತು ಪ್ಲಾಸ್ಟಿಕ್ ಮಗು ಕಂಡು ವೈದ್ಯರು ಹೇಳಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಬಿಹಾರದ ಔರಂಗಾಬಾದ್ ನ ಮಹಿಳೆಯೊಬ್ಬರಿಗೆ ಪ್ಲಾಸ್ಟಿಕ್ ಮಗು ಜನಿಸಿದ್ದು ಸದ್ಯ ವೈದ್ಯರು ಇದನ್ನ ಕಂಡು ಶಾಕ್ ಆಗಿದ್ದಾರೆ.
ಬಿಹಾರದ ಔರಂಗಾಬಾದ್ ಒಬ್ಬ ಮಹಿಳೆ ಹೊಟ್ಟೆ ನೋವೆಂದು ಸದರ್ ಆಸ್ಪತ್ರೆಗೆ ದಾಖಲಾಗಿದ್ದು ಮಹಿಳೆಗೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದಾಗ ಎಲ್ಲಾ ವೈದ್ಯರು ಒಮ್ಮೆ ಶಾಕ್ ಆಗಿದ್ದಾರೆ ಓ ಮೈ ಗಾಡ್ ಅಂದಿದ್ದಾರೆ. ಹೌದು ಪ್ಲಾಸ್ಟಿಕ್ ಮಗುವನ್ನ ಕಂಡು ಎಲ್ಲಾ ವೈದ್ಯರು ಶಾಕ್ ಆಗಿದ್ದಾರೆ. ಅಷ್ಟಕ್ಕೂ ಏನಿದು ಪ್ಲಾಸ್ಟಿಕ್ ಮಗು ಮತ್ತು ಇಂತಹ ಮಗು ಏಕೆ ಜನಿಸುತ್ತದೆ ಅನ್ನುವುದಕ್ಕೆ ವೈದ್ಯರು ಮಾಹಿತಿಯನ್ನ ಕೊಟ್ಟಿದ್ದಾರೆ. ವೈದ್ಯರು ಹೇಳುವ ಪ್ರಕಾರ, ಇದು ಒಂದು ರೀತಿಯ ಖಾಯಿಲೆ ಮತ್ತು ಇಂತಹ ಮಗುವನ್ನ ಕೊಲೋಡಿಯನ್ ಬೇಬಿ ಎಂದು ಕರೆಯಲಾಗುತ್ತದೆ ಮತ್ತು ಕನ್ನಡದಲ್ಲಿ ಅದನ್ನ ಪ್ಲಾಸ್ಟಿಕ್ ಮಗು ಎಂದು ಕರೆಯಲಾಗುತ್ತದೆ. ಇಂತಹ ಮಗು ಜನಿಸುವಾಗ ಮಗುವಿನ ದೇಹದ ಸಂಪೂರ್ಣ ಚರ್ಮ ಪ್ಲಾಸ್ಟಿಕ್ ರೀತಿ ಇರುತ್ತದೆ ಮತ್ತು ಮಗುವಿನ ದೇಹ ಪ್ಲಾಸ್ಟಿಕ್ ಪದರದಿಂದ ಮುಚ್ಚಿರುತ್ತದೆ.
ವೈದ್ಯರು ಹೇಳುವ 11 ಲಕ್ಷ ಮಕ್ಕಳಲ್ಲಿ ಒಂದು ಮಗು ಹೀಗೆ ಜನಿಸುತ್ತದೆ ಮತ್ತು ಇಂತಹ ಮಗು ಹುಟ್ಟಿದಾಗ ಬದುಕುವುದು ಬಹಳ ವಿರಳ. ಇಂತಹ ಮಗು ಹುಟ್ಟಿದಾಗ ಅದೂ ಸಾಮಾನ್ಯ ಮಗುವಿನಂತೆ ಅಳಲು ಆರಂಭ ಮಾಡುತ್ತದೆ, ಆದರೆ ಆದರೆ ಅಳಲು ಪ್ರಾರಂಭಿಸುತ್ತಿದ್ದಂತೆಯೇ ಅದರ ಶರೀರದಲ್ಲಿರುವ ಪ್ಲಾಸ್ಟಿಕ್ ಪದರಗಳು ಒಡೆಯಲು ಶುರುವಾಗುತ್ತವೆ ಎಂದಿದ್ದಾರೆ ವೈದ್ಯರು. ಇನ್ನು ಇಂತಹ ಮಗು ಹುಟ್ಟಲು ಪ್ರಮುಖವಾದ ಕಾರಣ ತಂದೆಯಲ್ಲಿನ ಸಮಸ್ಯೆ ಅಥವಾ ಮಗು ತಾಯಿಯ ಗರ್ಭದಲ್ಲಿರುವ ಸಂದರ್ಭದಲ್ಲಿ ಯಾವುದ್ಯಾವುದೋ ಕಾರಣಕ್ಕೆ ಮಗುವಿನ ಬೆಳವಣಿಗೆ ಸಂಪೂರ್ಣವಾಗಿ ಆಗದಿದ್ದರೂ ಇದು ಸಾಧ್ಯವಿದೆ ಮತ್ತು ಅನುವಂಶಿಕ ಸಮಸ್ಯೆಯಿಂದಾಗಿಯೂ ಈ ರೀತಿಯ ಮಗು ಜನಿಸುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.
ಮೊದಲ ಮಗು ಹೀಗೆ ಹುಟ್ಟಿದರೆ ಎರಡನಯೇ ಮಗು ಕೂಡ ಹೀಗೆ ಹುಟ್ಟುವ ಸಾಧ್ಯತೆ ಶೇಕಡಾ 25 ರಷ್ಟು ಇರುತ್ತದೆ, ಆದ್ದರಿಂದ ತಾಯಂದಿರು ಮೂರೂ ತಿಂಗಳಿಗೆ ಪರೀಕ್ಷೆ ಮಾಡಿಸುವುದು ಅತೀ ಅವಶ್ಯಕ. ಸದ್ಯ ಈ ಪ್ಲಾಸ್ಟಿಕ್ ಮಗುವನ್ನು ಜೀವ ರಕ್ಷಕ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯದ ಮಟ್ಟಿಗೆ ಮಗು ಹಾಗೂ ತಾಯಿ ಸುರಕ್ಷಿತವಾಗಿದೆ. ಆದರೆ ಮಗು ಎಷ್ಟು ದಿನ ಬದುಕುತ್ತದೆ ಎಂದು ಹೇಳುವುದು ಕಷ್ಟ ಎಂದಿದ್ದಾರೆ ವೈದ್ಯರು.