Awas 2024: ಸ್ವಂತ ಮನೆ ನಿರ್ಮಾಣದ ಕನಸು ಕಂಡವರಿಗೆ ಗುಡ್ ನ್ಯೂಸ್, ಸರ್ಕಾರದಿಂದ ಸಿಗಲಿದೆ ಹಣ.

ಸ್ವಂತ ಮನೆ ಕಟ್ಟುವವರಿಗೆ ಕೇಂದ್ರದಿಂದ ಈ ಯೋಜನೆಯ ಅಡಿಯಲ್ಲಿ ಸಿಗಲಿದೆ ಸಹಾಯಧನ

PM Awas Yojana 2024: ದೇಶದಲ್ಲಿ ಕೇಂದ್ರ ಸರ್ಕಾರ ವಿವಿಧ ಕಲ್ಯಾಣ ಯೋಜನೆಗಳನ್ನು ಜನರಿಗಾಗಿ ಪರಿಚಯಿಸಿದೆ. ಮೋದಿ ಸರ್ಕಾರ ದೇಶದ ಬಡ ಜನತೆಗಾಗಿ Pradhan Mantri Awas ಯೋಜನೆಯನ್ನು ಪರಿಚಯಿಸಿತ್ತು.ಈ ಯೋಜನೆಯಡಿ ಬಡ ಜನತೆಗೆ ಸರ್ಕಾರ ಮನೆ ನಿರ್ಮಾಣ ಮಾಡಿಕೊಡುತ್ತಿದೆ. PM Awas ಯೋಜನೆಯಡಿ ಲಕ್ಷಾಂತರ ಜನರು ತಮ್ಮ ಮನೆ ನಿರ್ಮಾಣದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಇದೀಗ ಹೊಸ ಮನೆ ಕಟ್ಟುತ್ತಿರುವವರಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. PM Awas ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

Awas Scheme Latest Update
Image Credit: Jagran

ಸ್ವಂತ ಮನೆ ನಿರ್ಮಾಣದ ಕನಸು ಕಂಡವರಿಗೆ ಗುಡ್ ನ್ಯೂಸ್
ಸರಕಾರದಿಂದ ವಸತಿ ನಿರ್ಮಾಣಕ್ಕೆ ಅನುದಾನ ಪಡೆಯುವುದಲ್ಲದೆ, ರಾಜೀವ್ ಗಾಂಧಿ ವಸತಿ ಯೋಜನೆ ಮೂಲಕ ರಾಜ್ಯದಲ್ಲಿ ಅನೇಕರಿಗೆ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಅದರಲ್ಲೂ ಬೆಂಗಳೂರು ಗ್ರಾಮಾಂತರ ಮತ್ತು ನಗರ ಪ್ರದೇಶದಲ್ಲಿ ವಾಸಿಸುವ ಜನರಿಗೆ ವಸತಿ ಯೋಜನೆಯಡಿ 7.5 ಲಕ್ಷ ರೂಪಾಯಿ ಸಾಲ ಸೌಲಭ್ಯ ನೀಡಲಾಗುತ್ತಿದೆ.

ಆಧಾರ್ ಕಾರ್ಡ್ ಪಡಿತರ ಚೀಟಿ ಆದಾಯ ಪ್ರಮಾಣಪತ್ರ, ಮಹಿಳಾ ಅಭ್ಯರ್ಥಿಗಳಿಗೆ ಜಾತಿ ಪ್ರಮಾಣಪತ್ರ ಅರ್ಜಿದಾರರು ಮಾಜಿ ಅಥವಾ ವಿಶೇಷ ಚೇತನರಾಗಿದ್ದರೆ ಸರ್ಕಾರದಿಂದ ದೃಢೀಕರಣ ಪ್ರಮಾಣಪತ್ರವನ್ನು ನೀಡಬೇಕು. ಕಳೆದ ಎರಡು ವರ್ಷ PM Awas ಯೋಜನೆಯಡಿ ಮನೆ ನಿರ್ಮಲಿಸಲು ಆರ್ಥಿಕ ಸಮಸ್ಯೆಯ ಕಾರಣ ಆಗಿರಲಿಲ್ಲ. ಸದ್ಯ ಸರ್ಕಾರ 2024 ರಲ್ಲಿ ಮನೆ ನಿರ್ಮಾಣಕ್ಕೆ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.

PM Awas Yojana Details
Image Credit: Amarujala

ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ..?
ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಾಣವನ್ನು ರಾಜೀವ್ ಗಾಂಧಿ ವಸತಿ ಯೋಜನೆ ಮೂಲಕ ಮಾಡಲಾಗುತ್ತಿದೆ. ದೇಶದಲ್ಲಿ ಈಗಾಗಲೇ ರಾಜೀವ್ ಗಾಂಧಿ ವಸತಿ ಯೋಜನೆ ಮೂಲಕ 52,189 ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗಿದೆ.

ಇನ್ನು ನೀವು PM AWas ಯೋಜನೆಯಡಿ ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ https://ashraya.karnataka.gov.in/ ಗೆ ಭೇಟಿ ನೀಡಬೇಕು. ಅರ್ಜಿ ಸಲ್ಲಿಕೆಗೆ ಬೇಕಾಗುವ ಅಗತ್ಯ ಮಾಹಿತಿಯನ್ನು ನಮೂದಿಸಿ, ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ, ಅರ್ಜಿ ಸಲ್ಲಿಕೆಗೆ ಮುಂಗಡ ಹಣವನ್ನು ಆನ್ಲೈನ್ ನಲ್ಲಿ ಪಾವತಿಸಿದರೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿಯುತ್ತದೆ.

Join Nadunudi News WhatsApp Group

Join Nadunudi News WhatsApp Group