PMAY Update: ಹೊಸ ಮನೆ ಕಟ್ಟುವ ಆಸೆ ಇಂದೇ ಈಡೇರಿಸಿಕೊಳ್ಳಿ, ಕೇಂದ್ರದ ಯೋಜನೆಗೆ ಇಂದೇ ಅರ್ಜಿ ಹಾಕಿ.
ಸ್ವಂತ ಮನೆ ಕನಸು ಕಂಡವರಿಗೆ ಬಿಗ್ ಅಪ್ಡೇಟ್
PM Awas Yojana New Update: ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಶಾಶ್ವತ ಮನೆ ಹೊಂದಿರಬೇಕು ಎನ್ನುವ ಉದ್ದೇಶದಿಂದ ಕೇಂದ್ರದ ಮೋದಿ ಸರ್ಕಾರ Pradhan Mantri Awas Yojana ಆರಂಭಿಸಿದೆ. ನಗರ ಮತ್ತು ಗ್ರಾಮೀಣ ಜನರು ಈ ಯೋಜನೆಯ ಲಾಭ ಪಡೆಯಬಹುದು.
ಈ ಯೋಜನೆಯಡಿ ಸರ್ಕಾರವು ಗೃಹ ಸಾಲದ ಮೇಲೆ ಸಬ್ಸಿಡಿ ನೀಡುತ್ತದೆ. ಸಬ್ಸಿಡಿ ಮೊತ್ತವು ಸಾಲವನ್ನು ತೆಗೆದುಕೊಳ್ಳುವ ವ್ಯಕ್ತಿಯ ಆದಾಯ ಮತ್ತು ಮನೆಯ ಗಾತ್ರವನ್ನು ಅವಲಂಬಿಸಿರುತ್ತದೆ. ಇದುವರೆಗೆ 4 ಕೋಟಿ ಜನರು ಈ ಯೋಜನೆಯ ಲಾಭ ಪಡೆದಿದ್ದಾರೆ. ಇದೀಗ ಈ ಯೋಜನೆಯಡಿಯಲ್ಲಿ ಮೋದಿ ಸರ್ಕಾರ ಅರ್ಜಿದಾರರಿಗೆ ಬಿಗ್ ಅಪ್ಡೇಟ್ ನೀಡಿದೆ.
ಸ್ವಂತ ಮನೆ ಕನಸು ಕಂಡವರಿಗೆ ಬಿಗ್ ಅಪ್ಡೇಟ್
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರನೇ ಅವಧಿಯ ಮೊದಲ ಸಂಪುಟ ಸಭೆಯಲ್ಲಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದಾರೆ. ಈ ಮನೆಗಳನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿ ನಿರ್ಮಿಸಲಾಗುವುದು. ಈ ಯೋಜನೆಯಲ್ಲಿ ಎರಡು ವಿಧಗಳಿವೆ, ಅದರ ಅಡಿಯಲ್ಲಿ ಜನರಿಗೆ ಅದರ ಪ್ರಯೋಜನಗಳನ್ನು ನೀಡಲಾಗುತ್ತದೆ.
1. ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ (PMAY-G)
2. ಪ್ರಧಾನ ಮಂತ್ರಿ ಆವಾಸ್ ಯೋಜನೆ ನಗರ (PMAY-U)
ವಾರ್ಷಿಕ ಆದಾಯ ರೂ. 18 ಲಕ್ಷದವರೆಗೆ ಇರುವ ಯಾವುದೇ ವ್ಯಕ್ತಿ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಹಾಗೆಯೆ ಈ ಆದಾಯವನ್ನು 3 ವರ್ಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯದು EWS ಅಂದರೆ ಆರ್ಥಿಕವಾಗಿ ದುರ್ಬಲ, LIG ಅಂದರೆ ಕಡಿಮೆ ಆದಾಯದ ಗುಂಪು ಮತ್ತು ಮೂರನೆಯದು MIG ಅಂದರೆ ಮಧ್ಯಮ ಆದಾಯದ ಗುಂಪು. EWS ಗೆ ವಾರ್ಷಿಕ ಆದಾಯ ಮಿತಿಯು 3 ಲಕ್ಷ ರೂ. ಎಲ್ ಐಜಿ ಗೆ 3ರಿಂದ 6 ಲಕ್ಷ ರೂ., ಎಂಐಜಿ ಗೆ 6ರಿಂದ 18 ಲಕ್ಷ ರೂ. ಆಗಿದೆ.
ಆವಾಸ್ ಯೋಜನೆಯ ಸಹಾಯಧನಕ್ಕಾಗಿ ಇಂದೇ ಅರ್ಜಿ ಹಾಕಿ
•ಅರ್ಜಿ ಸಲ್ಲಿಸುವ ವ್ಯಕ್ತಿಯು ಭಾರತದ ಪ್ರಜೆಯಾಗಿರಬೇಕು ಮತ್ತು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು.
•ಅರ್ಜಿದಾರರು ಭಾರತದಲ್ಲಿ ಎಲ್ಲಿಯೂ ಸ್ವಂತ ಶಾಶ್ವತ ಮನೆಯನ್ನು ಹೊಂದಿರಬಾರದು.
•ಕುಟುಂಬದ ಯಾವುದೇ ವ್ಯಕ್ತಿಗೆ ಸರ್ಕಾರಿ ಉದ್ಯೋಗ ಇರಬಾರದು.
•ಒಬ್ಬ ವ್ಯಕ್ತಿಯು ಸ್ವಂತ ಭೂಮಿಯನ್ನು ಹೊಂದಿದ್ದರೂ ಮನೆಯನ್ನು ನಿರ್ಮಿಸದಿದ್ದರೆ, ಅವನು ಈ ಯೋಜನೆಯಡಿಯಲ್ಲಿ ಮನೆ ನಿರ್ಮಿಸಲು ಸಾಲವನ್ನು ತೆಗೆದುಕೊಳ್ಳಬಹುದು.
•ಕಚ್ಚಾ ಅಥವಾ ತಾತ್ಕಾಲಿಕ ಮನೆಗಳಲ್ಲಿ ವಾಸಿಸುವವರು ಈ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಅರ್ಜಿ ಸಲ್ಲಿಸಬಹುದು.
•ಈ ಯೋಜನೆಯಡಿಯಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿದ ಬ್ಯಾಂಕ್ ನಿಂದ ಕೈಗೆಟುಕುವ ದರದಲ್ಲಿ ಗೃಹ ಸಾಲ ಲಭ್ಯವಿದೆ. ಸಾಲ ಮರುಪಾವತಿಗೆ ಗರಿಷ್ಠ ಮಿತಿ 20 ವರ್ಷಗಳು.