Silai Machine: ಇಂತಹ ಮಹಿಳೆಯರಿಗೆ ಸಿಗಲಿದೆ ಕೇಂದ್ರದಿಂದ ಉಚಿತ ಹೊಲಿಗೆ ಯಂತ್ರ, ನಿಮ್ಮ ಅರ್ಹತೆ ಚೆಕ್ ಮಾಡಿ.

ಈ ರೀತಿಯಾಗಿ ಆನ್ಲೈನ್ ನ ಮೂಲಕ ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ.

PM Free Silai Machine Scheme: ಕೇಂದ್ರದ ಮೋದಿ ಸರ್ಕಾರ (Central Govt) ಈಗಾಗಲೇ ವಿವಿಧ ಯೋಜನೆಗಳನ್ನು ಪರಿಚಯಿಸುವ ಮೂಲಕ ಮಹಿಳೆಯರಿಗೆ ಆರ್ಥಿಕವಾಗಿ ಬೆಂಬಲ ನೀಡುತ್ತಿದೆ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮೂಲಕ ದೇಶದ ಲಕ್ಷಾಂತರ ಮಹಿಳೆಯರು ಸ್ವಾಲಂಬಿ ಜೀವನ ನಡೆಸುತ್ತಿದ್ದಾರೆ ಎನ್ನಬಹುದು.

ಈಗಾಗಲೇ ದೇಶದ ಮಹಿಳೆಯರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿರುವ ಕೇಂದ್ರ ಸರ್ಕಾರ ಇದೀಗ ಮಹಿಳೆಯರು ಬೇರೆಯವರ ಮೇಲೆ ಅವಲಂಬಿತವಾಗಿರದೆ ತಮಗೆ ಬೇಕಾದ ಹಣವನ್ನು ತಾವೇ ದುಡಿದುಕೊಳ್ಳಲಿ ಎನ್ನುವ ಉದ್ದೇಶದಿಂದ ಹೊಸ ಯೋಜನೆಯನ್ನು ಪರಿಚಯಿಸಿದೆ. ಕೇಂದ್ರ ಸರ್ಕಾರ ಈ ನೂತನ ಯೋಜನೆ ದೇಶದ ಕೋಟ್ಯಾಂತರ ಮಹಿಳೆಯರಿಗೆ ಸಹಾಯವಾಗಲಿದೆ.

pm free silai machine scheme
Image Credit: Ahmednagarlive24

ಇಂತಹ ಮಹಿಳೆಯರಿಗೆ ಸಿಗಲಿದೆ ಕೇಂದ್ರದಿಂದ ಉಚಿತ ಹೊಲಿಗೆ ಯಂತ್ರ
ದೇಶದ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ನಡೆಸುತ್ತಿದೆ. ಅದರಲ್ಲಿ ಪ್ರಧಾನ ಮಂತ್ರಿ ಉಚಿತ ಹೊಲಿಗೆ ಯಂತ್ರ ಯೋಜನೆ ಸಹ ಒಂದು. ಈ ಯೋಜನೆಯಡಿ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ನೀಡಲು ಸರ್ಕಾರ ನಿರ್ಧರಿಸಿದೆ. ಕೇಂದ್ರ ಸರ್ಕಾರ ಪ್ರತಿ ರಾಜ್ಯದ 50 ಸಾವಿರ ಮಹಿಳೆಯರಿಗಾಗಿ ಈ ಯೋಜನೆಯನ್ನು ಹೊರ ತಂದಿದೆ.

ಅರ್ಜಿ ಸಲ್ಲಿಸುವ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಸಿಗಲಿದೆ. ದೇಶದ ಮಹಿಳೆಯರು ಪ್ರಧಾನ ಮಂತ್ರಿ ಅವರ ಉಚಿತ ಹೊಲಿಗೆ ಯಂತ್ರ ಯೋಜನೆಯ ಪ್ರಯೋಜನವನ್ನು ಅರ್ಜಿ ಸಲ್ಲಿಸುವ ಮೂಲಕ ಪಡೆದುಕೊಳ್ಳಬಹುದು. ಗುಜರಾತ್, ಉತ್ತರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ, ಮಧ್ಯಪ್ರದೇಶ, ಬಿಹಾರ ಮತ್ತು ಛತ್ತೀಸ್‌ ಗಢ ರಾಜ್ಯದಲ್ಲಿ ಈ ಉಚಿತ ಹೊಲಿಗೆ ಯಂತ್ರ ಯೋಜನೆ ಪ್ರಾರಂಭವಾಗಿದೆ.

pm free silai machine
Image Credit: Krishijagran

ಉಚಿತ ಹೊಲಿಗೆ ಯಂತ್ರ ಪಡೆಯಲು ಯಾರು ಅರ್ಹರು
*ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಮಹಿಳೆಯರ ವಯಸ್ಸು ಕನಿಷ್ಠ 20 ಮತ್ತು ಗರಿಷ್ಠ 40 ವರ್ಷ ವಯಸ್ಸಾಗಿರಬೇಕು.

Join Nadunudi News WhatsApp Group

* ಅರ್ಜಿದಾರರು ಭಾರತ ದೇಶದ ಪ್ರಜೆಯಾಗಿದ್ದು ಆರ್ಥಿಕ ದುರ್ಬಲರಾಗಿರಬೇಕು.

* ಮಹಿಳೆಯ ಕುಟುಂಬದ ವಾರ್ಷಿಕ ಆದಾಯವು 1,20,000 ರೂಪಾಯಿ ಮೀರಿರಬಾರದು.

*ಇನ್ನು ವಿಧವೆ ಮಹಿಳೆಯರು ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು.

ಈ ರೀತಿಯಾಗಿ ಆನ್ಲೈನ್ ನ ಮೂಲಕ ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ
* ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ https://pmmodiyojana.in/free-silai-machine-yojana/ ಗೆ ಭೇಟಿ ನೀಡಬೇಕು.

pm free silai machine scheme
Image Credit: Krishijagran

* ವೆಬ್ ಸೈಟ್ ನ ಮುಖಪುಟದಲ್ಲಿ ಹೊಲಿಗೆ ಯಂತ್ರದ ಉಚಿತ ಪೂರೈಕೆಗಾಗಿ ಅರ್ಜಿ ಸಲ್ಲಿಸಲು ನೀವು ಲಿಂಕ್ ಅನ್ನು ಕ್ಲಿಕ್ ಮಾಡಬೇಕು.

* ನಂತರ ಅರ್ಜಿಯಲ್ಲಿ ಕೇಳಿದ ದಾಖಲೆಗಳನ್ನು ಭರ್ತಿಮಾಡಿ ಸಬ್ಮಿಟ್ ಮಾಡಿದರೆ ನಿಮ್ಮ ಅರ್ಜಿ ಪೂರ್ಣಗೊಳ್ಳುತ್ತದೆ.

* ಜನ್ಮ ದಿನಾಂಕ ಪ್ರಮಾಣ ಪತ್ರ, ಆದಾಯ ಪ್ರಮಾಣಪತ್ರ, ಮೊಬೈಲ್ ಸಂಖ್ಯೆ, ಪಾಸ್ ಪೋರ್ಟ್ ಸೈಜ್ ಫೋಟೋ ಇನ್ನಿತರ ದಾಖಲೆಗಳು ಅರ್ಜಿ ಸಲ್ಲಿಕೆಗೆ ಅಗತ್ಯವಾಗಿದೆ.

Join Nadunudi News WhatsApp Group