Kisan Money: ಈ ದಿನಾಂಕದಂದು ಜಮಾ ಆಗಲಿದೆ ಕಿಸಾನ್ 15 ನೇ ಕಂತಿನ ಹಣ, ಖಾತೆ ಚೆಕ್ ಮಾಡಿಕೊಳ್ಳಿ.
PM Kisan ಯೋಜನೆಯ 15 ನೇ ಕಂತಿನ ಹಣ ಜಮಾ ಆಗುವ ಬಗ್ಗೆ ಬಿಗ್ ಅಪ್ಡೇಟ್.
PM Kisan 15th Installment Money Deposit Date: ದೇಶದಲ್ಲಿ Pradhan Mantri Kisan Samman Nidhi ಯೋಜನೆಯಡಿ ಮೋದಿ ಸರ್ಕಾರ ರೈತರಿಗಾಗಿ 6 ಸಾವಿರ ಉಚಿತವಾಗಿ ಹಣ ನೀಡುತ್ತದೆ. ಇನ್ನು ನಾಲ್ಕು ತಿಂಗಳಿಗೊಮ್ಮೆ ವರ್ಷಕ್ಕೆ ಮೂರು ಬಾರಿ 2 ಸಾವಿರ ರೂಪಾಯಿಯಂತೆ 6 ಸಾವಿರ ರೂ. ರೈತರ ಖಾತೆಗೆ ಸರ್ಕಾರ ಜಮಾ ಮಾಡುತ್ತಿದೆ.
PM Kisan ಯೋಜನೆಯ ಬಗ್ಗೆ ಈಗಾಗಲೇ ಎಲ್ಲರಿಗು ಮಹಿತಿ ತಿಳಿದಿರಬಹುದು. ಫೆಬ್ರವರಿ 2019 ರಂದು ದೇಶದಲ್ಲಿ PM Kisan ಯೋಜನೆ ಜಾರಿಯಾಗಿದೆ. ಈಗಾಗಲೇ ದೇಶದ ಲಕ್ಷಾಂತರ ರೈತರು ಈ ಯೋಜನೆಯಡಿ ಹಣವನ್ನು ಪಡೆಯುತ್ತಿದ್ದಾರೆ. ಸದ್ಯ PM Kisan ಯೋಜನೆಯ ಮುಂದಿನ ಕಂತಿನ ಹಣ ಜಮಾ ಆಗುವ ಬಗ್ಗೆ ಬಿಗ್ ಅಪ್ಡೇಟ್ ಲಭಿಸಿದೆ.
PM Kisan ಯೋಜನೆಯ 15 ನೇ ಕಂತಿನ ಹಣ ಜಮಾ ಆಗುವ ಬಗ್ಗೆ ಬಿಗ್ ಅಪ್ಡೇಟ್
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಯೋಜನೆಯಡಿ ಜುಲೈನಲ್ಲಿಯೇ 14 ನೇ ಕಂತಿನ ಹಣವನ್ನು ಫಲಾನುಭವಿ ರೈತರ ಖಾತೆಗಳಿಗೆ ಕೇಂದ್ರ ಸರ್ಕಾರ ವರ್ಗಾವಣೆ ಮಾಡಿದೆ. ಇದೀಗ PM Kisan ಯೋಜನೆಯಲ್ಲಿ ರೈತರು 15 ನೇ ಕಂತಿನ ಹಣ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಇದೀಗ 15 ನೇ ಕಂತಿನ ಹಣ ಪಡೆಯುವ ನಿರೀಕ್ಷೆಯಲ್ಲಿದ್ದ ಫಲಾನುಭವಿಗಳಿಗೆ ಸರ್ಕಾರ ಇದೀಗ ಸಿಹಿ ಸುದ್ದಿ ನೀಡಿದೆ.
ಈ ದಿನಾಂಕದಂದು ಜಮಾ ಆಗಲಿದೆ ಕಿಸಾನ್ 15 ನೇ ಕಂತಿನ ಹಣ
PM Kisan ಯೋಜನೆಯ 15ನೇ ಕಂತು ಶೀಘ್ರದಲ್ಲೇ ರೈತರ ಖಾತೆಗೆ ಸೇರಲಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15 ನೇ ಕಂತು ನವೆಂಬರ್ ಕೊನೆಯ ವಾರದಲ್ಲಿ ರೈತರ ಖಾತೆಗಳಿಗೆ ಸೇರಲಿದೆ. ಈ ಕಂತಿನಲ್ಲಿ ಪ್ರತಿ ರೈತರಿಗೆ 2,000 ರೂ. ಗಳಂತೆ ಒಟ್ಟು 11 ಕೋಟಿಗೂ ಅಧಿಕ ರೈತರಿಗೆ 22,000 ಕೋಟಿ ರೂಪಾಯಿ ವರ್ಗಾವಣೆಯಾಗಲಿದೆ. ಕಂತಿನ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
ಇನ್ನು PM Kisan ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳಿದ್ದರೆ, pmkisan.gov.in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಮಾಹಿತಿ ತಿಳಿದುಕೊಳ್ಳಬಹುದು. ಇನ್ನು 2023 ರ ಬಾಕಿ ಉಳಿಸಿಕೊಂಡಿರುವ 15 ನೇ ಕಂತಿನ ಸಹಾಯಧನ ಶೀಘ್ರದಲ್ಲೇ ಬಿಡುಗಡೆಯಾಗುವ ಕಾರಣ ಇನ್ನು ಕೂಡ ಪಿಎಂ ಕಿಸಾನ್ ಯೋಜನೆಗೆ E-KYC Update ಮಾಡಿಸದೇ ಇರುವ ರೈತರು ಇ-ಕೆವೈಸಿ ಅಪ್ಡೇಟ್ ಮಾಡಿಸುವುದು ಕಡ್ಡಾಯವಾಗಿದೆ.