PM Kisan: ರಾತ್ರೋರಾತ್ರಿ ಕಿಸಾನ್ ಸಮ್ಮಾನ್ ನಿಯಮ ಬದಲಿಸಿದ ಸರ್ಕಾರ, ಈ ಕೆಲಸ ಮಾಡದಿದ್ದರೆ ಕಿಸಾನ್ ಹಣ ರದ್ದು
ರೈತರು ಈ ಕೆಲಸ ಪೂರ್ಣಗೊಳಿಸದಿದ್ದರೆ 16 ನೇ ಕಂತಿನ ಹಣ ಖಾತೆಗೆ ಜಮಾ ಆಗುವುದಿಲ್ಲ
PM Kisan 16th Installment Money: Pradhan Mantri Kisan Samman Nidhi ಯೋಜನೆಯಡಿ ಈಗಾಗಲೇ ಸರ್ಕಾರ 15 ಕಂತುಗಳ ಹಣವನ್ನು ಬಿಡುಗಡೆ ಮಾಡಿದೆ. ಸದ್ಯ ಕೇಂದ್ರದಿಂದ 16 ನೇ ಕಂತಿನ ಹಣ ಬಿಡುಗಡೆ ಭಾಕಿ ಇದೆ.
ಫೆಬ್ರವರಿ ಮಾರ್ಚ್ ನಲ್ಲಿ ಕಿಸಾನ್ ಯೋಜನೆಯ 16 ನೇ ಕಂತಿನ ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ. ಆದರೆ ರೈತರು 16 ನೇ ಕಂತಿನ ಹಣವನ್ನು ಪಡೆಯುವ ಮುನ್ನ ಈ ಕೆಲಸವನ್ನು ಮಾಡುವುದು ಕಡ್ಡಾಯವಾಗಿದೆ. ರೈತರು ಕೆಲಸವನ್ನು ಪೂರ್ಣಗೊಳಿಸದಿದ್ದರೆ 16 ನೇ ಕಂತಿನ ಹಣ ಖಾತೆಗೆ ಜಮಾ ಆಗುವುದಿಲ್ಲ.
ರಾತ್ರೋರಾತ್ರಿ ಕಿಸಾನ್ ಸಮ್ಮಾನ್ ನಿಯಮ ಬದಲಿಸಿದ ಸರ್ಕಾರ
ರೈತರಿಗೆ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಈಗಾಗಲೇ ಕೃಷಿ ಇಲಾಖೆಯಿಂದ ಮಾಹಿತಿ ನೀಡಲಾಗಿದೆ. ರೈತರು ತಮ್ಮ ಆಧಾರ್ ಕಾರ್ಡ್, ಆಧಾರ್ ಜೋಡಣೆಯಾಗಿರುವ ಮೊಬೈಲ್ ನಂಬರ್ ದಾಖಲೆಯೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರದಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ. ರೈತರು KYC ಮಾಡುವಲ್ಲಿ ವಿಫಲದಾರೆ ಸರ್ಕಾರ ಯಾವುದೇ ಕಾರಣಕ್ಕೂ 16 ನೇ ಕಂತಿನ ಹಣವನ್ನು ರೈತರ ಖಾತೆಗೆ ಜಮಾ ಮಾಡುವುದಿಲ್ಲ ಎನ್ನುವುದು ನಿಮಗೆ ತಿಳಿದಿರಲಿ.
ಈ ಕೆಲಸ ಮಾಡದಿದ್ದರೆ ಕಿಸಾನ್ ಹಣ ರದ್ದು
•PM Kisan ಯೋಜನೆಯಡಿ 16 ನೇ ಕಂತಿನ ಹಣ ಪಡೆಯಲು ನೀವು ಮುಖ್ಯವಾಗಿ Bank Details ಅನ್ನು ನೀಡಬೇಕಿದೆ. ನೀವು ಅರ್ಜಿ ನಮೂನೆಯಲ್ಲಿ ಬ್ಯಾಂಕ್ ನ ವಿವರವನ್ನು ತಪ್ಪಾಗಿ ನೀಡಿದರೆ ನಿಮ್ಮ ಖಾತೆಗೆ 16 ನೇ ಕಂತಿನ ಹಣ ಜಮಾ ಆಗುವುದಿಲ್ಲ.
•ರೈತರು ಇ -ಕೆವೈಸಿ ಜೊತೆಗೆ ಭೂ ದಾಖಲೆಗಳನ್ನು ನವೀಕರಣ ಮಾಡುವುದು ಕಡ್ಡಾಯವಾಗಿದೆ. ಭೂ ದಾಖಲೆ ನವೀಕರಣ ಆಗದ ಕಾರಣ ಸಾಕಷ್ಟು ರೈತರ ಖಾತೆಗೆ ಹಣ ಜಮಾ ಆಗುತ್ತಿಲ್ಲ.
•ಹಾಗೆಯೆ ಆಧಾರ್ ಕಾರ್ಡ್ ಅನ್ನು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. NPCI ನಿಂದ ಅನುಮನೊಡನೆ ಪಡೆಯುವವರೆಗೆ ಕಿಸಾನ್ ಯೋಜನೆಯ ಹಣ ಜಮಾ ಆಗಲು ಸಾಧ್ಯವಿಲ್ಲ.
ಈ ರೀತಿಯಾಗಿ ನೀವು ಇ-ಕೆವೈಸಿ ಮತ್ತು ಭೂಮಿ ಪರಿಶೀಲನೆ ಮಾಡಿಕೊಳ್ಳಬಹುದು
ಈಗ ನೀವು ಇ-ಕೆವೈಸಿ ಮತ್ತು ಭೂಮಿ ಪರಿಶೀಲನೆಯನ್ನು ನಿಮ್ಮ ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಇದಕ್ಕಾಗಿ ಕೇಂದ್ರ ಸರ್ಕಾರ ಪಿಎಂ ಕಿಸಾನ್ ಆ್ಯಪ್ ಬಿಡುಗಡೆ ಮಾಡಿದೆ. ಮುಖದ ದೃಢೀಕರಣದ ವೈಶಿಷ್ಟ್ಯವನ್ನು ಈ ಅಪ್ಲಿಕೇಶನ್ ನಲ್ಲಿ ಪರಿಚಯಿಸಲಾಗಿದೆ. ಇದರೊಂದಿಗೆ, ಮನೆಯಲ್ಲಿ ಕುಳಿತು ನಿಮ್ಮ ಮುಖವನ್ನು ಸ್ಕ್ಯಾನ್ ಮಾಡುವ ಮೂಲಕ ನೀವು ಇ-ಕೆವೈಸಿಯನ್ನು ಪಡೆಯಬಹುದು. ಮುಂದಿನ ವರ್ಷ ಫೆಬ್ರವರಿ ಮತ್ತು ಮಾರ್ಚ್ ನಡುವೆ ಪಿಎಂ ಕಿಸಾನ್ ಯೋಜನೆಯ 16 ನೇ ಕಂತನ್ನು ಸರ್ಕಾರ ಬಿಡುಗಡೆ ಮಾಡಲಿದೆ.