PM Kisan 21st Installment Status: ದೇಶದ ರೈತರು PM ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ವಾರ್ಷಿಕವಾಗಿ 6000 ರೂ ಸಹಾಯಧನ ಪಡೆದುಕೊಳ್ಳುತ್ತಾರೆ. ಈಗಾಗಲೇ ದೇಶದ ರೈತರು 20 ಕಂತುಗಳ ಹಣ ಪಡೆದುಕೊಡಿದ್ದು ಈಗ 21ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಈಗಾಗಲೇ ಕೆಲವು ರೈತರು PM ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 21ನೇ ಕಂತಿನ ಹಣ ಪಡೆದುಕೊಂಡಿದ್ದಾರೆ. ಆದರೆ ಕೆಲವು ರೈತರ ಖಾತೆಗೆ ಇನ್ನೂ ಕೂಡ PM ಕಿಸಾನ್ ಸಮ್ಮಾನ್ ಯೋಜನೆಯ 21ನೇ ಕಂತಿನ ಹಣ ಬಿಡುಗಡೆ ಆಗಿಲ್ಲ. ರೈತರು ಕೆಲವು ತಪ್ಪುಗಳನ್ನು ಸರಿಪಡಿಸಿಕೊಳ್ಳುವುದರ ಮೂಲಕ PM ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 21ನೇ ಕಂತಿನ ಹಣ ಪಡೆದುಕೊಳ್ಳಬಹುದು.
9 ಕೋಟಿ ರೈತರ ಖಾತೆಗೆ ಜಮಾ ಆಗಿದೆ 21ನೇ ಕಂತಿನ ಹಣ
ಕೇಂದ್ರ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ, ಈಗಾಗಲೇ ಸುಮಾರು 9 ಕೋಟಿ ರೈತರ ಖಾತೆಗೆ PM ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 21ನೇ ಕಂತಿನ 2000 ರೂಪಾಯಿ ಜಮಾ ಆಗಿದೆ. 9 ಕೋಟಿ ರೈತರ ಖಾತೆಗೆ ತಲಾ 2000 ರೂಪಾಯಿಯಂತೆ ಸುಮಾರು 18000 ಸಾವಿರ ಕೋಟಿ ರೂಪಾಯಿ ಹಣವನ್ನು ಈಗಾಗಲೇ ರೈತರ ಖಾತೆಗೆ ಜಮಾ ಮಾಡಲಾಗಿದೆ. ಕೆಲವು ದೋಷಗಳ ಕಾರಣ ಸಾಕಷ್ಟು ರೈತರ ಖಾತೆಗೆ ಇನ್ನೂ ಕೂಡ PM ಕಿಸಾನ್ ಸಮ್ಮಾನ್ ಯೋಜನೆಯ 21ನೇ ಕಂತಿನ ಹಣ ಜಮಾ ಆಗಿಲ್ಲ.
PM ಕಿಸಾನ್ ಯೋಜನೆಯ ಹಣ ಜಮಾ ಆಗದಿರಲು ಕಾರಣ
* KYC ಪೂರ್ಣಗೊಳಿಸದೆ ಇರುವುದು
ಸಾಕಷ್ಟು ರೈತರು ಇನ್ನೂ ಕೂಡ KYC ಪೂರ್ಣಗೊಳಿಸದ ಕಾರಣ PM ಕಿಸಾನ್ ಸಮ್ಮಾನ್ ಯೋಜನೆಯ 21ನೇ ಕಂತಿನ ಹಣ ಪಡೆದುಕೊಳ್ಳಲು ವಿಫಲರಾಗಿದ್ದಾರೆ. PM ಕಿಸಾನ್ ಖಾತೆಯಲ್ಲಿ KYC ಅಪ್ಡೇಟ್ ಮಾಡುವುದರ ಮೂಲಕ ಯೋಜನೆಯ ಹಣ ಪಡೆದುಕೊಳ್ಳಬಹುದು.
* ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಮಾಡದಿರುವುದು
ಸಾಕಷ್ಟು ರೈತರು ಇನ್ನೂ ಕೂಡ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಮಾಡದ ಕಾರಣ ಸಾಕಷ್ಟು ರೈತರ PM ಕಿಸಾನ್ ಸಮ್ಮ ನಿಧಿ ಯೋಜನೆಯ ಹಣವನ್ನು ತಡೆಹಿಡಿಯಲಾಗಿದೆ. ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವುದರ ಮೂಲಕ ಹಣ ಪಡೆದುಕೊಳ್ಳಬಹುದು.
* ವಯಕ್ತಿಕ ಮಾಹಿತಿ ತಪ್ಪಾಗಿರುವ ಕಾರಣ
ಹೆಸರು, ಆಧಾರ್ ಸಂಖ್ಯೆ ಅಥವಾ ಮೊಬೈಲ್ ನಂಬರ್‌ನಲ್ಲಿ ತಪ್ಪಾಗಿದ್ದರೆ ಕೂಡ ಸಮಸ್ಯೆ. ಇದೆಲ್ಲವೂ ಸರಳವಾಗಿ ಸರಿಪಡಿಸಬಹುದು. ಇದರ ಜೊತೆಗೆ ಆಧಾರ್ ದೃಡೀಕರಣ ಆಗದೆ ಇದ್ದರೂ ಕೂಡ PM ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಬರಲ್ಲ.
PM ಕಿಸಾನ್ ಯೋಜನೆಯ ಸ್ಟೇಟಸ್ ಚೆಕ್ ಮಾಡುವ ವಿಧಾನ
PM ಕಿಸಾನ್ ಯೋಜನೆಯ ಸ್ಟೇಟಸ್ pmkisan.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಸುಲಭವಾಗಿ ಚೆಕ್ ಮಾಡಬಹುದು. ‘Farmers Corner’ನಲ್ಲಿ ‘Beneficiary Status’ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಅಥವಾ ನೋಂದಣಿ ಸಂಖ್ಯೆ ದಾಖಲಿಸಿ, OTP ಬಂದ ನಂತರ ಸ್ಟೇಟಸ್ ಸುಲವಾಗಿ ಚೆಕ್ ಮಾಡಬಹುದು. ಸ್ಟೇಟಸ್ ‘Approved’ ಎಂದು ಬಂದರೆ ಹಣ ಶೀಘ್ರ ಬರುತ್ತದೆ. ಇಲ್ಲದಿದ್ದರೆ ನೀವು ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ.
KYC ಅಪ್ಡೇಟ್ ಮಾಡುವ ವಿಧಾನ
ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ ನಲ್ಲಿ ‘eKYC’ ಆಯ್ಕೆಗೆ ಹೋಗಿ, OTP, ಬಯೋಮೆಟ್ರಿಕ್ ಅಥವಾ ಮುಖ ದೃಢೀಕರಣ ಬಳಸಿ ಪೂರ್ಣಗೊಳಿಸಿ. ಸಾಮಾನ್ಯ ಸೇವಾ ಕೇಂದ್ರಗಳನ್ನು KYC ಪ್ರಕ್ರಿಯೆ ಪೂರ್ಣಗೊಳಿಸಬಹುದು. KYC ಅಪ್ಡೇಟ್ ಮತ್ತು ಬ್ಯಾಂಕಿನ ಕೆಲವು ಮಾಹಿತಿ ಅಪ್ಡೇಟ್ ಮಾಡುವುದರ ಮೂಲಕ ಮುಂದಿನ ಕಂತುಗಳ ಕಿಸಾನ್ ಯೋಜನೆಯ ಹಣ ಪಡೆದುಕೊಳ್ಳಬಹುದು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

