Kisan Amount Hike: ಇದು ನರೇಂದ್ರ ಮೋದಿ ಆದೇಶ, ರೈತರ ಖಾತೆಗೆ ವರ್ಷಕ್ಕೆ 8000 ರೂಪಾಯಿ ಜಮಾ.

ಕಿಸಾನ್ ಮೊತ್ತ ಹೆಚ್ಚಳದ ಬಗ್ಗೆ ಸರ್ಕಾರದ ನಿರ್ಧಾರವೇನು...?

PM Kisan Amount Hike Latest Update: ಸದ್ಯ ದೇಶದಲ್ಲಿ ಫೆಬ್ರವರಿ 24, 2019 ರಂದು, ಭೂಮಿ ಹೊಂದಿರುವ ರೈತರಿಗೆ ಅವರ ಆರ್ಥಿಕ ಅಗತ್ಯಗಳನ್ನು ಪೂರೈಸಲು ಕೇಂದ್ರದ ಮೋದಿ ಸರ್ಕಾರ PM Kisan Samman Nidhi ಯೋಜನೆಯನ್ನು ಪ್ರಾರಂಭಿಸಿತ್ತು. ಯಾವುದೇ ರೈತರು ಕೃಷಿಗಾಗಿ ಸಾಲ ಕೇಳಬಾರದು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ.

ಕೇಂದ್ರ ಸರ್ಕಾರವು ನಡೆಸುತ್ತಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಕಾರ, ದೇಶಾದ್ಯಂತ ಅರ್ಹ ರೈತ ಕುಟುಂಬಗಳು ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಪ್ರತಿ ನಾಲ್ಕು ತಿಂಗಳಿಗೊಮ್ಮೆ ವಾರ್ಷಿಕವಾಗಿ 6,000 ರೂ. ಜಮಾ ಮಾಡಲಾಗುತ್ತಿದೆ.

ಇದಲ್ಲದೆ, ಭಾರತದಾದ್ಯಂತ ಸುಮಾರು 12 ಕೋಟಿ ರೈತರು ಈ ಯೋಜನೆಯೊಂದಿಗೆ ಲಾಭವನ್ನು ಪಡೆಯುತ್ತಿದ್ದಾರೆ. ಈ ಯೋಜನೆಯಡಿ ಯೋಜನೆಯ ಪ್ರಾರಂಭದಿಂದ ಫಲಾನುಭವಿಗಳಿಗೆ ಪಾವತಿಸಿದ ಒಟ್ಟು ಮೊತ್ತವು 3.24 ಲಕ್ಷ ಕೋಟಿ ರೂಪಾಯಿಗಳನ್ನು ಮೀರಿದೆ ಎಂದು ಹೇಳಲಾಗುತ್ತದೆ. ಸದ್ಯ ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

PM Kisan Amount Hike Latest Update
Image Credit: Navbharatlive

ಕಿಸಾನ್ ಮೊತ್ತ ಹೆಚ್ಚಳದ ಬಗ್ಗೆ ಸರ್ಕಾರದ ನಿರ್ಧಾರವೇನು…?
ಜುಲೈ ಮೂರನೇ ವಾರದಲ್ಲಿ ಕೇಂದ್ರ ಸರ್ಕಾರ ಈ ಹಣಕಾಸು ವರ್ಷದ ಸಂಪೂರ್ಣ ಬಜೆಟ್ ಮಂಡಿಸಲಿದ್ದು, ಇದರಿಂದ ಎಲ್ಲ ವರ್ಗದವರೂ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದರಲ್ಲೂ ಹೆಚ್ಚಾಗಿ ರೈತರು ಈ ಬಜೆಟ್ ಮಂಡನೆಯ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕಂತಿನ ಮೊತ್ತವನ್ನು ಶೀಘ್ರದಲ್ಲಿ ಹೆಚ್ಚಿಸಬೇಕು, ಇದರಿಂದ ಅವರು ಹೆಚ್ಚಿನ ಪ್ರಯೋಜನಗಳನ್ನು ಪಡೆಯಬೇಕೆಂದು ರೈತರು ಬಯಸುತ್ತಾರೆ.

ಕೆಲವು ಕೃಷಿ ತಜ್ಞರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಕೇಂದ್ರ ಬಜೆಟ್‌ ನಲ್ಲಿ ಪಿಎಂ ಕಿಸಾನ್ ಕಂತಿನ ಮೊತ್ತವನ್ನು ಹೆಚ್ಚಿಸಲು ಅವರು ಹಣಕಾಸು ಸಚಿವರಲ್ಲಿ ಒತ್ತಾಯಿಸಿದ್ದಾರೆ. ಈಗ ಬೇಡಿಕೆಗೆ ಮನ್ನಣೆ ಸಿಗುತ್ತದೋ ಇಲ್ಲವೋ ಎಂಬುದು ಪೂರ್ಣ ಬಜೆಟ್‌ ನಲ್ಲಿ ಮಾತ್ರ ತಿಳಿಯಲಿದೆ. ಇನ್ನೂ ಅಧಿಕೃತವಾಗಿ PM ಕಿಸಾನ್ ಮೊತ್ತ ಹೆಚ್ಚಳದ ಬಗ್ಗೆ ಯಾವುದೇ ಘೋಷಣೆ ಆಗಿಲ್ಲ.

Join Nadunudi News WhatsApp Group

PM Kisan Samman Amount Hike
Image Credit: Hindustantimes

ರೈತರ ಖಾತೆಗೆ ವರ್ಷಕ್ಕೆ 8000 ರೂಪಾಯಿ ಜಮಾ
ಕೇಂದ್ರ ಸರ್ಕಾರ ನಡೆಸುತ್ತಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೊತ್ತವನ್ನು ಹೆಚ್ಚಿಸಬೇಕು ಎಂಬ ಬೇಡಿಕೆ ಇದೆ. ವಾರ್ಷಿಕ ಕಂತಿನ ಮೊತ್ತವನ್ನು 6,000 ರೂ.ಗಳಿಂದ 8,000 ರೂ.ಗಳಿಗೆ ಹೆಚ್ಚಿಸುವಂತೆ ಕೃಷಿ ತಜ್ಞರು ಒಟ್ಟಾಗಿ ಸರ್ಕಾರದ ಕೆಲವು ಜನರನ್ನು ವಿನಂತಿಸಿದ್ದಾರೆ. ನೇರ ಲಾಭ ವರ್ಗಾವಣೆ ಮೂಲಕ ರೈತರಿಗೆ ಎಲ್ಲಾ ಸಬ್ಸಿಡಿಗಳನ್ನು ನೇರವಾಗಿ ನೀಡುವುದರ ಜೊತೆಗೆ, 2024 ರ ಬಜೆಟ್‌ ನಲ್ಲಿ ಕೃಷಿ ಸಂಶೋಧನೆಗೆ ಹೆಚ್ಚುವರಿ ಹಣವನ್ನು ಸಹ ಅವರು ಒತ್ತಾಯಿಸಿದ್ದಾರೆ. ಕೇಂದ್ರ ಬಜೆಟ್ ನಲ್ಲಿ ಕಿಸಾನ್ ಮೊತ್ತ ಹೆಚ್ಚಳಕ್ಕೆ ಅನುಮತಿ ಸಿಕ್ಕರೆ ಈ ವರ್ಷದಿಂದಲೇ ರೈತರು ವರ್ಷದಲ್ಲಿ 6000 ಹಣದ ಬದಲಾಗಿ 8000 ಹಣವನ್ನು ಪಡೆಯಲಿದ್ದಾರೆ.

PM Kisan Amount Hike News
Image Credit: cnbctv18

Join Nadunudi News WhatsApp Group