Ads By Google

Kisan Amount: ರೈತರ ಖಾತೆಗೆ ನೇರವಾಗಿ ಜಮಾ ಆಗಲಿದೆ 13500 ರೂ, ಕಿಸಾನ್ ಸಮ್ಮಾನ್ ಯೋಜನೆಯ ಬಿಗ್ ಅಪ್ಡೇಟ್

PM Kisan Amount Latest Update

Image Credit: Original Source

Ads By Google

PM Kisan Amount Latest Update: ನಾಲ್ಕು ತಿಗಳಿಗೊಮ್ಮೆ ವರ್ಷಕ್ಕೆ ಮೂರು ಬಾರಿ ಕಿಸಾನ್ ಫಲಾನುಭವಿಗಳಿಗೆ ರೈತರ ಖಾತೆಗೆ 2000 ರೂ. ಗಳಂತೆ ವರ್ಷದಲ್ಲಿ ಒಟ್ಟು 6000 ರೂ. ಖಾತೆಗೆ ಜಮಾ ಮಾಡಲು ಕೇಂದ್ರ ಸರ್ಕಾರ PM Kisan ಯೋಜನೆಯನ್ನು ಪರಿಚಯಿಸಿದೆ. ಇನ್ನು ಈವರೆಗೆ ಕಿಸಾನ್ ಯೋಜನೆಯಡಿ ರೈತರ ಖಾತೆಗೆ 17 ಕಂತುಗಳ ಹಣ ಜಮಾ ಆಗಿದೆ.

ಶೀಘ್ರದಲ್ಲೇ 18 ಕಂತಿನ ಹಣ ಕೂಡ ಜಮಾ ಆಗಲಿದೆ. ಸದ್ಯ ಕಿಸಾನ್ ಫಲಾನುಭವಿಗಳಿಗೆ ಕೇಂದ್ರದಿಂದ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಕಿಸಾನ್ ಫಲಾನುಭವಿಗಳು ಈ ಬಾರಿ ಕಿಸಾನ್ ಮೊತ್ತದ ಜೊತೆಗೆ ಒಟ್ಟಾಗಿ 13500 ರೂ. ಗಳನ್ನು ಪಡೆಯಲಿದ್ದಾರೆ. ಅದು ಹೇಗೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.

Image Credit: India Today

ಕಿಸಾನ್ ಫಲಾನುಭವಿಗಳೇ ಗಮನಿಸಿ
ಕೇಂದ್ರ ಸರ್ಕಾರ ಇದೀಗ ಕಿಸಾನ್ ಫಲಾನುಭವಿಗಳಿಗೆ 18 ಕಂತಿನ ಹಣವನ್ನು ಜಮಾ ಮಾಡಲು ಸಿದ್ಧತೆ ನಡೆಸುತ್ತಿದೆ. ಸೆಪ್ಟೆಂಬರ್- ಅಕ್ಟೊಬರ್ ನಲ್ಲಿ ರೈತರು 18 ನೇ ಕಂತಿನ ಹಣವನ್ನು ಪಡೆಯಲಿದ್ದಾರೆ. ಕೇಂದ್ರದಿಂದ 18 ನೇ ಕಂತಿನ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ, ನಾಲ್ಕು ತಿಂಗಳಿಗೊಮ್ಮೆ ಹಣ ಜಮಾ ಆಗುವುದರಿಂದ ಸೆಪ್ಟೆಂಬರ್- ಅಕ್ಟೊಬರ್ ನಲ್ಲಿ ಹಣ ಜಮಾ ಆಗಬಹದು ಎಂದು ವರದಿಯಾಗಿದೆ. ಕಿಸಾನ್ ಫಲಾನುಭವಿಗಳು 18 ನೇ ಕಂತಿನ ಹಣವನ್ನು ಪಡೆಯುವ ಮುನ್ನ ಸರ್ಕಾರದ ಹೇಳಿರುವಂತೆ ಒಂದಿಷ್ಟು ಕೆಲಸಗಳನ್ನು ಮಾಡುವುದು ಅಗತ್ಯವಿದೆ.

ಈ ಬಾರಿ ರೈತರ ಖಾತೆಗೆ ಜಮಾ ಆಗಲಿದೆ 13500 ರೂ.
ತೆಲಂಗಾಣ ಸರ್ಕಾರ ರೈತ ಬ್ರೋಸ ಯೋಜನೆಯ ಮೂಲಕ ರೈತರ ಖಾತೆಗೆ 15000 ರೂ. ಹಣ ಜಮಾ ಮಾಡಲಿದೆ. ಈ ಮುಂಗಾರು ಹಂಗಾಮಿನಿಂದಲೇ ಇದು ಜಾರಿಗೆ ಬರಲಿದೆ. ಪ್ರತುನ್ ಎಕರೆಗೆ 7500 ರೂ. ರೈತರ ಖಾತೆಗೆ ಜಮಾ ಆಗಲಿದೆ. ಇದರ ಜೊತೆಗೆ ಪಿಎಂ ಕಿಸಾನ್ ಹಣ 2 ಸಾವಿರ ರೂ. ಜಮಾ ಆಗಲಿದೆ. ವಿವಿಧ ಕಾರಣಗಳಿಂದ ಬಾಕಿ ಇರುವ ಹಂತವನ್ನು ಠೇವಣಿ ಮಾಡದೆ ಇರುವವರು ಈ KYC ಅನ್ನು ಪೂರ್ಣಗೊಳಿಸಿದರೆ, ಆ ಹಣವನ್ನು ಸಹ ಠೇವಣಿ ಮಾಡಲಾಗುತ್ತದೆ.

Image Credit: ABP Live

ಅಂದರೆ ಕಳೆದ ಎರಡು ಕಂತುಗಳಲ್ಲಿ ಠೇವಣಿ ಇಡದವರಿಗೆ 6,000 ರೂ. ಗಳನ್ನೂ ರೈತ ಭರೋಸಾದಿಂದ 13,500 ರೂ. ಗಳನ್ನೂ ಸರ್ಕಾರ ಜಮಾ ಮಾಡಲಿದೆ. ರೈತರು ಕಿಸಾನ್ ಯೋಜನೆಯ ಲಾಭವನ್ನು ಪಡೆಯಲು ಭೂಮಾಪನ, E -KYC ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಬೇಕಿದೆ. ಈ ಎಲ್ಲ ಕೆಲಸಗಳು ಪೂರ್ಣಗೊಂಡಿದ್ದರೆ ರೈತರ ಖಾತೆಗೆ 18 ನೇ ಕಂತಿನ ಹಣ ಜಮಾ ಆಗಲಿದೆ. ಯೋಜನೆಗೆ ಸಂಬಂಧಪಟ್ಟ ಯಾವುದೇ ಕೆಲಸ ಬಾಕಿ ಇದ್ದರು ಕೂಡ ಯೋಜನೆಯ ಹಣ ಖಾತೆಗೆ ಜಮಾ ಆಗುವುದಿಲ್ಲ.

Image Credit: Ksantak
Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in