Pm Kisan Update: ಈ ಕೆಲಸ ಮಾಡದಿದ್ದರೆ ಕಿಸಾನ್ ಯೋಜನೆಯ 15 ನೇ ಕಂತಿನ ಹಣ ಬರಲ್ಲ, ಕೇಂದ್ರದ ಆದೇಶ.
PM Kisan 15 ನೇ ಕಂತಿನ ಹಣಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಹೊಸ ರೂಲ್ಸ್.
PM Kisan E-KYC Update: 2019 ರ ಫೆಬ್ರವರಿ ತಿಂಗಳಿನಲ್ಲಿ ಕೇಂದ್ರದ ಮೋದಿ ಸರ್ಕಾರ ದೇಶದ ರೈತರಿಗೆ ಆರ್ಥಿಕವಾಗಿ ನೆರವು ನೀಡುವ ಉದ್ದೇಶದಿಂದ PM Kisan ಯೋಜನೆಯನ್ನು ಜಾರಿಗೊಳಿಸಿತ್ತು. ಈ ಯೋಜನೆಯಡಿ ಅರ್ಹ ರೈತರು ಈಗಾಗಲೇ 14 ಕಂತುಗಳ ಹಣವನ್ನು ಪಡೆದಿದ್ದಾರೆ. PM Kisan ಯೋಜನೆಯಡಿ ಅರ್ಹ ರೈತರ ಖಾತೆಗೆ ಮೋದಿ ಸರ್ಕಾರ ವಾರ್ಷಿಕವಾಗಿ 6 ಸಾವಿರ ಉಚಿತವಾಗಿ ನೀಡುತ್ತದೆ.
ನಾಲ್ಕು ತಿಂಗಳಿಗೊಮ್ಮೆ ವರ್ಷಕ್ಕೆ ಮೂರು ಬಾರಿ 2 ಸಾವಿರ ರೂ. ಗಳನ್ನೂ ರೈತರ ಖಾತೆಗೆ ಸರ್ಕಾರ ಜಮಾ ಮಾಡುತ್ತಿದೆ. ಸದ್ಯ PM Kisan ಯೋಜನೆಯ 15 ನೇ ಕಂತಿನ ಹಣ ಜಮಾ ಆಗುವ ನಿರೀಕ್ಷೆಯಲ್ಲಿ ರೈತರು ಕಾಯುತ್ತಿದ್ದಾರೆ. ಸದ್ಯ PM Kisan 15 ನೇ ಕಂತಿನ ಹಣಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಹೊಸ ರೂಲ್ಸ್ ಬಂದಿದೆ.
ಕಿಸಾನ್ ಸಮ್ಮಾನ್ ಪಡೆಯುವವರಿಗೆ ಹೊಸ ರೂಲ್ಸ್
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಯೋಜನೆಯಡಿ ಜುಲೈನಲ್ಲಿಯೇ 14 ನೇ ಕಂತಿನ ಹಣವನ್ನು ಫಲಾನುಭವಿ ರೈತರ ಖಾತೆಗಳಿಗೆ ಕೇಂದ್ರ ಸರ್ಕಾರ ವರ್ಗಾವಣೆ ಮಾಡಿದೆ. PM Kisan ಯೋಜನೆಯ 15ನೇ ಕಂತು ಶೀಘ್ರದಲ್ಲೇ ರೈತರ ಖಾತೆಗೆ ಸೇರಲಿದೆ.
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15 ನೇ ಕಂತು ನವೆಂಬರ್ ಕೊನೆಯ ವಾರದಲ್ಲಿ ರೈತರ ಖಾತೆಗಳಿಗೆ ಸೇರಲಿದೆ. ಈ ಕಂತಿನಲ್ಲಿ ಪ್ರತಿ ರೈತರಿಗೆ 2,000 ರೂ. ಗಳಂತೆ ಒಟ್ಟು 11 ಕೋಟಿಗೂ ಅಧಿಕ ರೈತರಿಗೆ 22,000 ಕೋಟಿ ರೂಪಾಯಿ ವರ್ಗಾವಣೆಯಾಗಲಿದೆ. ಕಂತಿನ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಆದರೆ ನಿಮ್ಮ ಖಾತೆಗೆ 15 ನೇ ಕಂತಿನ 2000 ರೂ. ಜಮಾ ಆಗಬೇಕಿದ್ದರೆ ನೀವು ಈ ಕೆಲಸ ಮಾಡುವುದು ಕಡ್ಡಾಯ.
PM Kisan ಫಲಾನುಭವಿಗಳು ಈ ಕೆಲಸ ಮಾಡದಿದ್ದರೆ 2000 ರೂ. ಬರಲ್ಲ
ರೈತರಿಗೆ E -KYC ಮಾಡಿಸಿಕೊಳ್ಳುವಂತೆ ಈಗಾಗಲೇ ಕೃಷಿ ಇಲಾಖೆಯಿಂದ ಮಾಹಿತಿ ನೀಡಲಾಗಿದೆ. ರೈತರು ತಮ್ಮ ಆಧಾರ್ ಕಾರ್ಡ್, ಆಧಾರ್ ಜೋಡಣೆಯಾಗಿರುವ ಮೊಬೈಲ್ ನಂಬರ್ ದಾಖಲೆಯೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರದಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ. ಇನ್ನು 2023 ರ ಬಾಕಿ ಉಳಿಸಿಕೊಂಡಿರುವ 15 ನೇ ಕಂತಿನ ಸಹಾಯಧನ ಈ ತಿಂಗಳಿನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಈ ಕಾರಣದಿಂದ ಇನ್ನು ಕೂಡ ಪಿಎಂ ಕಿಸಾನ್ ಯೋಜನೆಗೆ E-KYC Update ಮಾಡಿಸದೇ ಇರುವ ರೈತರು ಇ-ಕೆವೈಸಿ ಅಪ್ಡೇಟ್ ಮಾಡಿಸುವುದು ಕಡ್ಡಾಯವಾಗಿದೆ. ಇನ್ನು ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಪೋಸ್ಟಲ್ ಅಕೌಂಟ್ ಓಪನ್ ಮಾಡುವ ಮೂಲಕ ಇ -ಕೆವೈಸಿ ಅಪ್ಡೇಟ್ ಮಾಡಬಹುದು. ಸಕ್ರಿಯ ಬ್ಯಾಂಕ್ ಖಾತೆಯೊಂದಿಗೆ ನಿಮ್ಮ ಆಧಾರ್ ಅನ್ನು ಲಿಂಕ್ ಮಾಡಿ ನಿಮ್ಮ ಇ-ಕೆವೈಸಿ ಪೂರ್ಣಗೊಳಿಸಿ. ನೀವು ಇ- ಕೆವೈಸಿ ಪೂರ್ಣಗೊಳಿಸದಿದ್ದರೆ 15 ನೇ ಕಂತಿನಲ್ಲಿ ಬಿಡುಗಡೆಯಾದ 2000 ರೂ. ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ ಎನ್ನುವ ಬಗ್ಗೆ ನಿಮಗೆ ಅರಿವಿರಲಿ.