Mandhan Scheme: ರೈತರ ಖಾತೆಗೆ ಪ್ರತಿ ತಿಂಗಳು ಬರಲಿದೆ 3000 ರೂ, ಕೇಂದ್ರದಿಂದ ರೈತರಿಗಾಗಿ ಇನ್ನೊಂದು ಘೋಷಣೆ

ರೈತರಿಗಾಗಿ ಹೊಸ ಯೋಜನೆ ಜಾರಿಗೆ ತಂದ ಕೇಂದ್ರ ಸರ್ಕಾರ, ಪ್ರತಿ ತಿಂಗಳು ರೈತರ ಖಾತೆ ಸೇರಲಿದೆ 3000 ರೂ.

PM Kisan Mandhan Scheme: ದೇಶದ ಕೋಟ್ಯಂತರ ರೈತರ ಆದಾಯವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹಲವು ರೀತಿಯ ಯೋಜನೆಗಳನ್ನು ಪ್ರಾರಂಭಿಸುತ್ತಿವೆ. ಕೇಂದ್ರ ಸರ್ಕಾರದ ಅಂತಹ ಒಂದು ಯೋಜನೆಯಲ್ಲಿ ಪ್ರಧಾನ ಮಂತ್ರಿ ಕಿಸಾನ್ ಮನ್ಧನ್ ಯೋಜನೆ ಕೂಡ ಒಂದಾಗಿದೆ . ಸಣ್ಣ ಮತ್ತು ಅತಿಸಣ್ಣ ರೈತರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ ಹಾಗು ರೈತರು ಆರ್ಥಿಕವಾಗಿ ಪ್ರಬಲರಾಗಲು ಈ ಯೋಜನೆ ಬಹಳ ಸಹಕಾರಿ ಆಗಿದೆ.

PM Kisan Mandhan Scheme
Image Credit: Kisantak

ಪ್ರಧಾನ ಮಂತ್ರಿ ಕಿಸಾನ್ ಮನ್ಧನ್ ಯೋಜನೆ ಇದು ಪಿಂಚಣಿ ಯೋಜನೆ ಆಗಿದೆ

ಈ ಯೋಜನೆಯಡಿ, 60 ವರ್ಷ ವಯಸ್ಸಿನ ನಂತರ, ಮನೆಯಲ್ಲಿ ಕುಳಿತುಕೊಳ್ಳುವ ರೈತರಿಗೆ ಪ್ರತಿ ತಿಂಗಳು 3,000 ರೂ.ಗಳ ಪಿಂಚಣಿ ಖಾತರಿ ನೀಡಲಾಗುತ್ತದೆ. ಇದು ಕನಿಷ್ಠ ಪಿಂಚಣಿ ಆಗಿದೆ . ಒಬ್ಬ ರೈತ ಸತ್ತರೆ, ರೈತನ ಹೆಂಡತಿಗೆ ಪಿಂಚಣಿಯ ಶೇಕಡಾ 50 ರಷ್ಟು ಸಿಗುತ್ತದೆ. ಈ ಪಿಂಚಣಿ ಪತಿ ಮತ್ತು ಹೆಂಡತಿಗೆ ಮಾತ್ರ ಅನ್ವಯಿಸುತ್ತದೆ. ಈ ಯೋಜನೆಯಲ್ಲಿ ಮಕ್ಕಳು ಫಲಾನುಭವಿಗಳಾಗಿ ಅರ್ಹರಲ್ಲ. 18 ವರ್ಷದಿಂದ 40 ವರ್ಷದೊಳಗಿನ ಯಾವುದೇ ರೈತರು ಈ ಯೋಜನೆಗೆ ಸೇರಬಹುದು.

PM Kisan Mandhan Scheme Amount
Image Credit: Aajtak

ಪಿಎಂ ಕಿಸಾನ್ ಮನ್ಧನ್ ಯೋಜನೆ ಬಗ್ಗೆ ಮಾಹಿತಿ

ಪ್ರಧಾನ ಮಂತ್ರಿ ಕಿಸಾನ್ ಮನ್ಧನ್ ಯೋಜನೆಯು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾಸಿಕ ಪಿಂಚಣಿ ನೀಡುವ ಯೋಜನೆಯಾಗಿದೆ. ಇದರಲ್ಲಿ 60 ವರ್ಷ ದಾಟಿದ ನಂತರ ಮಾಸಿಕ ಪಿಂಚಣಿ 3 ಸಾವಿರ ರೂ. ಸಿಗಲಿದ್ದು, ಒಂದು ವರ್ಷದಲ್ಲಿ 36 ಸಾವಿರ ರೂ. ಪಡೆಯಬಹುದು. ಇದೊಂದು ಉತ್ತಮ ಯೋಜನೆ ಆಗಿದ್ದು, ಅರ್ಹ ರೈತರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಅಷ್ಟೇ ಅಲ್ಲದೆ ಈ ಯೋಜನೆ ರೈತರ ಆರ್ಥಿಕ ಮಟ್ಟವನ್ನು ಹೆಚ್ಚಿಸಲಿದೆ ಎಂದು ಸರ್ಕಾರ ಹೇಳುತ್ತದೆ.

Join Nadunudi News WhatsApp Group

Join Nadunudi News WhatsApp Group