PM Kisan: ಈ ರೈತರ ಖಾತೆಗೆ ನೇರವಾಗಿ ಜಮಾ ಆಗಲಿದೆ ಕಿಸಾನ್ ಯೋಜನೆಯ 9500 ರೂ, ಇದು ಕೇಂದ್ರದ ಆದೇಶ
ಈ ರೈತರ ಖಾತೆಗೆ ನೇರವಾಗಿ ಜಮಾ ಆಗಲಿದೆ ಕಿಸಾನ್ ಯೋಜನೆಯ 9500 ರೂ
PM Kisan Latest Update: ದೇಶದ ಅರ್ಹ ರೈತರು ನಾಲ್ಕು ತಿಂಗಳಿಗೊಮ್ಮೆ PM Kisan ಯೋಜನೆಯಡಿ 2000 ರೂ. ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಈ ಯೋಜನೆಯಡಿ 17 ಕಂತುಗಳ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ.
ಇನ್ನು Kisan ಯೋಜನೆಯ ಫಲಾನುಭವಿಗಳು 18 ನೇ ಕಂತಿನ 2000 ರೂ. ಹಣವನ್ನು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಪಡೆಯಲಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ಕೇಂದ್ರ ಸರ್ಕಾರ ರೈತರ ಖಾತೆಗೆ ನೇರವಾಗಿ 2000 ರೂ. ಜಮಾ ಮಾಡಲಿದೆ. ಇದೀಗ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್ ಲಭಿಸಿದೆ. ಇದರ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.
ಕಿಸಾನ್ ಯೋಜನೆಯ ಹಣ ಖಾತೆಗೆ ಜಮಾ ಆಗಲು ಈ ಕೆಲಸ ಮಾಡುದು ಕಡ್ಡಾಯ
ನೀವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 18 ನೇ ಕಂತಿನ ಹಣ ಪಡೆಯಲು ಅರ್ಹ ರೈತರು e-KYC ಮಾಡಿಸುದು ಅಗತ್ಯವಾಗಿದೆ. OTP ಆಧಾರಿತ e-KYC ಪ್ರಧಾನ ಮಂತ್ರಿ ಕಿಸಾನ್ ಪೋರ್ಟಲ್ ನಲ್ಲಿ ಲಭ್ಯವಿರುತ್ತದೆ. ಹಾಗೆ ಬಯೋಮೆಟ್ರಿಕ್ ಆಧಾರಿತ e-KYC ಗಾಗಿ ರೈತರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ.
ಈ ರೈತರ ಖಾತೆಗೆ 9,500 ರೂ. ಜಮಾ
ಕೃಷಿ ಯೋಗ್ಯ ಭೂಮಿ ಹೊಂದಿರುವ ರೈತ ಕುಟುಂಬಗಳು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನಕ್ಕಾಗಿ ಅರ್ಜಿ ಸಲ್ಲಿಸಬಹುದು. ಇದೀಗ ತೆಲಂಗಾಣ ಸರ್ಕಾರ ಮುಂಗಾರು ಕಟಾವಿನಿಂದ ರೈತರ ವಿಮೆ ಹಣ 7,500 ರೂ. ಅನ್ನು ರೈತರ ಖಾತೆಗೆ ಜಮಾ ಮಾಡಲಿದೆ. ಇದರೊಂದಿಗೆ PM Kisan ಯೋಜನೆಯ ಹಣ 2000 ರೂಪಾಯಿಯನ್ನು ಸಹ ಜಮಾ ಮಾಡಲಿದೆ. ಒಟ್ಟಾರೆಯಾಗಿ ತೆಲಂಗಾಣ ಸರ್ಕಾರ ರೈತರ ಖಾತೆಗೆ 9,500 ರೂ. ಜಮಾ ಮಾಡಲಿದೆ.