PM Kisan: ರೈತರೇ, ‘ಪಿಎಂ ಕಿಸಾನ್’ ಮುಂದಿನ ಕಂತು ಪಡೆಯಲು ಈ ದಿನಾಂಕಕ್ಕೂ ಮೊದ್ಲು ‘E-KYC’ ಪೂರ್ಣಗೊಳಿಸಿ, ಇಲ್ಲಿದೆ ವಿವರ

ಪಿಎಂ ಕಿಸಾನ್ ಯೋಜನೆಯ ಫಲಾನುಭವಿ ರೈತರು ಕಡ್ಡಾಯವಾಗಿ ಈ ದಿನಾಂಕದೊಳಗೆ E-KYC ಮಾಡಿಸಿಕೊಳ್ಳತಕ್ಕದ್ದು, ಇಲ್ಲಿದೆ E-KYC ಮಾಡುವ ವಿಧಾನ

PM Kisan Samman Nidhi e-kyc: ದೇಶದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಇದು ಬಡ ರೈತರ ಯೋಜನೆ ಆಗಿದೆ. ಈ ಯೋಜನೆಯಡಿ ಎಲ್ಲಾ ಭೂ ಹಿಡುವಳಿ ರೈತ ಕುಟುಂಬಗಳಿಗೆ ಪ್ರತಿ ವರ್ಷ ಮೂರು ಸಮಾನ ಕಂತುಗಳಲ್ಲಿ 6,000 ರೂ.ಗಳ ಆರ್ಥಿಕ ನೆರವು ನೀಡಲಾಗುತ್ತದೆ.

ಪಿಎಂ ಕಿಸಾನ್’ನ 15ನೇ ಕಂತನ್ನ 15 ನವೆಂಬರ್ 2023 ರಂದು ಬಿಡುಗಡೆ ಮಾಡಲಾಯಿತು. ಈಗ ರೈತರು 16ನೇ ಕಂತಿಗಾಗಿ ಕಾಯುತ್ತಿದ್ದಾರೆ. ಪಿಎಂ ಕಿಸಾನ್’ನ 16 ನೇ ಕಂತು ಫೆಬ್ರವರಿ ಅಥವಾ ಮಾರ್ಚ್ 2024 ರ ನಡುವೆ ಬಿಡುಗಡೆಯಾಗುವ ಸಾಧ್ಯತೆಯಿದೆ.ಈ ಯೋಜನೆಯಡಿ ನೀಡುವ ಮೊತ್ತವನ್ನು ಡಿಬಿಟಿ ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.

PM Kisan Samman Nidhi e-kyc
Image Credit: Jagran

ಪಿಎಂ ಕಿಸಾನ್ ಯೋಜನೆಗೆ E-KYC ಕಡ್ಡಾಯವಾಗಿದೆ

ಪಿಎಂ ಕಿಸಾನ್ ಯೋಜನೆಗೆ ಇಕೆವೈಸಿ ಪೂರ್ಣಗೊಳ್ಳದಿದ್ದರೆ, ಮುಂದಿನ ಕಂತನ್ನು ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುವುದಿಲ್ಲ ಎಂದು ಸರ್ಕಾರ ಈಗಾಗಲೇ ಮಾಹಿತಿ ನೀಡಿದೆ. ಜನವರಿ 31 ರೊಳಗೆ ಫಲಾನುಭವಿ ಇಕೆವೈಸಿ ಪೂರ್ಣಗೊಳಿಸದಿದ್ದರೆ, ಮುಂದಿನ ಕಂತಿನ ಪ್ರಯೋಜನ ಲಭ್ಯವಿರುವುದಿಲ್ಲ. ಎನ್ನಲಾಗಿದೆ .

ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ಈ ಕೆಳಗಿನ ಮೂರು ಇಕೆವೈಸಿ ವಿಧಾನಗಳು ಲಭ್ಯವಿದೆ
1) ಒಟಿಪಿ ಆಧಾರಿತ ಇಕೆವೈಸಿ (ಪಿಎಂ-ಕಿಸಾನ್ ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ನಲ್ಲಿ ಲಭ್ಯವಿದೆ)
2)ಬಯೋಮೆಟ್ರಿಕ್ ಆಧಾರಿತ ಇಕೆವೈಸಿ (ಸಾಮಾನ್ಯ ಸೇವಾ ಕೇಂದ್ರ (ಸಿಎಸ್ಸಿ) ಮತ್ತು ರಾಜ್ಯ ಸೇವಾ ಕೇಂದ್ರ (ಎಸ್‌ಎಸ್ಕೆ)ನಲ್ಲಿ ಲಭ್ಯವಿದೆ)
3) ಮುಖ ದೃಢೀಕರಣ ಆಧಾರಿತ ಇಕೆವೈಸಿ (ಲಕ್ಷಾಂತರ ರೈತರು ಬಳಸುವ ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ನಲ್ಲಿ ಲಭ್ಯವಿದೆ).

Join Nadunudi News WhatsApp Group

PM Kisan Latest Update
Image Credit: Original Source

ಇಕೆವೈಸಿ ಮಾಡುವ ವಿಧಾನ

ಒಟಿಪಿ ಆಧಾರಿತ ಇಕೆವೈಸಿ ಪಿಎಂ ಕಿಸಾನ್ ಪೋರ್ಟಲ್ನಲ್ಲಿ ಲಭ್ಯವಿದೆ ಅಥವಾ ಬಯೋಮೆಟ್ರಿಕ್ ಆಧಾರಿತ ಇಕೆವೈಸಿಗಾಗಿ ಹತ್ತಿರದ ಸಿಎಸ್ಸಿ ಕೇಂದ್ರವನ್ನ ಸಂಪರ್ಕಿಸಬಹುದು ಹಾಗು ರೈತರು ತಮ್ಮ ಹತ್ತಿರದ ಇ-ಮಿತ್ರ, ಸಿಎಸ್ಸಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಹೆಬ್ಬೆರಳಿನ ಗುರುತು ನೀಡಿ ಇಕೆವೈಸಿ ಮಾಡಬಹುದು ಮತ್ತು ಪಿಎಂ ಕಿಸಾನ್ ಜಿಒಐ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಮೂಲಕ ಮುಖದ ಮೂಲಕವೂ ಇಕೆವೈಸಿ ಮಾಡಬಹುದು.

Join Nadunudi News WhatsApp Group