Kisan Update: ಕಿಸಾನ್ ಸಮ್ಮಾನ್ ಯೋಜನೆಯ 16 ನೇ ಕಂತಿನ ಹಣ ಬೇಕು ಅಂದರೆ ಈ 4 ಕೆಲಸ ತಕ್ಷಣ ಮಾಡಿ, ಇಲ್ಲವಾದರೆ ಹಣ ಇಲ್ಲ.

ಕಿಸಾನ್ ಸಮ್ಮಾನ್ ಯೋಜನೆಯ 16 ನೇ ಕಂತಿನ ಹಣ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯವಾಗಿದೆ.

PM Kisan Latest Update: ದೇಶದಲ್ಲಿ ರೈತರ ಏಳಿಗೆಗಾಗಿ ಮೋದಿ ಸಏಕರೇ PM Kisan ಯೋಜನೆಯನ್ನು ಪರಿಚಯಿಸಿದೆ. ಕೋಟ್ಯಾಂತರ ರೈತರು ಈ ಯೋಜನೆಯಡಿ ಸಹಾಯಧನವನ್ನು ಪಡೆಯುತ್ತಿದ್ದಾರೆ. PM Kisan ಯೋಜನೆಯಡಿ ವರ್ಷಕ್ಕೆ ರೈತರು 6000 ರೂ ಸಹಾಯಧನ ಪಡೆಯಲಿದ್ದಾರೆ. ಇನ್ನು ಲೋಕ ಸಭಾ ಚುನಾವಣೆಗೂ ಮುನ್ನ PM Kisan ಯೋಜನೆಯ ಹಣವನ್ನು ಸರ್ಕಾರ ಹೆಚ್ಚಿಸಲು ನಿರ್ಧರಿಸಿದೆ. 2024 ರಿಂದ ರೈತರು ವರ್ಷಕ್ಕೆ 8000 ರೂ ಹಣವನ್ನು ಪಡೆಯುವ ಸಾಧ್ಯತೆ ಇದೆ.

ಸರ್ಕಾರ PM Kisan ಯೋಜನೆಯ ಹಣವನ್ನು ಹೆಚ್ಚಿಸಲು ನಿರ್ಧರಿಸಿದ್ದು, ಸದ್ಯದಲ್ಲೇ ಈ ಬಗೆ ಘೋಷಣೆ ಆಗಲಿದೆ. ಇನ್ನು ಈಗಾಗಲೇ PM Kisan ಯೋಜನೆಯಡಿ 15 ಕಂತುಗಳ ಹಣ ಬಿಡುಗಡೆಯಾಗಿದ್ದು ಇದೀಗ ಸರ್ಕಾರ 16 ನೇ ಕಂತಿನ ಹಣವನ್ನು ಬಿಡುಗಡೆ ಮಾಡಲು ತಯಾರಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯ 16 ನೇ ಕಂತಿನ ಹಣ ಬೇಕು ಅಂದರೆ ರೈತರು ಈ 4 ಕೆಲಸಗಳನ್ನೂ ಮಾಡುವುದು ಅಗತ್ಯವಾಗಿದೆ.

PM Kisan Latest Updates
Image Credit: Bhaskar

PM Kisan ಫಲಾನುಭವಿಗಳಿಗೆ ಬಿಗ್ ಅಲರ್ಟ್
ರೈತರಿಗೆ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಈಗಾಗಲೇ ಕೃಷಿ ಇಲಾಖೆಯಿಂದ ಮಾಹಿತಿ ನೀಡಲಾಗಿದೆ. ರೈತರು ತಮ್ಮ ಆಧಾರ್ ಕಾರ್ಡ್, ಆಧಾರ್ ಜೋಡಣೆಯಾಗಿರುವ ಮೊಬೈಲ್ ನಂಬರ್ ದಾಖಲೆಯೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರದಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ. ರೈತರು KYC ಮಾಡುವಲ್ಲಿ ವಿಫಲದಾರೆ ಸರ್ಕಾರ ಯಾವುದೇ ಕಾರಣಕ್ಕೂ 16 ನೇ ಕಂತಿನ ಹಣವನ್ನು ರೈತರ ಖಾತೆಗೆ ಜಮಾ ಮಾಡುವುದಿಲ್ಲ ಎನ್ನುವುದು ನಿಮಗೆ ತಿಳಿದಿರಲಿ.

ಕಿಸಾನ್ ಸಮ್ಮಾನ್ ಯೋಜನೆಯ 16 ನೇ ಕಂತಿನ ಹಣ ಬೇಕು ಅಂದರೆ ಈ 4 ಕೆಲಸ ತಕ್ಷಣ ಮಾಡಿ
•PM Kisan ಯೋಜನೆಯಡಿ 16 ನೇ ಕಂತಿನ ಹಣ ಪಡೆಯಲು ನೀವು ಮುಖ್ಯವಾಗಿ Bank Details ಅನ್ನು ನೀಡಬೇಕಿದೆ. ಬ್ಯಾಂಕ್ ಖಾತೆಗೆ Aadhaar Link ಮಾಡುವುದು ಕೂಡ ಕಡ್ಡಾಯವಾಗಿದೆ.

•ರೈತರು ಇ -ಕೆವೈಸಿ ಜೊತೆಗೆ ಭೂ ದಾಖಲೆಗಳನ್ನು ನವೀಕರಣ ಮಾಡುವುದು ಕಡ್ಡಾಯವಾಗಿದೆ. ಭೂ ದಾಖಲೆ ನವೀಕರಣ ಆಗದ ಕಾರಣ ಸಾಕಷ್ಟು ರೈತರ ಖಾತೆಗೆ ಹಣ ಜಮಾ ಆಗುತ್ತಿಲ್ಲ.

Join Nadunudi News WhatsApp Group

•ನಿಮ್ಮ ಆಧಾರ್ ಸೀಡೆಡ್ ಬ್ಯಾಂಕ್ ಖಾತೆಯಲ್ಲಿ ನಿಮ್ಮ DBT ಆಯ್ಕೆಯನ್ನು ಸಕ್ರಿಯವಾಗಿರಿಸಿಕೊಳ್ಳಿ.

•PM ಕಿಸಾನ್ ಪೋರ್ಟಲ್‌ ನಲ್ಲಿ ‘KNOW YOUR STATUS’ ಮಾಡ್ಯೂಲ್ ಅಡಿಯಲ್ಲಿ ನಿಮ್ಮ ಆಧಾರ್ ಸೀಡಿಂಗ್ ಅನ್ನು ಪರಿಶೀಲಿಸಿ.

PM Kisan Samman Nidhi Amount
Image Credit: Jansatta

ಈ ರೀತಿಯಾಗಿ ನೀವು ಇ-ಕೆವೈಸಿ ಮಾಡಿಕೊಳ್ಳಬಹುದು
ಈಗ ನೀವು ಇ-ಕೆವೈಸಿ ಮತ್ತು ಭೂಮಿ ಪರಿಶೀಲನೆಯನ್ನು ನಿಮ್ಮ ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಇದಕ್ಕಾಗಿ ಕೇಂದ್ರ ಸರ್ಕಾರ PM Kisan App ಬಿಡುಗಡೆ ಮಾಡಿದೆ. ರೈತರು pmkisan.gov.in ವೆಬ್‌ ಸೈಟ್‌ ಗೆ ಭೇಟಿ ನೀಡುವ ಮೂಲಕ ಒಟಿಪಿ ಮೂಲಕ ಇ-ಕೆವೈಸಿ ಮಾಡಬಹುದು.ಮುಖದ ದೃಢೀಕರಣದ ವೈಶಿಷ್ಟ್ಯವನ್ನು ಈ ಅಪ್ಲಿಕೇಶನ್‌ ನಲ್ಲಿ ಪರಿಚಯಿಸಲಾಗಿದೆ. ಇದರೊಂದಿಗೆ, ಮನೆಯಲ್ಲಿ ಕುಳಿತು ನಿಮ್ಮ ಮುಖವನ್ನು ಸ್ಕ್ಯಾನ್ ಮಾಡುವ ಮೂಲಕ ನೀವು ಇ-ಕೆವೈಸಿಯನ್ನು ಪಡೆಯಬಹುದು.

Join Nadunudi News WhatsApp Group