PM Kisan: ಕಿಸಾನ್ ಸಮ್ಮಾನ್ 18 ನೇ ಕಂತಿನ ಹಣ ಬೇಕು ಅಂದರೆ ತಕ್ಷಣ ಈ ಕೆಲಸ ಮಾಡಬೇಕು, ಹೊಸ ನಿಯಮ
ಕಿಸಾನ್ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್
PM Kisan New Update: ದೇಶದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ದೇಶದ ರೈತರಿಗಾಗಿ PM Kisan ಯೋಜನೆಯನ್ನು ಪರಿಚಯಿಸಿ, ಈ ಯೋಜನೆಯಡಿ ರೈತರ ಕೃಷಿಗೆ ಸಹಾಯಧನವನ್ನು ನೀಡುತ್ತಿದೆ.
ನಾಲ್ಕು ತಿಗಳಿಗೊಮ್ಮೆ ವರ್ಷಕ್ಕೆ ಮೂರು ಬಾರಿ ಕಿಸಾನ್ ಫಲಾನುಭವಿ ರೈತರ ಖಾತೆಗೆ 2000 ರೂ. ಗಳಂತೆ ವರ್ಷದಲ್ಲಿ ಒಟ್ಟು 6000 ರೂ. ಖಾತೆಗೆ ಜಮಾ ಆಗುತ್ತಿದೆ. ಇನ್ನು ಈವರೆಗೆ ಕಿಸಾನ್ ಯೋಜನೆಯಡಿ ರೈತರ ಖಾತೆಗೆ 17 ಕಂತುಗಳ ಹಣ ಜಮಾ ಆಗಿದೆ. ಶೀಘ್ರದಲ್ಲೇ 18 ಕಂತಿನ ಹಣ ಕೂಡ ಜಮಾ ಆಗಲಿದೆ. ಸದ್ಯ ಕಿಸಾನ್ ಫಲಾನುಭವಿಗಳಿಗೆ ಕೇಂದ್ರದಿಂದ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.
ಕಿಸಾನ್ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್
ಇನ್ನು ಕಿಸಾನ್ ಯೋಜನೆಯ ಮೊತ್ತ ಹೆಚ್ಚಳದ ಬಗ್ಗೆ ಸುದ್ದಿಗಳು ಕೇಳಿ ಬಂದಿದ್ದವು. ಕೇಂದ್ರ ಸರ್ಕಾರ ಜುಲೈ 23 ರಂದು 2024 ರ ಬಜೆಟ್ ಮಂಡನೆ ಮಾಡಿದ್ದು, ಇಲ್ಲಿ ಕಿಸಾನ್ ಮೊತ್ತ ಹೆಚ್ಚಳದ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದಾಗ್ಯೂ, ಕೇಂದ್ರ ಸರ್ಕಾರ ಈ ಹಿಂದಿನಂತೆ 18 ಕಂತಿನ ಹಣವನ್ನು ಜಮಾ ಮಾಡಲು ಮುಂದಾಗುತ್ತಿದೆ. ಸೆಪ್ಟೆಂಬರ್ ನಲ್ಲಿ ರೈತರು 18 ನೇ ಕಂತಿನ ಹಣವನ್ನು ಪಡೆಯಲಿದ್ದಾರೆ. ಕಿಸಾನ್ ಫಲಾನುಭವಿಗಳು 18 ನೇ ಕಂತಿನ ಹಣವನ್ನು ಪಡೆಯುವ ಮುನ್ನ ಸರ್ಕಾರದ ಹೇಳಿರುವಂತೆ ಒಂದಿಷ್ಟು ಕೆಲಸಗಳನ್ನು ಮಾಡುವುದು ಅಗತ್ಯವಿದೆ.
ಕಿಸಾನ್ ಯೋಜನೆಯ 18 ನೇ ಕಂತಿನ ಹಣ ಪಡೆಯಲು ಇಂದೇ ಈ ಕೆಲಸ ಮುಗಿಸಿ
ಇನ್ನು ಕಿಸಾನ್ ಫಲಾನುಭವಿಗಳು ಈ ಬಾರಿ ಹೆಚ್ಚಿನ ಮೊತ್ತವನ್ನು ಪಡೆಯಲಿದ್ದಾರೆ. ಕೇಂದ್ರದಿಂದ ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆಯ ಭಾಗವಾಗಿ ರೈತರ ಖಾತೆಗೆ 18 ನೇ ಕಂತಿನ 2000 ರೂ., ಹಾಗೂ ಮುಂಗಾರು ಕಟಾವಿನಿಂದ ರೈತರ ವಿಮೆ ಹಣವನ್ನ ತೆಲಂಗಾಣ ಸರ್ಕಾರ ಜಮಾ ಮಾಡಲಿದೆ. ಕಿಸಾನ್ ಯೋಜನೆಯ 2000 ರೂ. ಹಾಗೆಯೆ ವಿಮೆಯ ಹಣ 7,500 ರೂ.ಗೆ ಸೇರಿಸಿದರೆ ಒಟ್ಟು 9,500 ರೂಪಾಯಿ ರೈತರ ಖಾತೆಗೆ ಸೇರಲಿದೆ.
ಶೀಘ್ರದಲ್ಲೇ ರೈತರು ಈ ಯೋಜನೆಗಳ ಮೊತ್ತವನ್ನು ಪಡೆಯಲಿದ್ದಾರೆ. ರೈತರು ಕಿಸಾನ್ ಯೋಜನೆಯ ಲಾಭವನ್ನು ಪಡೆಯಲು ಭೂಮಾಪನ, E -KYC ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಬೇಕಿದೆ. ಈ ಎಲ್ಲ ಕೆಲಸಗಳು ಪೂರ್ಣಗೊಂಡಿದ್ದರೆ ರೈತರ ಖಾತೆಗೆ 18 ನೇ ಕಂತಿನ ಹಣ ಜಮಾ ಆಗಲಿದೆ. ಯೋಜನೆಗೆ ಸಂಬಂಧಪಟ್ಟ ಯಾವುದೇ ಕೆಲಸ ಬಾಕಿ ಇದ್ದರು ಕೂಡ ಯೋಜನೆಯ ಹಣ ಖಾತೆಗೆ ಜಮಾ ಆಗುವುದಿಲ್ಲ. ಹೀಗಾಗಿ ಕಿಸಾನ್ ಪ್ಲ್ಯಾನುಭವಿಗಳು 18 ನೇ ಕಂತಿನ ಹಣ ಪಡೆಯಲು ಎಲ್ಲ ಕೆಲಸಗಳನ್ನು ಮಾಡುವುದು ಉತ್ತಮ.