Matritva Yojana: ದೇಶದ ಈ ಎಲ್ಲಾ ಮಹಿಳೆಯರಿಗೆ 11000 ರೂ ಘೋಷಣೆ ಮಾಡಿದ ಕೇಂದ್ರ ಸರ್ಕಾರ, ಇಂದೇ ಅರ್ಜಿ ಸಲ್ಲಿಸಿ.

ಗರ್ಭಿಣಿಯರಿಗೆ ಆರ್ಥಿಕವಾಗಿ ಸಹಾಯ ಮಾಡಲು ಕೇಂದ್ರದ ಮೋದಿ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ.

PM Matritva Vandana Yojana: ಕೇಂದ್ರದ ಮೋದಿ ಸರ್ಕಾರ ದೇಶದ ಜನತೆಗಾಗಿ ವಿವಿಧ ಯೋಜನೆಯನ್ನು ಜಾರಿಗೊಳಿಸಿದೆ. ಜನಸಾಮಾನ್ಯರ ಆರ್ಥಿಕ ನೇರವಾಗಿ ಈಗಾಗಲೇ ಸಾಕಷ್ಟು ಯೋಜನೆಯನ್ನು ಪರಿಚಯಿಸಿದೆ. ಕೇಂದ್ರ ಸರ್ಕಾರದ (Central Government)ವಿವಿಧ ಯೋಜನೆಗಳಲ್ಲಿ ಕೆಲವು ಯೋಜನೆಗಳು ಮಹಿಳೆಯರಿಗಾಗಿ ಸೀಮಿತವಾಗಿದೆ.

ಮಹಿಳೆಯರ ರಕ್ಷಣೆಗಾಗಿ ಮೋದಿ ಸರ್ಕಾರ ವಿವಿಧ ಯೋಜನೆಯನ್ನು ಪರಿಚಯಿಸಿದೆ. ಈಗಾಗಲೇ ದೇಶದ ಮಹಿಳೆಯರು ಸರ್ಕಾರ ವಿವಿಧ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ಸಾಕಷ್ಟು ಮಹಿಳೆಯರು ಯೋಜನೆಗಳ ಲಾಭದಿಂದ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

PM Matritva Vandana Yojana for Pregnant Women
Image Credit: Srbpost

ದೇಶದ ಗರ್ಭಿಣಿ ಮಹಿಳೆಯರಿಗಾಗಿ ಹೊಸ ಯೋಜನೆ
ಇನ್ನು ಮಹಿಳೆಯರ ಆರೋಗ್ಯ ಸುರಕ್ಷೆತೆಗಾಗಿ ಕೇಂದ್ರ ಸರ್ಕಾರ ಹೆಚ್ಚು ನಿಗಾ ವಹಿಸುತ್ತಿದೆ. ಗರ್ಭಿಣಿಯರಿಗಾಗಿ ಕೂಡ ಮೋದಿ ಸರ್ಕಾರ ಹೊಸ ಯೋಜನೆಯನ್ನು ಪರಿಚಯಿಸಿದೆ. ಇತ್ತೀಚಿಗೆ ಮಕ್ಕಳು ತೀವ್ರ ಆರೋಗ್ಯ ಸಮಸ್ಯೆಯಿಂದ ಬಾಳುತ್ತಿದ್ದಾರೆ. ಅದರಲ್ಲೂ ಹುಟ್ಟಿದ ನವಜಾತ ಶಿಶುಗಳು ಹೆಚ್ಚಿನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

ಈ ಕಾರಣಕ್ಕೆ ಹುಟ್ಟಿದ ಮಕ್ಕಳ ಆರೈಕೆಗೆ ಮತ್ತು ರೋಗಗಳ ತಡೆಗಟ್ಟುವಿಕೆಗೆ ಮೋದಿ ಸರ್ಕಾರ ಹೊಸ ಹೆಜ್ಜೆ ಇಟ್ಟಿದೆ. ಮಕ್ಕಳ ಆರೋಗ್ಯದ ರಕ್ಷಣೆ ಮಾಡಲು ಮಹಿಳೆಯರಿಗೆ ಆರ್ಥಿಕವಾಗಿ ನೆರವಾಗಲು ಮೋದಿ ಸರ್ಕಾರ ನಿರ್ಧರಿಸಿದೆ.

ಗರ್ಭಿಣಿ ಮಹಿಳೆಯರಿಗಾಗಿ ಮಾತೃತ್ವ ವಂದನಾ ಯೋಜನಾ
ಕೇಂದ್ರದ ಮೋದಿ ಸರ್ಕಾರದ ಗರ್ಭಿಣಿ ಮಹಳೆಯರಿಗಾಗಿ ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆಯನ್ನು (Pradhan Mantri Matru Vandana Yojana) ಬಿಡುಗಡೆ ಮಾಡಿದೆ. ಗರ್ಭಿಣಿ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಲಾಭವನ್ನು ಪಡೆಯಬಹುದು. ಮಗುವಿನ ಜನನದ ಮೊದಲು ಹಾಗೂ ಮಗುವಿನ ಜನನದ ನಂತರ ಗರ್ಭಿಣಿಯರಿಗೆ ಮಕ್ಕಳನ್ನು ನೋಡಿಕೊಳ್ಳಲು ಆರ್ಥಿಕವಾಗಿ ಸಹಾಯ ಮಾಡಲು ಕೇಂದ್ರದ ಮೋದಿ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ.

Join Nadunudi News WhatsApp Group

PM Matritva Vandana Yojana for Pregnant Women

ಗರ್ಭಿಣಿಯರಿಗೆ ಸಿಗಲಿದೆ 5 ಸಾವಿರ
ಕೇಂದ್ರ ಸರ್ಕಾರ ಇದೀಗ ಗರ್ಭಿಣಿಯರಿಗೆ ಸಿಹಿ ಸುದ್ದಿ ನೀಡಿದೆ. ಮಾತೃತ್ವ ವಂದನಾ ಯೋಜನೆಯಡಿಯಲ್ಲಿ ಸರ್ಕಾರ ಗರ್ಭಿಣಿ ಮಹಿಳೆಯರಿಗೆ ಪ್ರತಿ ವರ್ಷ 5 ಸಾವಿರ ಹಣ ನೀಡಲಿದೆ. ಫಲಾನುಭವಿ ಮಹಿಳೆಯರಿಗೆ ಸರ್ಕಾರ 5000 ರೂ ಗಳನ್ನೂ ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಿದೆ. ಇನ್ನು https://wcd.nic.in/schemes/pradhan-mantri-matru-vandana-yojana ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಮೂರು ಕಂತುಗಳಲ್ಲಿ ಗರ್ಭಿಣಿಯರ ಖಾತೆಗೆ ಹಣ ಜಮಾ
ಇನ್ನು 19 ವರ್ಷ ಮೇಲ್ಪಟ್ಟವರು ಮಾತ್ರ ಈ ಪ್ರದಾನ ಮಂತ್ರಿ ಮಾತೃತ್ವ ವಂದನಾ ಯೋಜನೆಗೆ ಅರ್ಹರಾಗಿರುತ್ತಾರೆ. ಮೂರು ಕಂತುಗಳಲ್ಲಿ ಗರ್ಭಿಣಿ ಮಹಳೆಯರ ಖಾತೆಗೆ ಹಣ ಜಮಾ ಆಗಲಿದೆ. ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆಯಡಿಯಲ್ಲಿ ಗರ್ಭಧಾರಣೆಯ ನೋಂದಣಿ ಸಮಯದಲ್ಲಿ ಮೊದಲು 1,000 ಹಾಗೂ ಆರು ತಿಂಗಳ ನಂತರ 2,000 ಸಾವಿರ ಹಾಗು ಮಗುವಿನ ಜನನದ ನೋಂದಣಿಯ ನಂತರ ಮೂರನೇ ಕಂತಿನಲ್ಲಿ 2,000 ರೂ ಗಳನ್ನೂ ನೀಡಲಾಗುತ್ತದೆ.

11000 will be given to women under this scheme
Image Credit: Scpsassam

ಈ ಯೋಜನೆಯಡಿ ಮಹಿಳೆಯರಿಗೆ ಸಿಗಲಿದೆ 11000
ಇತ್ತೀಚಿಗೆ ಗರ್ಬಿಣಿಯಾದ ಮಹಿಳೆಯರಿಗೆ ಹೆರಿಗೆಯ ನಂತರ 14 ವಾರಗಳವರೆಗೆ 3,000 ಮತ್ತು 2,000 ಹಣವನ್ನು ನೀಡಲಾಗುತ್ತದೆ. ಇನ್ನು ಎರಡನೇ ಹೆರಿಗೆಯಲ್ಲಿ ಮಗು ಜನಿಸಿದರೆ ಈ ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆಯಡಿಯಲ್ಲಿ 6,000 ಹಣವನ್ನು ಪಡೆಯಬಹುದು. ಒಟ್ಟಾಗಿ ಈ ಯೋಜನೆಯಡಿ ಗರ್ಭಿಣಿ ಮಹಿಳೆಯರು 11,000 ಹಣವನ್ನು ಪಡೆಯಬಹುದಾಗಿದೆ.

Join Nadunudi News WhatsApp Group