Modi Birthday: ದೇಶದ ಎಲ್ಲಾ ಜನರಿಗೆ ಹುಟ್ಟು ಹಬ್ಬದ ಉಡುಗೊರೆ ನೀಡಿದ ನರೇಂದ್ರ ಮೋದಿ, ಯೋಜನೆಗೆ ಚಾಲನೆ.
ಮೋದಿ ಹುಟ್ಟುಹಬ್ಬದ ಕೊಡುಗೆಯಾಗಿ ದೇಶದ ಜನತೆಗೆ ಕೇಂದ್ರ ಸರ್ಕಾರ ಹೊಸ ಸೌಲಭ್ಯವನ್ನು ನೀಡಲು ಮುಂದಾಗಿದೆ.
PM Modi Ayushman Bhava Abhiyana: ದೇಶದ ಪ್ರಧಾನಿ ನರೇಂದ್ರ ಮೋದಿ (Modi) ಅವರು ದೇಶದ ಜನತೆಗಾಗಿ ವಿವಿಧ ಯೋಜನೆಗಳನ್ನು ಪರಿಚಯಿಸಿದ್ದಾರೆ. ಜನಸಾಮಾನ್ಯರು ಮೋದಿ ಸರ್ಕಾರದ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ದೇಶದ ಬಡ ಜನರಿಗೆ ಆರ್ಥಿಕವಾಗಿ ಬೆಂಬಲ ನೀಡುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಜನರಿಗಾಗಿ ವಿವಿಧ ಯೋಜನೆಯನ್ನು ರೂಪಿಸಿದ್ದು ಜನರು ಯೋಜನೆಗಳ ಲಾಭ ಪಡೆಯುತ್ತಿದ್ದಾರೇ.
ಇನ್ನು ಸೆಪ್ಟೆಂಬರ್ 17 ರಂದು ಪ್ರಧಾನಿ ಮೋದಿ ಅವರ ಹುಟ್ಟುಹಬ್ಬ ಇರುವ ಕಾರಣ ದೇಶದ ಜನತೆಗೆ ಕೇಂದ್ರದ ಮೋದಿ ಸರ್ಕಾರ ಬಹು ದೊಡ್ಡ ಸುದ್ದಿಯನ್ನು ನೀಡಿದೆ. ಮೋದಿ ಹುಟ್ಟುಹಬ್ಬದ ಕೊಡುಗೆಯಾಗಿ ದೇಶದ ಜನತೆಗೆ ಕೇಂದ್ರ ಸರ್ಕಾರ ಹೊಸ ಸೌಲಭ್ಯವನ್ನು ನೀಡಲು ಮುಂದಾಗಿದೆ.
ದೇಶದಲ್ಲಿ Ayushman Bhava Abhiyana ಜಾರಿ
ಸೆಪ್ಟೆಂಬರ್ 13 ರಿಂದ Ayushman Bhava ವಿವಿಧ ಆರೋಗ್ಯ ಕಾರ್ಯಕ್ರಮಗಳ ಅಭಿಯಾನ ಜಿಲ್ಲೆಯಲ್ಲಿ ಆರಂಭವಾಗಲಿದ್ದು, ಎಲ್ಲರನ್ನೂ ಒಳಗೊಂಡಂತೆ, ಎಲ್ಲಾ ಉದ್ದೇಶಿತ ಫಲಾನುಭವಿಗಳಿಗೆ ಆರೋಗ್ಯ ರಕ್ಷಣೆ ಯೋಜನೆಗಳನ್ನು ಅತ್ಯುತ್ತಮವಾಗಿ ತಲುಪಿಸುವ ಗುರಿಯನ್ನು ಹೊಂದಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ್ ಅವರು ಮಾಹಿತಿ ನೀಡಿದ್ದಾರೆ.
Septembar 13 ರಂದು ಕೇಂದ್ರ ಆರೋಗ್ಯ ಇಲಾಖೆ Ayushman Bhava Abhiyana ವನ್ನು ದೇಶದಲ್ಲಿ ಪ್ರಾರಂಭಿಸಲಿದೆ. Ayushman Bhava ಎನ್ನುವುದು Ayushman Apke Dvara 3.0 ಅನ್ನು ಒಳಗೊಂಡಿರುವ ಒಂದು ಅಭಿಯಾನವಾಗಿದೆ. ಉಳಿದಿರುವ ಇಲ್ಲ ಅರ್ಹ ಪಲಾನುಭವಿಗಳಿಗೆ Ayushman Card ಗಳ ರಚನೆ ಮತ್ತು ವಿತರಣೆಯ ಗುರಿಯನ್ನು ಹೊಂದಿದೆ. ಸದ್ಯದಲ್ಲೇ ದೇಶದ ಜನತೆ Ayushman Bhava ಅಭಿಯಾನದ ಲಾಭವನ್ನು ಪಡೆಯಬಹುದಾಗಿದೆ.
ಮೋದಿ ಸರ್ಕಾರದಿಂದ Vishwakarma Yojana ಜಾರಿ
ದೇಶದ ಪ್ರಧಾನಿ ಮೋದಿ ಅವರು ಸಾಂಪ್ರದಾಯಿಕ ಕೌಶಲ್ಯ ಹೊಂದಿರುವ ಜನರನ್ನು ಬೆಂಬಲಿಸುವ ಉದ್ದೇಶದಿಂದ ವಿಶ್ವಕರ್ಮ ಯೋಜನೆಯನ್ನು (Vishwakarma Yojana) ರೂಪಿಸಲಿದ್ದಾರೆ. Vishwakarma Yojana ಅಡಿಯಲ್ಲಿ ಕುಶಲಕರ್ಮಿಗಳು ಸಬ್ಸಿಡಿ ಬಡ್ಡಿದರದಲ್ಲಿ 10000 ರೂ. ಗಳನ್ನೂ ಪಾವತಿಸಬೇಕಾಗುತ್ತದೆ.
ಪ್ರಧಾನಿ ವಿಶ್ವಕರ್ಮ ಯೋಜನೆಯಡಿ ಕುಶಲಕರ್ಮಿಗಳಿಗೆ ಮೊದಲನೇ ಕಂತಿನಲ್ಲಿ 5 % ಬಡ್ಡಿಯಲ್ಲಿ ರೂ. 1 ಲಕ್ಷ ಸಾಲ, ಎರಡನೇ ಕಂತಿನಲ್ಲಿ 2 ಲಕ್ಷ ರೂ. ಸಾಲವನ್ನು ನೀಡಿ 5 % ರಿಯಾಯಿತಿ ಬಡ್ಡಿ ದರದಲ್ಲಿ ನೀಡಲಾಗುತ್ತದೆ ಎನ್ನುವ ಬಗ್ಗೆ ವರದಿಯಾಗಿದೆ. ಈ ಯೋಜನೆಯಡಿ ಕೌಶಲ್ಯ ತರಭೇತಿಗೆ 500 ರೂ. ಸ್ಟೈಫಂಡ್ ಮತ್ತು ಆಧುನಿಕ ಉಪಕರಣಗಳನ್ನು ಖರೀದಿಸಲು 1500 ರೂ. ನೀಡಲಾಗುತ್ತದೆ. ಮೋದಿ ಹುಟ್ಟುಹಬ್ಬಕ್ಕೆ Ayushman Bhava ಅಭಿಯಾನದ ಜೊತೆಗೆ Vishwakarma Yojane ಕೊಡದ ದೇಶದ ಜನತೆಗೆ ಉಡುಗೊರೆಯಾಗಿ ಸಿಗಲಿದೆ.