Post Office Scheme: ಮೋದಿ ಸರ್ಕಾರದಿಂದ ಖಾತೆಗೆ 3000 ರೂ, ಪೋಸ್ಟ್ ಆಫೀಸ್ ಮುಂದೆ ಕ್ಯೂ ನಿಂತ ಮಹಿಳೆಯರು.

ಮೋದಿ ಸರ್ಕಾರದಿಂದ ಖಾತೆಗೆ 3000 ರೂ.

PM Modi New Scheme: ಒಂದೆರಡು ತಿಂಗಳ ಹಿಂದೆ ಖಾತೆ ತೆರೆಯಲು ಮಹಿಳೆಯರು ಅಂಚೆ ಕಚೇರಿ ಮುಂದೆ ಸಾಲುಗಟ್ಟಿ ನಿಂತಿದ್ದರು. ಇದೀಗ ಮತ್ತೆ ಮಹಿಳೆಯರು ಖಾತೆ ತೆರೆಯಲು ಹೆಚ್ಚಿನ ಸಂಖ್ಯೆಯಲ್ಲಿ ಅಂಚೆ ಕಚೇರಿ ಮುಂದೆ ಜಮಾಯಿಸುತ್ತಿದ್ದಾರೆ. ಈಗ ಮಹಿಳೆಯರು ಯಾವ ಗ್ಯಾರಂಟಿ ಯೋಜನೆಗಾಗಿ ಅಂಚೆ ಕಚೇರಿಯ ಮುಂದೆ ಸೇರಿದ್ದಾರೆ ಎನ್ನುವ ಬಗ್ಗೆ ಯೋಚಿಸುವಂತಾಗಿದೆ. ಸದ್ಯ ಪ್ರಧಾನಿ ನರೇಂದ್ರ ಮೋದಿ ಖಾತೆಗೆ ಹಣ ಹಾಕುತ್ತಾರೆ ಎಂಬ ವದಂತಿಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

PM Modi New Scheme
Image Credit: Livemint

ಮೋದಿ ಸರ್ಕಾರದಿಂದ ಖಾತೆಗೆ 3000 ರೂ.
ಪ್ರಧಾನಿ ನರೇಂದ್ರ ಮೋದಿ ಅವರು ಅಂಚೆ ಕಚೇರಿಯಲ್ಲಿ ಮಹಿಳೆಯರ ಖಾತೆಗೆ ತಲಾ 3,000 ರೂ.ಗಳನ್ನು ಜಮಾ ಮಾಡಲಿದ್ದಾರೆ ಎಂಬ ವದಂತಿ ಹಬ್ಬಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಅಂಚೆ ಕಚೇರಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಖಾತೆ ತೆರೆಯುತ್ತಿದ್ದಾರೆ. ಜೊತೆಗೆ ಮೋದಿ ಯೋಜನೆ ಬಗ್ಗೆಯೂ ವಿಚಾರಿಸುತ್ತಿದ್ದಾರೆ. ಈ ಬಗ್ಗೆ ಮಹಿಳೆಯರನ್ನು ಕೇಳಿದಾಗ ಮೋದಿ 3 ಸಾವಿರ ಹಾಕುತ್ತಾರೆ ಎಂಬ ಸುದ್ದಿ ಸಿಕ್ಕಿದ್ದರಿಂದ ಆ ವಿಷಯಕ್ಕೆ ಬಂದೆವು ಎನ್ನುತ್ತಿದ್ದಾರೆ. ಬಹುತೇಕರು ಯಾವುದೇ ಅಧಿಕೃತ ಮಾಹಿತಿ ಪಡೆಯದೇ ಬಂದು ಅಕ್ಕಪಕ್ಕದವರ ಮಾತು ಕೇಳಿ ಬಂದಿದ್ದಾರೆ.

ಪೋಸ್ಟ್ ಆಫೀಸ್ ಮುಂದೆ ಕ್ಯೂ ನಿಂತ ಮಹಿಳೆಯರು
ಬಂದವರಿಗೆ ನೈಜ ಮಾಹಿತಿ ನೀಡಲು ಅಂಚೆ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದರೂ ಪ್ರತಿನಿತ್ಯ ನೂರಾರು ಮಂದಿ ಅಂಚೆ ಇಲಾಖೆಯ ಮುಂದೆ ಜಮಾಯಿಸುತ್ತಿದ್ದಾರೆ. ಅಂತಹ ಯಾವುದೇ ಯೋಜನೆಗಳ ಬಗ್ಗೆ ನಮಗೆ ಮಾಹಿತಿ ತಿಳಿದಿಲ್ಲ. ಆದರೆ ಖಾತೆ ತೆರೆಯುತ್ತೇವೆ ಎಂದು ಬಂದವರನ್ನು ವಾಪಸ್ ಕಳುಹಿಸುವುದಿಲ್ಲ. ಕನಿಷ್ಠ ಮೊತ್ತ ಪಾವತಿಸಿ ಖಾತೆ ತೆರೆಯುವ ಮೂಲಕ ಕಳುಹಿಸುತ್ತಿದ್ದೇವೆ. ಸರ್ಕಾರದ ಯಾವುದೇ ಯೋಜನೆ ಇದ್ದರೆ ಹಣ ಬರುತ್ತದೆ. ಆದರೆ ನಾವು ಈ ಬಗ್ಗೆ ಖಾತರಿ ನೀಡುವುದಿಲ್ಲ ಎಂದು ಅಂಚೆ ಕಚೇರಿ ಸಿಬ್ಬಂದಿ ಖಾತೆ ತೆರೆಯಲು ಬಂದವರಿಗೆ ಮಾಹಿತಿ ನೀಡುತ್ತಿದ್ದಾರೆ.

PM Modi Latest News
Image Credit: The Hindu

Join Nadunudi News WhatsApp Group

Join Nadunudi News WhatsApp Group