Mudra Loan Update: ಸ್ವಂತ ಬಿಸಿನೆಸ್ ಮಾಡುವವರಿಗೆ ಮೋದಿ ಸರ್ಕಾರದಿಂದ 20 ಲಕ್ಷ ರೂ, ಇಂದೇ ಯೋಜೆನೆಗೆ ಅರ್ಜಿ ಹಾಕಿ

ಇನ್ನುಮುಂದೆ ಮುದ್ರಾ ಯೋಜನೆಯಡಿ ಪಡೆಯಿರಿ 20 ಲಕ್ಷ ಸಾಲ

PM Mudra Loan Amount Hike: ಕೇಂದ್ರ ಸರ್ಕಾರ ನಿಮ್ಮ ಸ್ವಂತ ಉದ್ಯೋಗದ ಕನಸಿಗೆ ಸಹಾಯ ಮಾಡಲು ಹೊಸ ರೀತಿಯ ಯೋಜನೆಯನ್ನು ಪರಿಚಯಿಸುತ್ತಿದೆ. ಹೆಚ್ಚಿನ ಬಡ್ಡಿ ಪಾವತಿಸದೇ, ಯಾವುದೇ ಗ್ಯಾರಂಟಿಯನ್ನು ನೀಡದೆ ನೀವು ಸರ್ಕಾರದಿಂದ Mudra Yojana ಅಡಿಯಲ್ಲಿ ನಿಮ್ಮ ಸ್ವಂತ ಉದ್ಯೋಗದ ಕನಸಿಗೆ ಹಣದ ಸಹಾಯವನ್ನು ಪಡೆದುಕೊಳ್ಳಬಹುದು. ಸದ್ಯ ಕೇಂದ್ರ ಸರ್ಕಾರ ಈ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುದ್ರಾ ಯೋಜನೆಯಡಿ ಅರ್ಹರು ದುಪ್ಪಟ್ಟು ಲಾಭವನ್ನು ಪಡೆಯಬಹುದು.

PM Mudra Loan Amount Hike
Image Credit: Informalnewz

ಈ ಯೋಜನೆಯ ಸಾಲದ ಮೊತ್ತ ಹೆಚ್ಚಳ
ಸರ್ಕಾರ 2015 ರಲ್ಲಿ Pradhan Mantri Mudra ಯೋಜನೆಯನ್ನು ಪ್ರಾರಂಭಿಸಿದೆ. ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡಲು ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಯನ್ನು ಪರಿಚಯಿಸಲಾಗಿದೆ. ಈ ಯೋಜನೆಯನ್ನು ಮೂರು ಹಂತಗಳಾಗಿ ವರ್ಗೀಕರಿಸಲಾಗಿದೆ. ಇದರ ಅಡಿಯಲ್ಲಿ ಅರ್ಹರು ಮುದ್ರಾ ಸಾಲವನ್ನು ತೆಗೆದುಕೊಳ್ಳುವ ಮೂಲಕ ತಮ್ಮ ವ್ಯವಹಾರವನ್ನು ಪ್ರಾರಂಭಿಸಬಹುದು. ಈ ಹಿಂದೆ ಮುದ್ರಾ ಯೋಜನೆಯಡಿ 10 ಲಕ್ಷದವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದಿತ್ತು. ಆದರೆ ಇದೀಗ 2024 ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮುದ್ರಾ ಯೋಜನೆಯ ಸಾಲದ ಮೊತ್ತವನ್ನು ಹೆಚ್ಚಿಸಿದ್ದಾರೆ.

ಇನ್ನುಮುಂದೆ ಮುದ್ರಾ ಯೋಜನೆಯಡಿ ಪಡೆಯಿರಿ 20 ಲಕ್ಷ ಸಾಲ
ಹೌದು, ಇನ್ನುಮುಂದೆ ಮುದ್ರಾ ಯೋಜನೆಯಡಿ ಅರ್ಹರು 10 ಲಕ್ಷದ ಬದ್ಲಗಿ 20 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಮುದ್ರಾ ಸಾಲ ಯೋಜನೆಗೆ 24 ರಿಂದ 70 ವರ್ಷದ ಭಾರತೀಯರು ಅರ್ಜಿ ಸಲ್ಲಿಸಬಹುದಾಗಿದೆ. ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್ ಪೋರ್ಟ್, ವಿಳಾಸ ಪುರಾವೆ ನೀಡುವ ಮೂಲಕ ನೀವು PMMY ಅರ್ಜಿ ಸಲ್ಲಿಸಿ ಸಾಲವನ್ನು ಪಡೆಯಬಹುದು. ಅರ್ಜಿ ಸಲ್ಲಿಕೆಯ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿದೆ.

PM Mudra Loan Scheme
Image Credit: Webdunia

ಮುದ್ರಾ ಯೋಜನೆಯಡಿ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ…?
•ನೀವು ಮುದ್ರಾ ಯೋಜನೆಯಡಿ ಸಾಲವನ್ನು ಪಡೆಯಲು ಬಯಸಿದರೆ ಬ್ಯಾಂಕ್ ಅಧಿಕಾರಿಗಳಿಗೆ ವ್ಯವಹಾರದ ಮಾದರಿಯನ್ನು ತೋರಿಸಬೇಕಾಗುತ್ತದೆ.

•ವ್ಯವಹಾರದ ಮೂಲ ಮಾದರಿಯ ಆಧಾರದ ಮೇಲೆ ಬ್ಯಾಂಕ್ ನಿಮಗೆ 10 ಲಕ್ಷ ಸಾಲವನ್ನು ನೀಡುತ್ತದೆ.

Join Nadunudi News WhatsApp Group

•ನಿಮ್ಮ ವ್ಯವಹಾರಕ್ಕೆ ನೀವು ಕೇವಲ 25 % ಹಣವನ್ನು ಖರ್ಚು ಮಾಡಿದರೆ ಬ್ಯಾಂಕ್ ನಿಮಗೆ 75 % ಸಾಲವನ್ನು ನೀಡುತ್ತದೆ.

•ಸೂಕ್ಷ ಮತ್ತು ಸಣ್ಣ ಕೈಗಾರಿಕೆಗಳಿಗೆ ಈ ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ ಸಹಾಯವಾಗುತ್ತದೆ.

•ಇನ್ನು mudra.org.in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಸಾಲದ ಅರ್ಜಿಯನ್ನು ಭರ್ತಿಮಾಡಿ ಹತ್ತಿರದ ಬ್ಯಾಂಕ್ ಶಾಖೆಗೆ ಅರ್ಜಿಯನ್ನು ಸಲ್ಲಿಸಿದರೆ ಬ್ಯಾಂಕ್ ನಿಮಗೆ ಸಾಲವನ್ನು ನೀಡುತ್ತದೆ.

PM Mudra Loan New Update
Image Credit: Jagranjosh

Join Nadunudi News WhatsApp Group