PMMY Loan Process: ದೇಶದ ಎಲ್ಲಾ ಯುವಕ ಯುವತಿಯರಿಗೆ ಕೇಂದ್ರದಿಂದ ಸಿಗಲಿದೆ 10 ಲಕ್ಷ, ಹಣ ಪಡೆದು ಕೆಲಸ ಆರಂಭಿಸಿ.
ಈ ಯೋಜನೆಯಲ್ಲಿ ಸಿಗಲಿದೆ 10 ಲಕ್ಷ ಸಾಲ, ಮುದ್ರಾ ಲೋನ್ ತೆಗೆದುಕೊಳ್ಳುವುದು ಹೇಗೆ..?
Pradhan Mantri Mudra Yojana: ಭಾರತ ಸರ್ಕಾರವು ಸಣ್ಣ ವ್ಯಾಪಾರ ಮಾಲೀಕರು ಅಥವಾ ದೇಶದಲ್ಲಿ ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸುವ ವ್ಯಕ್ತಿಗಳಿಗೆ ಹಣಕಾಸಿನ ನೆರವು ನೀಡಲು ವಿವಿಧ ಯೋಜನೆಯನ್ನು ಪರಿಚಯಿಸಿದೆ.
ಸರ್ಕಾರದ ಅನೇಕ ಯೋಜನೆಗಳಲ್ಲಿ PM Mudra ಸಾಲ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಡಿ ಪುರುಷರು, ಮಹಿಳೆಯರು ಮತ್ತು ಸಣ್ಣ ವ್ಯಾಪಾರ ಮಾಲೀಕರಿಗೆ ಸಾಲವನ್ನು ಹಣಕಾಸಿನ ನೆರವು ರೂಪದಲ್ಲಿ ನೀಡಲಾಗುತ್ತಿದೆ. ಇದೀಗ ಮೋದಿ ಸರ್ಕಾರ ಮುದ್ರಾ ಸಾಲದ ಬಗ್ಗೆ ಸಂಪೂರ್ಣ ವಿವರವನ್ನು ತಿಳಿಯೋಣ.
Pradhan Mantri Mudra Yojana
ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು ಏಪ್ರಿಲ್ 2015 ರಲ್ಲಿ ಭಾರತ ಸರ್ಕಾರ ಪರಿಚಯಿಸಿದೆ. ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಯನ್ನು ಮೂರು ಹಂತಗಳಾಗಿ ವರ್ಗೀಕರಿಸಲಾಗಿದೆ. ಇದರ ಅಡಿಯಲ್ಲಿ ಅರ್ಹ ಮಹಿಳೆಯರು ಮುದ್ರಾ ಸಾಲವನ್ನು ತೆಗೆದುಕೊಳ್ಳುವ ಮೂಲಕ ತಮ್ಮ ವ್ಯವಹಾರವನ್ನು ಪ್ರಾರಂಭಿಸಬಹುದು. ಮುದ್ರಾ ಸಾಲ ಯೋಜನೆಯು ಮೂರು ಹಂತಗಳನ್ನು ಹೊಂದಿದೆ. ಈ ಬಗ್ಗೆ ವಿವರ ಇಲ್ಲಿದೆ.
ಈ ಯೋಜನೆಯಲ್ಲಿ ಮೂರು ಹಂತದಲ್ಲಿ ಸಾಲವನ್ನು ನೀಡಲಾಗುತ್ತದೆ.
*ಮೊದಲನೆಯದಾಗಿ ಶಿಶು ಸಾಲದಡಿ 50 ಸಾವಿರ ರೂಪಾಯಿಗಳ ಖಾತರಿ ಸಾಲ ನೀಡಲಾಗುತ್ತಿದೆ. ಇದಲ್ಲದೆ
*ಕಿಶೋರ್ ಸಾಲದ ಅಡಿಯಲ್ಲಿ 5 ಲಕ್ಷದ ವರೆಗೆ ಮೊತ್ತವನ್ನು ನೀಡಲಾಗುತ್ತಿದೆ.
*ಇನ್ನು ದೊಡ್ಡ ಕೆಲಸ ಮಾಡಬೇಕೆಂದರೆ ತರುಣ್ ಯೋಜನೆಯಡಿ 10 ಲಕ್ಷ ರೂಪಾಯಿಯ ವರೆಗೆ ಸಾಲವನ್ನು ನೀಡಲಾಗುತ್ತಿದೆ.
ಮುದ್ರಾ ಲೋನ್ ತೆಗೆದುಕೊಳ್ಳುವುದು ಹೇಗೆ..?
1. ನೀವು ಮುದ್ರಾ ಯೋಜನೆಯಡಿ ಸಾಲವನ್ನು ಪಡೆಯಲು ಬಯಸಿದರೆ ಬ್ಯಾಂಕ್ ಅಧಿಕಾರಿಗಳಿಗೆ ವ್ಯವಹಾರದ ಮಾದರಿಯನ್ನು ತೋರಿಸಬೇಕಾಗುತ್ತದೆ.
2. ವ್ಯವಹಾರದ ಮೂಲ ಮಾದರಿಯ ಆಧಾರದ ಮೇಲೆ ಬ್ಯಾಂಕ್ ನಿಮಗೆ 10 ಲಕ್ಷ ಸಾಲವನ್ನು ನೀಡುತ್ತದೆ.
3 . ನಿಮ್ಮ ವ್ಯವಹಾರಕ್ಕೆ ನೀವು ಕೇವಲ 25 % ಹಣವನ್ನು ಖರ್ಚು ಮಾಡಿದರೆ ಬ್ಯಾಂಕ್ ನಿಮಗೆ 75 % ಸಾಲವನ್ನು ನೀಡುತ್ತದೆ.
4. ಇನ್ನು 24 ರಿಂದ 70 ವರ್ಷದವರು ಯೋಜನೆಗೆ ಅರ್ಜಿ ಸಲ್ಲಿಸಬಹುದು.
5. ಸೂಕ್ಷ ಮತ್ತು ಸಣ್ಣ ಕೈಗಾರಿಕೆಗಳಿಗೆ ಈ ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ ಸಹಾಯವಾಗುತ್ತದೆ.
6. ಇನ್ನು mudra.org.in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಸಾಲದ ಅರ್ಜಿಯನ್ನು ಭರ್ತಿಮಾಡಿ ಹತ್ತಿರದ ಬ್ಯಾಂಕ್ ಶಾಖೆಗೆ ಅರ್ಜಿಯನ್ನು ಸಲ್ಲಿಸಿದರೆ ಬ್ಯಾಂಕ್ ನಿಮಗೆ ಸಾಲವನ್ನು ನೀಡುತ್ತದೆ.