Ads By Google

PM Poshan: ಎಲ್ಲಾ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ನೀಡಿದ ಮೋದಿ, ವಿಶೇಷ ಭೋಜನ ಯೋಜನೆಗೆ ಆರಂಭ

PM Poshan New Update

Image Credit: Original Source

Ads By Google

PM Poshan New Update: ರಾಜ್ಯ ಸರ್ಕಾರ ಇದೀಗ ಶಾಲಾ ವಿದ್ಯಾರ್ಥಿಗಳಿಗೆ ಅನೇಕ ಸೌಲಭ್ಯವನ್ನು ನೀಡುತ್ತಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಹೆಚ್ಚಿನ ಒತ್ತು ನೀಡುತ್ತಿದೆ ಎನ್ನಬಹುದು. ವಿದ್ಯಾರ್ಥಿಗಳಿಗೆ ಈಗಾಗಲೇ ಹಲವು ಸೌಲಭ್ಯವನ್ನು ನೀಡುತ್ತಿದ್ದು, ಇನ್ನಷ್ಟು ಸೌಲಭ್ಯವನ್ನು ನೀಡುವ ಬಗ್ಗೆ ಯೋಜನೆ ಹಾಕುತ್ತಲೇ ಇದೆ.

ಶಾಲಾ ವಿದ್ಯಾರ್ಥಿಗಳ ಉತ್ತಮ ಆರೋಗ್ಯಕ್ಕಾಗಿ ಈಗಾಗಲೇ ಪೌಷ್ಟಿಕಾಂಶ ಆಹಾರವನ್ನು ನೀಡುತ್ತಿರುವ ರಾಜ್ಯ ಸರ್ಕಾರ ಇದೀಗ ವಿಶೇಷ ಭೋಜನ ಕಾರ್ಯಕ್ರಮವನ್ನು ಆಯೋಜಿಸಲು ಯೋಜನೆ ಹಾಕಿಕೊಂಡಿದೆ. ಈ ಯೋಜನೆ ಜಾರಿಯಾದರೆ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟ ಇನ್ನಷ್ಟು ವಿಶೇಷವಾಗಲಿದೆ.

Image Credit: Goodreturns

ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್
ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ಮತ್ತೊಂದು ಸಂತಸದ ಸುದ್ದಿ ನೀಡಿದ್ದು, 2024-25ನೇ ಸಾಲಿನಲ್ಲಿ ಪಿ.ಎಂ. ಪೋಷಣ್ (ಮಧ್ಯಾಹ್ನ ಊಟ ಯೋಜನೆ) ಅಡಿಯಲ್ಲಿ ಶಾಲಾ ಮಕ್ಕಳಿಗೆ ‘ವಿಶೇಷ ಭೋಜನ ಕಾರ್ಯಕ್ರಮ’ ಆಯೋಜಿಸಲು ಆದೇಶ ಹೊರಡಿಸಲಾಗಿದೆ.

ಕೇಂದ್ರ ಸರ್ಕಾರವು ಸೂಚಿಸಿರುವ ‘ವಿಶೇಷ ಭೋಜನ’ ಪರಿಕಲ್ಪನೆಯು ಸಮುದಾಯದ ಸಹಭಾಗಿತ್ವದ ಕಾರ್ಯಕ್ರಮವಾಗಿದ್ದು, ಇದರಲ್ಲಿ ಎನ್‌ಜಿಒಗಳು / ಕೈಗಾರಿಕೆಗಳು / ವಾಣಿಜ್ಯ / ವ್ಯಾಪಾರ ಇತ್ಯಾದಿ ಸಮುದಾಯ ಸದಸ್ಯರು, ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಔತಣಕೂಟ, ಮದುವೆ/ಮದುವೆ ವಾರ್ಷಿಕೋತ್ಸವಗಳು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜನ್ಮದಿನಗಳು, ರಾಜ್ಯ ಸಂಸ್ಥಾಪನಾ ದಿನಗಳು, ರಾಷ್ಟ್ರೀಯ ಪ್ರಾಮುಖ್ಯತೆಯ ದಿನಗಳು ಮತ್ತು ಇತರ ಯಾವುದೇ ವಿಶೇಷ ಸಂದರ್ಭಗಳಲ್ಲಿ ಪೌಷ್ಟಿಕ ಮತ್ತು ಆರೋಗ್ಯಕರ ಊಟ/ಆಹಾರ ಪದಾರ್ಥಗಳನ್ನು ಒದಗಿಸಲಾಗಿದೆ ಎಂದು ಈ ಕಾರ್ಯಕ್ರಮವು ಸ್ಪಷ್ಟಪಡಿಸುತ್ತದೆ ಎಂದು ಮಾರ್ಗಸೂಚಿಯನ್ನು ನೀಡಿದೆ.

Image Credit: Hindustantimes

ವಿಶೇಷ ಭೋಜನದ ಮೆನುವಿನಲ್ಲಿ ಇದನ್ನು ಅಳವಡಿಸಬೇಕು
•ಆಹಾರ ಧಾನ್ಯಗಳನ್ನು ಸಂಗ್ರಹಿಸುವಾಗ, ಅಡುಗೆ ಮಾಡುವಾಗ ಮತ್ತು ಬಡಿಸುವಾಗ ಸ್ವಚ್ಛತೆ ಮತ್ತು ನೈರ್ಮಲ್ಯ ಮಾನದಂಡಗಳನ್ನು ಅನುಸರಿಸಬೇಕು.

•ಆಹಾರ ಕಲಬೆರಕೆ ಮತ್ತು ಆಹಾರ ಹಾಳಾಗುವುದನ್ನು ತಡೆಯಲು ಗುಣಮಟ್ಟದ ಸುರಕ್ಷತಾ ಕ್ರಮಗಳನ್ನು ಗಮನಿಸಬೇಕು.

•ಋತುಮಾನದ ಹಣ್ಣುಗಳನ್ನು ವಿಶೇಷ ಭೋಜನ ಮೆನುಗೆ ಸೇರಿಸಬಹುದು.

•ಕುಡಿಯಲು ಮತ್ತು ಅಡುಗೆ ಮಾಡಲು ಶುದ್ಧ ಕುಡಿಯುವ ನೀರು ಒದಗಿಸಬೇಕು.

•ಜಂಕ್ (ನೂಡಲ್ಸ್, ಚಿಪ್ಸ್, ಚಾಕೊಲೇಟ್ ಇತ್ಯಾದಿ) ಮತ್ತು ಹಳೆಯ ಆಹಾರ ಪದಾರ್ಥಗಳನ್ನು ವಿದ್ಯಾರ್ಥಿಗಳಿಗೆ ನೀಡಬಾರದು.

•ಶಿಕ್ಷಕರು/ಅಡುಗೆಯವರು ವಿದ್ಯಾರ್ಥಿಗಳಿಗೆ ಊಟ ಬಡಿಸುವ ಮೊದಲು ರುಚಿ ನೋಡಬೇಕು.

•ಕೈ ತೊಳೆಯುವುದು ಮತ್ತು ಮೌಖಿಕ ನೈರ್ಮಲ್ಯವನ್ನು ಉತ್ತಮ ಅಭ್ಯಾಸಗಳಾಗಿ ಪ್ರಚಾರ ಮಾಡಬೇಕು.

•ಆಹಾರವನ್ನು ತಯಾರಿಸುವಾಗ, ಅಡುಗೆ ಮಾಡುವಾಗ ಮತ್ತು ಬಡಿಸುವಾಗ ಸ್ವಚ್ಛತೆ, ಸುರಕ್ಷತೆ ಮತ್ತು ನೈರ್ಮಲ್ಯದ ಮಾನದಂಡಗಳನ್ನು ಅನುಸರಿಸಬೇಕು.

Image Credit: Indianexpress
Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in