Ads By Google

Ujjwala Yojana: BPL ಕಾರ್ಡ್ ಇದ್ದವರು ಈ ಕೆಲಸ ಮಾಡಿದರೆ LPG ಸಿಲಿಂಡರ್ ಉಚಿತ, ಕೇಂದ್ರದ ಯೋಜನೆ.

Ujjwala Yojana Free Gas Cylinder

Image Source: The Economic Times

Ads By Google

Ujjwala Yojana Free Gas Cylinder: ದೇಶದಲ್ಲಿ 2016 ರಲ್ಲಿ Pradhan Mantri Ujjwala ಯೋಜನೆ ಪರಿಚಯವಾಗಿದ್ದು, ಈ ಯೋಜನೆಯಡಿ ಕೋಟ್ಯಾಂತರ ಮಹಿಳೆಯರು ಉಚಿತ ಗ್ಯಾಸ್ ಸಿಲಿಂಡರ್ ಅನ್ನು ಪಡೆದುಕೊಂಡಿದ್ದಾರೆ. PMU ಯೋಜನೆಯಡಿ ಮಹಿಳೆಯರು ಗ್ಯಾಸ್ ಸಿಲಿಂಡರ್ ಗಳ ಮೇಲೆ ಸಬ್ಸಿಡಿ ಆಗಿ 300 ರೂ. ಪಡೆಯುತ್ತಿದ್ದಾರೆ.

ಸದ್ಯ ದೇಶದ ಮಹಿಳೆಯರು ಈ ಯೋಜನೆಯಡಿ ಮಹಿಳೆಯರು ಉಚಿತ ಗ್ಯಾಸ್ ಸಿಲಿಂಡರ್ ಅನ್ನು ಪಡೆಯಲು ಮೋದಿ ಸರ್ಕಾರ ಮೊತ್ತಮ್ಮೆ ಅವಕಾಶವನ್ನು ನೀಡಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಕೆಯನ್ನು ಆರಂಭಿಸಿದೆ. ಇಂತಹ ಮಹಿಳೆಯರು ಉಜ್ವಲ ಯೋಜನೆಗೆ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

Image Credit: India

BPL ಕಾರ್ಡ್ ಇದ್ದವರು ಈ ಕೆಲಸ ಮಾಡಿದರೆ LPG ಸಿಲಿಂಡರ್ ಉಚಿತ
ದೇಶದ ಮಹಿಳೆಯರು Pradhan Mantri Ujjwala ಯೋಜನೆಯ ಅಡಿಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಅನ್ನು ಪಡೆಯಬಹದು. BPL Ration Card ಹೊಂದಿರುವ ಮಹಿಳೆಯರು ಅರ್ಜಿ ಸಲ್ಲಿಸುವ ಮೂಲಕ ಉಚಿತ ಗ್ಯಾಸ್ ಸಿಲಿಂಡರ್ ಅನ್ನು ಪಡೆಯಬಹುದು. ಉಜ್ವಲಾ ಯೋಜನೆ 2.0 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಒಂದು ಕೋಟಿಗೂ ಹೆಚ್ಚು ಮನೆಗಳನ್ನು ಎಲ್‌ಪಿಜಿ ಗೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ.

ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬಿಪಿಎಲ್ ಕಾರ್ಡ್, ಬಿಪಿಎಲ್ ಪಟ್ಟಿಯಲ್ಲಿ ಹೆಸರು ಮುದ್ರಣ, ಪಾಸ್‌ ಪೋರ್ಟ್ ಗಾತ್ರದ ಫೋಟೋ, ಬ್ಯಾಂಕ್ ಫೋಟೋಕಾಪಿ, ವಯಸ್ಸಿನ ಪ್ರಮಾಣಪತ್ರ, ಮೊಬೈಲ್ ಸಂಖ್ಯೆ ಸೇರಿದಂತೆ ಇನ್ನಿತರ ಮುಖ್ಯ ದಾಖಲೆಯನ್ನು ನೀಡಿ ಅರ್ಜಿ ಸಲ್ಲಿಸಿ ಉಚಿತ ಗ್ಯಾಸ್ ಸಿಲಿಂಡರ್ ಅನ್ನು ಪಡೆದುಕೊಳ್ಳಬಹುದು. ಉಚಿತ ಗ್ಯಾಸ್ ಸಿಲಿಂಡರ್ ಅರ್ಜಿ ಸಲ್ಲಿಕೆಗೆ BPL Ration Card ಹೊಂದಿರುವ ಮಹಿಳೆಯರು ಮಾತ್ರ ಅರ್ಹರಾಗಿರುತ್ತಾರೆ ಎನ್ನುವುದು ನಿಮಗೆ ತಿಳಿದಿರಲಿ.

Image Credit: News 24

ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಯಾರು ಅರ್ಹರು…?
•ಬಡತನ ರೇಖೆಗಿಂತ ಕೆಳಗಿರುವವರು ಅಂದರೆ BPL Ration card ಹೊಂದಿರುವವರು.

•ಭಾರತೀಯ ಮಹಿಳೆಯರು.

•ಅರ್ಜಿದಾರರ ವಯಸ್ಸು 18 ವರ್ಷಕ್ಕಿಂತ ಹೆಚ್ಚಿರಬೇಕು.

•ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದಲ್ಲಿ 1 ಲಕ್ಷಕ್ಕಿಂತ ಕಡಿಮೆ, ನಗರ ಪ್ರದೇಶದಲ್ಲಿ 2 ಲಕ್ಷಕ್ಕಿಂತ ಕಡಿಮೆ ಇರಬೇಕು.

•ಅರ್ಜಿದಾರರ ಕುಟುಂಬವು ಇಲ್ಲಿಯವರೆಗೆ ಯಾವುದೇ ಗ್ಯಾಸ್ ಸಂಪರ್ಕವನ್ನು ಪಡೆದಿರಬಾರದು.

ಈ ರೀತಿಯಾಗಿ PM Ujjwala ಯೋಜನೆಗೆ ಅರ್ಜಿ ಸಲ್ಲಿಸಿ
*https://www.pmuy.gov.in/index.aspx ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

*ವೆಬ್ ಸೈಟ್ ಓಪನ್ ಆದ ತತ್ಕ್ಷಣ HP, Inden ಅಥವಾ Bharat Gas ನಂತಹ ಗ್ಯಾಸ್ ವಿತರಕರನ್ನು ಆಯ್ಕ ಮಾಡಬೇಕು. ಹೆಸರು, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಇತರ ವಿವರಗಳನ್ನು ನೀ ಅರ್ಜಿಯನ್ನು ಭರ್ತಿ ಮಾಡಬೇಕು.

*ದಾಖಲೆಗಳ ಸಾಫ್ಟ್ ಕಾಪಿಯನ್ನು ವೆಬ್ ಸೈಟ್ ಗೆ ಅಪ್ಲೋಡ್ ಮಾಡಬೇಕುತ್ತದೆ.

*ದಾಖಲೆಗಳನ್ನು ಪರಿಶೀಲಿಸಿದ ನಂತರ ಹೊಸ ಗ್ಯಾಸ್ ಸಂಪರ್ಕವನ್ನು ನೀಡಲಾಗುತ್ತದೆ.

Image Credit: TV9 Hindi
Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in