PM Loan Scheme: ಈ ಯೋಜನೆಯ ಅಡಿಯಲ್ಲಿ ಕೇಂದ್ರದಿಂದ ಯಾವುದೇ ಗ್ಯಾರೆಂಟಿ ಇಲ್ಲದೆ ಸಿಗಲಿದೆ 2 ಲಕ್ಷ ರೂ ಸಾಲ.

ಈ ಯೋಜನೆಯಡಿ 18 ರೀತಿಯ ಸ್ವಂತ ಉದ್ಯೋಗ ಮಾಡುತ್ತಿರುವವರಿಗೆ ಯಾವುದೇ ಗ್ಯಾರೆಂಟಿ ಇಲ್ಲದೆ ಸಿಗಲಿದೆ 2 ಲಕ್ಷ ರೂ ಸಾಲ.

PM Vishwakarma Loan Scheme 2024: ಕೇಂದ್ರದ ಮೋದಿ ಸರ್ಕಾರ ವಿವಿಧ ಯೋಜನೆಗಳನ್ನು ಪರಿಚಯಿಸುತ್ತ ಜನಸಾಮಾನ್ಯರಿಗೆ ನೆರವಾಗುತ್ತಿದೆ. ಸದ್ಯ ಮೋದಿ ಸರ್ಕಾರ ಸ್ವಂತ ಉದ್ಯೋಗದ ಕನಸು ಕಾಣುವವರಿಗಾಗಿ ವಿಶೇಷ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಹೆಸರು PM Vishwakarma ಯೋಜನೆಯಾಗಿದೆ.

ಈ ಯೋಜನೆಯಡಿ ದೇಶದ ಕುಶಲಕರ್ಮಿಗಳು ಹೆಚ್ಚಿನ ಸಹಾಯವನ್ನು ಪಡೆಯಬಹುದಾಗಿದೆ. ಕರ ಕುಶಲಕರ್ಮಿಗಳ ಅಭಿವೃದಿಗಾಗಿ ಸರ್ಕಾರ ಈ ಯೋಜನೆಯನ್ನು ಪರಿಚಯಿಸಿದೆ. ಕೇಂದ್ರ ಸರ್ಕಾರವು ಈ ಯೋಜನೆಗಾಗಿ 13 ಸಾವಿರ ಕೋಟಿ ಹಣವನ್ನು ಮೀಸಲಿಟ್ಟಿದೆ. ಈ ಯೋಜನೆಯಡಿ 18 ರೀತಿಯ ಸ್ವಂತ ಉದ್ಯೋಗ ಮಾಡುತ್ತಿರುವವರಿಗೆ ಸರ್ಕಾರ ಸಾಲವನ್ನು ನೀಡಲಿದೆ. 

PM Vishwakarma Scheme
Image Credit: Good Returns

ಯಾವುದೇ ಗ್ಯಾರೆಂಟಿ ಇಲ್ಲದೆ ಸಿಗಲಿದೆ 2 ಲಕ್ಷ ರೂ ಸಾಲ
ದೇಶದ ಪ್ರಧಾನಿ ಮೋದಿ ಅವರು ಸಾಂಪ್ರದಾಯಿಕ ಕೌಶಲ್ಯ ಹೊಂದಿರುವ ಜನರನ್ನು ಬೆಂಬಲಿಸುವ ಉದ್ದೇಶದಿಂದ Vishwakarma Yojana ಪರಿಚಯಿಸಿದ್ದಾರೆ. ಇನ್ನುVishwakarma Yojana ಅಡಿಯಲ್ಲಿ ಭಾರತೀಯ ಕುಶಲಕರ್ಮಿಗಳಿಗೆ ಅನುಕೂಲವಾಗುವ ಉದ್ದೇಶವನ್ನು ಹೊಂದಿದೆ. PM Vishwakarma Yojana ಅಡಿಯಲ್ಲಿ ಅರ್ಹರು 2 ಲಕ್ಷದ ವರೆಗೆ ಸಾಲವನ್ನು ಪಡೆಯಬಹುದು.

ಮೊದಲಿದೆ Vishwakarma Yojana ಅಡಿಯಲ್ಲಿ ಕುಶಲಕರ್ಮಿಗಳು ಸಬ್ಸಿಡಿ ಬಡ್ಡಿದರದಲ್ಲಿ 10000 ರೂ. ಗಳನ್ನೂ ಪಾವತಿಸಬೇಕಾಗುತ್ತದೆ. ಪ್ರಧಾನಿ ವಿಶ್ವಕರ್ಮ ಯೋಜನೆಯಡಿ ಕುಶಲಕರ್ಮಿಗಳಿಗೆ ಮೊದಲನೇ ಕಂತಿನಲ್ಲಿ 5 % ಬಡ್ಡಿಯಲ್ಲಿ ರೂ. 1 ಲಕ್ಷ ಸಾಲ, ಎರಡನೇ ಕಂತಿನಲ್ಲಿ 2 ಲಕ್ಷ ರೂ. ಸಾಲವನ್ನು ನೀಡಲಾಗುತ್ತದೆ. ಸರಿಯಾದ ಸಮಯಕ್ಕೆ ಸಾಲದ ಮರುಪಾವತಿ ಮಾಡಿದರೆ 5 % ರಿಯಾಯಿತಿ ಬಡ್ಡಿದರದಲ್ಲಿ ನೀಡಲಾಗುತ್ತದೆ.

PM Vishwakarma Loan Scheme 2024
Image Credit: Kuchhbhi

ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು….?
•ಕೈ ಮತ್ತು ಉಪಕರಣಗಳೊಂದಿಗೆ ಕೆಲಸ ಮಾಡುವ ಕುಶಲಕರ್ಮಿಗಳು ಈ ಯೋಜನೆಗೆ ಅರ್ಹರಾಗಿರುತ್ತಾರೆ.

Join Nadunudi News WhatsApp Group

•Vishwakarma ಯೋಜನೆಯ ಅರ್ಜಿದಾರರ ವಯಸ್ಸು 18 ವರ್ಷ ದಾಟಿರಬೇಕು.

•ಕುಟುಂಬದ ಯಾವೊಬ್ಬ ಸದಸ್ಯರು ಕೂಡ ಸರ್ಕಾರೀ ಕೆಲಸ ಹೊಂದಿರಬಾರದು.

•ಕಳೆದ 5 ವರ್ಷಗಳಿಂದ ಕೇಂದ್ರ ಸರ್ಕಾರದ ಯಾವುದೇ ಯೋಜನೆಗಳಿಗೆ ಅರ್ಜಿ ಸಲ್ಲಿಸಿರಬಾರದು.

•ಇನ್ನು www.pmvishwakarma.gov.in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಹರು Vishwakarma ಯೋಜನೆಗೆ ನೋಂದಾಯಿಸಿಕೊಳ್ಳಬಹುದು.

•ರೇಷನ್ ಕಾರ್ಡ್, ಆಧಾರ್ ಕಾರ್ಡ್, ಆದಾಯ ಪ್ರಮಾಣಪತ್ರ, ಬ್ಯಾಂಕ್ ಅಕೌಂಟ್ ಡಿಟೈಲ್ಸ್ ನೀಡುವ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಬಹುದು.

PM Modi Vishwakarma Loan Scheme
Image Credit: Business-standard

Join Nadunudi News WhatsApp Group