Loan Scheme: ನರೇಂದ್ರ ಮೋದಿ ಈ ಯೋಜನೆಯ ಅಡಿಯಲ್ಲಿ ಸಣ್ಣ ಬಿಸಿನೆಸ್ ಮಾಡಲು ಸಿಗಲಿದೆ 15000 ರೂ, ಇಂದೇ ಅರ್ಜಿ ಹಾಕಿ

PM ವಿಶ್ವಕರ್ಮ ಯೋಜನೆಯಡಿ ಸಿಗಲಿದೆ 15000

PM Vishwakarma Loan Scheme: ಸದ್ಯ ದೇಶದಲ್ಲಿ ಕೇಂದ್ರ ಮೋದಿ ಸರ್ಕಾರ September ತಿಂಗಳಿನಲ್ಲಿ ದೇಶದಲ್ಲಿ Vishwakarma ಯೋಜನೆಯನ್ನು ಪರಿಚಯಿಸಿದೆ. ಮೋದಿ ಸರ್ಕಾರದ ಈ ಯೋಜನೆಯಡಿ ಸಾಲ ಸೌಲಭ್ಯ ಯಾವಾಗ ಜಾರಿಯಾಗುತ್ತದೆ ಅನ್ನುವುದನ್ನು ಜನರು ಕಾಯುತ್ತಿದ್ದಾರೆ.

ಸದ್ಯ 2024 ರ Loka Sabha ಚುನಾವಣೆಗೂ ಮುನ್ನ ಯೋಜನೆಯ ಲಾಭವನ್ನು ದೇಶದ ಜನತೆಗೆ ನೀಡಲು ಮೋದಿ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈಗಾಗಲೇ ಮೋದಿ ಸರ್ಕಾರ ಈ ಯೋಜನೆಯಾಗಿ ಕೋಟಿ ಕೋಟಿ ಹಣವನ್ನು ಮೀಸಲಿಟ್ಟಿದೆ.

PM Vishwakarma Loan Scheme
Image Credit: wbhrb

PM ವಿಶ್ವಕರ್ಮ ಯೋಜನೆಯಡಿ ಸಿಗಲಿದೆ 15000
Vishwakarma Yojana ಅಡಿಯಲ್ಲಿ ಕುಶಲಕರ್ಮಿಗಳು ಸಬ್ಸಿಡಿ ಬಡ್ಡಿ ದರದಲ್ಲಿ 10,000 ರೂ. ಗಳನ್ನೂ ಪಾವತಿಸಬೇಕಾಗುತ್ತದೆ. ಕುಶಲಕರ್ಮಿಗಳಿಗೆ ಮೊದಲನೇ ಕಂತಿನಲ್ಲಿ 5 % ಬಡ್ಡಿಯಲ್ಲಿ ರೂ. 1 ಲಕ್ಷ ಸಾಲ ನೀಡಲಾಗುತ್ತದೆ. ಎರಡನೇ ಕಂತಿನಲ್ಲಿ 2 ಲಕ್ಷ ರೂ. ಸಾಲವನ್ನು ನೀಡಿ 5 % ರಿಯಾಯಿತಿ ಬಡ್ಡಿ ದರದಲ್ಲಿ ನೀಡಲಾಗುತ್ತದೆ.

ಸಾಲದ ಬಡ್ಡಿದರವು ತುಂಬಾ ಕಡಿಮೆ ಇದ್ದು, Subsidy ಬಡ್ಡಿದರದಲ್ಲಿ ಸಾಲವನ್ನು ಪಡೆಯಬಹುದಾಗಿದೆ. ಇನ್ನು 8 ತಿಂಗಳು ಮತ್ತು 30 ತಿಂಗಳ ಅವಧಿಗೆ ಕ್ರಮವಾಗಿ 5 ಶೇಕಡಾ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತದೆ. ಈ ಯೋಜನೆಯಡಿ ದಿನಕ್ಕೆ 500 ರೂ. ಗಳಂತೆ 5 ರಿಂದ 7 ದಿನಗಳ ಕಾಲ ತರಬೇತಿ ನೀಡಲಾಗುತ್ತದೆ. ಟ್ರೈನಿಂಗ್ ನಂತರ 15,000 ಗಳ ಟೋಲ್ ಕಿಟ್ ಅನ್ನು ನೀಡಲಾಗುತ್ತದೆ.

PM Vishwakarma Yojana latest Update
Image Credit: Sarkarijob

ಯೋಜನೆಗೆ ಯಾರು ಅರ್ಹರು ಮತ್ತು ಅರ್ಜಿ ಸಲ್ಲಿಕೆಯ ವಿಧಾನ
ಕೈ ಮತ್ತು ಉಪಕರಣಗಳೊಂದಿಗೆ ಕೆಲಸ ಮಾಡುವ ಕುಶಲಕರ್ಮಿಗಳು ಈ ಯೋಜನೆಗೆ ಅರ್ಹರಾಗಿರುತ್ತಾರೆ. Vishwakarma ಯೋಜನೆಯ ಅರ್ಜಿದಾರರ ವಯಸ್ಸು 18 ವರ್ಷ ದಾಟಿರಬೇಕು. ಇನ್ನು www.pmvishwakarma.gov.in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಹರು Vishwakarma ಯೋಜನೆಗೆ ನೋಂದಾಯಿಸಿಕೊಳ್ಳಬಹುದು. ರೇಷನ್ ಕಾರ್ಡ್, ಆಧಾರ್ ಕಾರ್ಡ್, ಆದಾಯ ಪ್ರಮಾಣಪತ್ರ, ಬ್ಯಾಂಕ್ ಅಕೌಂಟ್ ಡಿಟೈಲ್ಸ್ ನೀಡುವ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group

Join Nadunudi News WhatsApp Group