Vishwakarma Loan: ಯಾವುದೇ ಗ್ಯಾರೆಂಟಿ ನೀಡುವ ಅಗತ್ಯ ಇಲ್ಲ, ಬಿಸಿನೆಸ್ ಮಾಡುವ ಮಹಿಳೆಯರಿಗೆ ಸಿಗಲಿದೆ 2 ಲಕ್ಷ ಸಾಲ

ಸ್ವಂತ ಉದ್ಯೋಗ ಮಾಡುವ ಮಹಿಳೆಯರಿಗೆ ಯಾವುದೇ ಗ್ಯಾರಂಟಿ ಇಲ್ಲದೆ 2 ಲಕ್ಷ ಸಾಲ

PM Vishwakarma Loan Scheme 2024: ಕೇಂದ್ರದ ಮೋದಿ ಸರ್ಕಾರ ದೇಶದ ಜನತೆಗಾಗಿ ವಿವಿಧ ಕಲ್ಯಾಣ ಯೋಜನೆಗಳನ್ನು ಪರಿಚಯಿಸಿದೆ. ಅದರಲ್ಲೂ ಹೆಚ್ಚಾಗಿ ಮಹಿಳೆಯರಿಗಾಗಿ ವಿವಿಧ ಯೋಜನೆಯನ್ನು ಪರಿಚಯಿಸುತ್ತ ಅವರಿಗೆ ಆರ್ಥಿಕವಾಗಿ ನೆರವಾಗುತ್ತಿದೆ. ಸದ್ಯ ಕೇಂದ್ರ ಸರ್ಕಾರ ಮಹಿಳೆಯರಿಗೆ ಸಾಲ ಸೌಲಭ್ಯವನ್ನ ನೀಡಲು ಮುಂದಾಗಿದೆ.

ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಹೊಲಿಗೆ ಮಾಡುತ್ತಿರುವವರಿಗೆ ಕೇಂದ್ರ ಸರ್ಕಾರ ಈ ವಿಶೇಷ ಯೋಜನೆ ಸಹಾಯವಾಗಲಿದೆ. ಹೊಲಿಗೆ ಕೆಲಸವನ್ನು ಮಾಡುತ್ತಿರುವವರು ತಮ್ಮ ಉದ್ಯಮವನ್ನು ಇನ್ನಷ್ಟು ಬೆಳಸಿಕೊಳ್ಳಲು ಸರ್ಕಾರದ ಈ ಯೋಜನೆ ಸಹಾಯವಾಗಲಿದೆ. ಹೊಲಿಗೆ ಉದ್ಯೋಗದ ಜೊತೆಗೆ ಇನ್ನು 18 ರೀತಿಯ ಸ್ವಂತ ಉದ್ಯೋಗ ಮಾಡುತ್ತಿರುವವರಿಗೆ ಸರ್ಕಾರದ ಈ ಸಾಲವನ್ನು ನೀಡಲಿದೆ.

PM Vishwakarma Loan Scheme
Image Credit: News24online

ಈ ಸಾಲಕ್ಕಾಗಿ ಯಾವುದೇ ಗ್ಯಾರೆಂಟಿ ನೀಡುವ ಅಗತ್ಯ ಇಲ್ಲ
ದೇಶದ ಪ್ರಧಾನಿ ಮೋದಿ ಅವರು ಸಾಂಪ್ರದಾಯಿಕ ಕೌಶಲ್ಯ ಹೊಂದಿರುವ ಜನರನ್ನು ಬೆಂಬಲಿಸುವ ಉದ್ದೇಶದಿಂದ Vishwakarma Yojana ಪರಿಚಯಿಸಿದ್ದಾರೆ. ಇನ್ನುVishwakarma Yojana ಅಡಿಯಲ್ಲಿ ಭಾರತೀಯ ಕುಶಲಕರ್ಮಿಗಳಿಗೆ ಅನುಕೂಲವಾಗುವಂತೆ ಸಾವಿರಾರು ಕೋಟಿ ಮೀಸಲಿಡಲಾಗಿದೆ. PM Vishwakarma Yojana ಅಡಿಯಲ್ಲಿ ಅರ್ಹರು 2 ಲಕ್ಷದ ವರೆಗೆ ಸಾಲವನ್ನು ಪಡೆಯಬಹುದು.

ಬಿಸಿನೆಸ್ ಮಾಡುವ ಮಹಿಳೆಯರಿಗೆ ಸಿಗಲಿದೆ 2 ಲಕ್ಷ ಸಾಲ
ಮೊದಲಿದೆ Vishwakarma Yojana ಅಡಿಯಲ್ಲಿ ಕುಶಲಕರ್ಮಿಗಳು ಸಬ್ಸಿಡಿ ಬಡ್ಡಿದರದಲ್ಲಿ 10000 ರೂ. ಗಳನ್ನೂ ಪಾವತಿಸಬೇಕಾಗುತ್ತದೆ. ಪ್ರಧಾನಿ ವಿಶ್ವಕರ್ಮ ಯೋಜನೆಯಡಿ ಕುಶಲಕರ್ಮಿಗಳಿಗೆ ಮೊದಲನೇ ಕಂತಿನಲ್ಲಿ 5 % ಬಡ್ಡಿಯಲ್ಲಿ ರೂ. 1 ಲಕ್ಷ ಸಾಲ, ಎರಡನೇ ಕಂತಿನಲ್ಲಿ 2 ಲಕ್ಷ ರೂ. ಸಾಲವನ್ನು ನೀಡಿ 5 % ರಿಯಾಯಿತಿ ಬಡ್ಡಿದರದಲ್ಲಿ ನೀಡಲಾಗುತ್ತದೆ.

PM Vishwakarma Loan Latest Update
Image Credit: Navbharattimes

ಯೋಜನೆಗೆ ಯಾರು ಅರ್ಹರು ಮತ್ತು ಅರ್ಜಿ ಸಲ್ಲಿಕೆಯ ವಿಧಾನ
ಕೈ ಮತ್ತು ಉಪಕರಣಗಳೊಂದಿಗೆ ಕೆಲಸ ಮಾಡುವ ಕುಶಲಕರ್ಮಿಗಳು ಈ ಯೋಜನೆಗೆ ಅರ್ಹರಾಗಿರುತ್ತಾರೆ. Vishwakarma ಯೋಜನೆಯ ಅರ್ಜಿದಾರರ ವಯಸ್ಸು 18 ವರ್ಷ ದಾಟಿರಬೇಕು. ಇನ್ನು www.pmvishwakarma.gov.in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಹರು Vishwakarma ಯೋಜನೆಗೆ ನೋಂದಾಯಿಸಿಕೊಳ್ಳಬಹುದು. ರೇಷನ್ ಕಾರ್ಡ್, ಆಧಾರ್ ಕಾರ್ಡ್, ಆದಾಯ ಪ್ರಮಾಣಪತ್ರ, ಬ್ಯಾಂಕ್ ಅಕೌಂಟ್ ಡಿಟೈಲ್ಸ್ ನೀಡುವ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group

Join Nadunudi News WhatsApp Group