Vishwakarma Loan: ಇಂತವರಿಗೆ ಯಾವುದೇ ಗ್ಯಾರೆಂಟಿ ಇಲ್ಲದೆ ಕೇಂದ್ರದಿಂದ ಸಿಗಲಿದೆ 3 ಲಕ್ಷ ರೂ,ಇಂದೇ ಅರ್ಜಿ ಸಲ್ಲಿಸಿ
PM Vishwakarma Yojana ಅಡಿಯಲ್ಲಿ ಅರ್ಹರು 3 ಲಕ್ಷದವರೆಗೆ ಸಾಲವನ್ನು ಯಾವುದೇ ಗ್ಯಾರಂಟಿ ಇಲ್ಲದೆ ಪಡೆಯಬಹುದು.
PM Vishwakarma Scheme Latest Update: ಕೇಂದ್ರದ ಮೋದಿ ಸರ್ಕಾರ (Narendra Modi Government) ದೇಶದ ಬಡ ನಾಗರೀಕರನನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಉದ್ದೇಶದಿಂದ ದೇಶದಲ್ಲಿ ಹಲವಾರು ಯೋಜನೆಯನ್ನು ಜಾರಿಗೊಳಿಸಿದೆ. ಜನರಿಗಾಗಿ ವಿವಿಧ ಯೋಜನೆಯನ್ನು ಸರ್ಕಾರ ಪರಿಚಯಿಸಿದ್ದು, ದೇಶದ ಜನರು ಸರ್ಕಾರದ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ.
ಈಗಾಗಲೇ ಕಾರ್ಮಿಕರಿಗೆ ಆರ್ಥಿಕವಾಗಿ ನೆರವಾಗಲು ಸರ್ಕಾರ ವಿವಿಧ ಸೌಲಭ್ಯವನ್ನು ನೀಡಿದೆ. ಇದೀಗ ಕೇಂದ್ರ ಸರ್ಕಾರ ಕಾರ್ಮಿಕರಾಗಿ ಹೊಸ ಯೋಜನೆಯನ್ನು ರೂಪಿಸಲು ನಿರ್ಧರಿಸಿದೆ. ಕಾರ್ಮಿಕರಿಗಾಗಿ ವಿಶೇಷ ಸಾಲ ಸೌಲಭ್ಯ ನೀಡಲು ಮೋದಿ ಸರ್ಕಾರ ಮುಂದಾಗಿದೆ. September 17 ರಂದು ಕೇಂದ್ರ ಸರ್ಕಾರ ಈ ಹೊಸ ಯೋಜನೆಗೆ ಚಾಲನೆ ನೀಡಿದೆ. ಈ ಯೋಜನೆಯ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಯಾವುದೇ ಗ್ಯಾರೆಂಟಿ ಇಲ್ಲದೆ ಕೇಂದ್ರದಿಂದ ಸಿಗಲಿದೆ 3 ಲಕ್ಷ ರೂ
ದೇಶದ ಪ್ರಧಾನಿ ಮೋದಿ ಅವರು ಸಾಂಪ್ರದಾಯಿಕ ಕೌಶಲ್ಯ ಹೊಂದಿರುವ ಜನರನ್ನು ಬೆಂಬಲಿಸುವ ಉದ್ದೇಶದಿಂದ Vishwakarma Yojana ರೂಪಿಸಲಿದ್ದಾರೆ. ಇನ್ನುVishwakarma Yojana ಅಡಿಯಲ್ಲಿ ಭಾರತೀಯ ಕುಶಲಕರ್ಮಿಗಳಿಗೆ ಅನುಕೂಲವಾಗುವಂತೆ 13,000 ಕೋಟಿ ಮೀಸಲಿಡಲಾಗಿದೆ.
PM Vishwakarma Yojana ಅಡಿಯಲ್ಲಿ ಅರ್ಹರು 3 ಲಕ್ಷದವರೆಗೆ ಸಾಲವನ್ನು ಯಾವುದೇ ಗ್ಯಾರಂಟಿ ಇಲ್ಲದೆ ಪಡೆಯಬಹುದು. ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಬಯೋಮೆಟ್ರಿಕ್ ಆಧರಿತಾ PM Vishwakarma Portal ಬಳಸಿಕೊಂಡು ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಉಚಿತವಾಗಿ ನೋಂದಾಯಿಸಲಾಗುತ್ತದೆ. ಇನ್ನು PM Vishwakarma ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು https://pmvishwakarma.gov.in/ ನ ಅಧಿಕೃತ ವೆಬ್ ಸೈಟ್ ನಲ್ಲಿ ಪಡೆಯಬಹುದು.
ಶೇ. 5 ರಷ್ಟು ಬಡ್ಡಿಯಲ್ಲಿ ಸುಲಭವಾಗಿ ಸಾಲವನ್ನು ಪಡೆಯಬಹುದು
*Vishwakarma Yojana ಅಡಿಯಲ್ಲಿ ಕುಶಲಕರ್ಮಿಗಳು ಸಬ್ಸಿಡಿ ಬಡ್ಡಿ ದರದಲ್ಲಿ 10,000 ರೂ. ಗಳನ್ನೂ ಪಾವತಿಸಬೇಕಾಗುತ್ತದೆ.
*ಪ್ರಧಾನಿ ವಿಶ್ವಕರ್ಮ ಯೋಜನೆಯಡಿ ಕುಶಲಕರ್ಮಿಗಳಿಗೆ ಮೊದಲನೇ ಕಂತಿನಲ್ಲಿ 5 % ಬಡ್ಡಿಯಲ್ಲಿ ರೂ. 1 ಲಕ್ಷ ಸಾಲ ನೀಡಲಾಗುತ್ತದೆ.
* ಎರಡನೇ ಕಂತಿನಲ್ಲಿ 2 ಲಕ್ಷ ರೂ. ಸಾಲವನ್ನು ನೀಡಿ 5 % ರಿಯಾಯಿತಿ ಬಡ್ಡಿ ದರದಲ್ಲಿ ನೀಡಲಾಗುತ್ತದೆ.
*ಸಾಲದ ಬಡ್ಡಿದರವು ತುಂಬಾ ಕಡಿಮೆ ಇದ್ದು, Subsidy ಬಡ್ಡಿದರದಲ್ಲಿ ಸಾಲವನ್ನು ಪಡೆಯಬಹುದಾಗಿದೆ.
*ಇನ್ನು 8 ತಿಂಗಳು ಮತ್ತು 30 ತಿಂಗಳ ಅವಧಿಗೆ ಕ್ರಮವಾಗಿ 5 ಶೇಕಡಾ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತದೆ.
* ಈ ಯೋಜನೆಯಡಿ ದಿನಕ್ಕೆ 500 ರೂ. ಗಳಂತೆ 5 ರಿಂದ 7 ದಿನಗಳ ಕಾಲ ತರಬೇತಿ ನೀಡಲಾಗುತ್ತದೆ.
*ಇನ್ನು ಮೂಲಭೂತ ಕೌಶಲ್ಯ ತರಬೇತಿಯ ಆರಂಭದಲ್ಲಿ ಇ- ವೊಚಾರ್ ರೂಪದಲ್ಲಿ 15000 ರೂ. ವರೆಗಿನ ಟೂಲ್ಕಿಟ್ ಪ್ರೋತ್ಸಹ ಹಣವನ್ನು ಪಡೆಯಬಹುದು.