Yasasvi Scholarship 2025: ಆರ್ಥಿಕ ಒತ್ತಡದ ಕಾರಣ ಅನೇಕ ಮಕ್ಕಳು ತಮ್ಮ ಶಿಕ್ಷಣವನ್ನು ಅರ್ಧಕ್ಕೆ ಕೈಬಿಡುತ್ತಾರೆ. ಇದ್ದಕ್ಕಾಗಿಯೇ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಹೊಸ ಸ್ಕಾಲರ್ ಶಿಪ್ ಯೋಜನೆಯನ್ನು ಯಾರಿಗೆ ತಂದಿದೆ. ಇದೀಗ ನೀವು OBC, EBC ಅಥವಾ DNT ವರ್ಗಕ್ಕೆ ಸೇರಿದ ವಿದ್ಯಾರ್ಥಿ ಆಗಿದ್ದರೆ, ಈ PM YASASVI ಯೋಜನೆಯ ಅಡಿಯಲ್ಲಿ ಸ್ಕಾಲರ್ ಶಿಪ್ ಪಡೆದುಕೊಂಡು ನಿಮ್ಮ ವಿಧ್ಯಾಭ್ಯಾಸವನ್ನು ಮುಂದುವರೆಸಬಹುದಾಗಿದೆ. ಹಾಗಾದರೆ ಈ ವಿದ್ಯಾರ್ಥಿವೇತನ ಯಾವುದು? ಅರ್ಜಿ ಸಲ್ಲಿಸುವುದು ಹೇಗೆ? ಬೇಕಾಗಿರುವ ದಾಖಲೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಯೋಜನೆಯ ಉದ್ದೇಶ
ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಶಿಕ್ಷಣಕ್ಕೆ ಬೆಂಬಲವನ್ನು ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶ ಆಗಿದೆ. PM YASASVI ಅಂದರೆ, Prime Minister’s Young Achievers Scholarship Award Scheme for Vibrant India (ಪ್ರಧಾನ್ ಮಂತ್ರಿ ಯಂಗ್ ಅಚಿವೆರ್ಸ್ ಸ್ಕಾಲರ್ಷಿಪ್ ಅವಾರ್ಡ್ ಸ್ಕೀಮ್ ಫಾರ್ ವೈಬ್ರೇಟ್ ಇಂಡಿಯಾ) ಸಾಮಾಜಿಕ ನ್ಯಾಯ ಮತ್ತು ಅಧಿಕಾರ ಸಚಿವಾಲಯದಿಂದ ಜಾರಿಗೊಳಿಸಲಾಗಿದ್ದು, OBC, EBC ಅಥವಾ DNT ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಬಹುದಾಗಿದೆ.
ಶಿಕ್ಷಣದ ಮೂಲಕ ಈ ಸಮುದಾಯಗಳನ್ನು ಉನ್ನತೀಕರಿಸುವ ಗುರಿಯನ್ನು ಹೊಂದಿದೆ. ಇದೀಗ 2025 ರಲ್ಲಿ ಈ ಯೋಜನೆಗೆ ಆಯ್ಕೆ ಮಾಡುವ ಪರೀಕ್ಷೆಯನ್ನು ರದ್ದುಗೊಳಿಸಿ, ಹಿಂದಿನ ತರಗತಿಯ ಅಂಕಪಟ್ಟಿಯ ಆಧಾರದ ಮೇಲೆ ನೇರವಾಗಿ ಆಯ್ಕೆ ಮಾಡಲಾಗುತ್ತದೆ. ಈ PM YASASVI ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ, ಹಾಸ್ಟೆಲ್ ಫೀಸ್, ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಖರೀದಿಗೆ ಮತ್ತು ಪಠ್ಯ ಪುಸ್ತಕ ಖರೀದಿಗೆ ಸಹಾಯಧನವನ್ನು ನೀಡಲಾಗುತ್ತದೆ.
ಅರ್ಹತೆ
* ಮೊದಲನೇದಾಗಿ OBC, EBC ಅಥವಾ DNT ಸಮುದಾಯಕ್ಕೆ ಸೇರಿರಬೇಕು.
* ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಇರಬೇಕು
* ಮಾನ್ಯತೆ ಪಡೆದ ಶಾಲೆಯಲ್ಲಿ 9ನೇ ಅಥವಾ 11ನೇ ತರಗತಿಯಲ್ಲಿ ಓದುತ್ತಿರಬೇಕು.
* ಹಿಂದಿನ ತರಗತಿಯಲ್ಲಿ, ಅಂದರೆ 8 ನೇ ಅಥವಾ 10 ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದಿರಬೇಕು.
* ಸರ್ಕಾರಿ ಅಥವಾ ಅನುದಾನಿತ ಶಾಲೆಯಲ್ಲಿ ಓದುತ್ತಿರುವವರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಸ್ಕಾಲರ್ ಶಿಪ್ ಮೊತ್ತ
PM ಯಶಸ್ವಿ ಸ್ಕಾಲರ್ ಶಿಪ್ ನಲ್ಲಿ ಒಟ್ಟು 3 ಲಕ್ಷ ರೂ. ವರೆಗೆ ಸಹಾಯ ಧನವನ್ನು ನೀಡಲಾಗುತ್ತದೆ. ಇದರಲ್ಲಿ ವಿವಿಧ ರೀತಿಯ ವೆಚ್ಚಗಳು ಬರುತ್ತದೆ.
* ಶಾಲಾ ಶುಲ್ಕ 2 ಲಕ್ಷ ರೂಪಾಯಿ
* ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಖರೀದಿಗೆ 45,000 ರೂಪಾಯಿ
* ಸ್ಟೇಷನರಿ ಗೆ 5,000 ರೂಪಾಯಿ
* ಹಾಸ್ಟೆಲ್ ವೆಚ್ಚ ತಿಂಗಳಿಗೆ 3,000 ರೂಪಾಯಿ
ಈ ಎಲ್ಲಾ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
| ವಿಷಯ / Item | ವಿವರ / Details |
|---|---|
| ಯೋಜನೆಯ ಹೆಸರು | PM Young Achievers Scholarship Award Scheme for Vibrant India (PM YASASVI) |
| ಸಚಿವಾಲಯ | ಸಾಮಾಜಿಕ ನ್ಯಾಯ ಮತ್ತು ಅಧಿಕಾರ ಸಚಿವಾಲಯ |
| ಅರ್ಹ ವರ್ಗಗಳು | OBC, EBC, DNT (De-Notified Tribes) |
| ವಾರ್ಷಿಕ ಕುಟುಂಬ ಆದಾಯ ಮಿತಿ | ₹2.5 ಲಕ್ಷಕ್ಕಿಂತ ಕಡಿಮೆ |
| ಅರ್ಜಿ ಸಲ್ಲಿಸುವ ತರಗತಿಗಳು | 9ನೇ ತರಗತಿ ಮತ್ತು 11ನೇ ತರಗತಿ (ಪ್ರವೇಶಕ್ಕೆ) |
| ಶಾಲೆಯ ಪ್ರಕಾರ | ಟಾಪ್ ಕ್ಲಾಸ್ ಶಾಲೆಗಳು (Top Class Schools identified by MSJ&E) |
| ಪರೀಕ್ಷೆ | 2025ರಿಂದ ಇಲ್ಲ (No Entrance Exam – Merit based on previous class marks) |
| ಒಟ್ಟು ಗರಿಷ್ಠ ಸಹಾಯ ಮೊತ್ತ | ₹3 ಲಕ್ಷದವರೆಗೆ (4 ವರ್ಷಗಳಲ್ಲಿ) |
| ಶಾಲಾ ಶುಲ್ಕ | ಗರಿಷ್ಠ ₹2,00,000 (ಪೂರ್ತಿ ಕೋರ್ಸ್‌ಗೆ) |
| ಲ್ಯಾಪ್‌ಟಾಪ್ / ಕಂಪ್ಯೂಟರ್ | ₹45,000 (ಒಮ್ಮೆ) |
ಈ ರೀತಿಯಾಗಿ ಅರ್ಜಿ ಸಲ್ಲಿಸಿ
ಆಫ್ ಲೈನ್ ವಿಧಾನದ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಮೊದಲನೇದಾಗಿ https://scholarships.gov.in/ ಅಥವಾ https://www.myscheme.gov.in/ ಪೋರ್ಟಲ್ ಗೆ ಭೇಟಿ ನೀಡಿ, ನೋಂದಣಿ ಮಾಡಿಕೊಳ್ಳಬೇಕು. ಆಧಾರ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ಹಾಕಿ OTP ನಮೂದಿಸಬೇಕು. OTR (One Time Registration) ಪೂರ್ಣಗೊಳಿಸಿದ ನಂತರ ಲಾಗಿನ್ ಮಾಡಬೇಕು. ನಂತರ ‘PM YASASVI Top Class School Education’ ಸ್ಕೀಮ್ ಆಯ್ಕೆ ಮಾಡಿ ವಯಕ್ತಿಕ ವಿವರ, ಆದಾಯದ ಮಾಹಿತಿ ಮತ್ತು ಶೈಕ್ಷಣಿಕ ವಿವರವನ್ನು ಭರ್ತಿ ಮಾಡಿ ಅಗತ್ಯ ದಾಖಲೆಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
ಅಗತ್ಯ ದಾಖಲೆಗಳು
* ಆಧಾರ್ ಕಾರ್ಡ್
* ಜಾತಿ ಪ್ರಮಾಣಪತ್ರ
* ಆದಾಯ ಪ್ರಮಾಣಪತ್ರ
* ಬ್ಯಾಂಕ್ ಪಾಸ್ ಬುಕ್
* ಹಿಂದಿನ ತರಗತಿ ಅಂಕಪಟ್ಟಿ
Disclaimer: This information is provided for awareness purposes only. For personalised legal advice, consult a qualified professional and refer to official government notifications.

