PMAY-U 2.0 House Repair Subsidy 2025 Complete Details: ನಿಮ್ಮ ಮನೆಯ ಮೇಲ್ಚಾವಣಿಯಲ್ಲಿ ನೀರು ಸೋರಿಕೆ ಆಗುತ್ತಿದೆಯೇ..? ಅಥವಾ ಗೋಡೆಗಳಲ್ಲಿ ಬಿರುಕು ಮೂಡಿದೆಯೇ..? ಇನ್ನುಮುಂದೆ ಯೋಚನೆ ಮಾಡುವ ಅಗತ್ಯ ಇಲ್ಲ. ಹಳೆಯ ಮನೆಯ ದುರಸ್ತಿ ಬಗ್ಗೆ ಯೋಚನೆ ಮಾಡುತ್ತಿದ್ದರೆ ಈ ಮಾಹಿತಿ ನಿಮಗೆ ಬಹಳ ಉಪಯುಕ್ತವಾಗಲಿದೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ 2.0 (PMAY-U 2.0) ಈಗ ಹಳೆಯ ಮನೆಯ ದುರಸ್ತಿಗೆ 2.50 ಲಕ್ಷ ಸಬ್ಸಿಡಿ ನೀಡುತ್ತಿದೆ. ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಬೇಕಾಗಿರುವ ದಾಖಲೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.
PMAY-U 2.0 ಯೋಜನೆಯ ಉದ್ದೇಶ
ಪ್ರಧಾನ ಮಂತ್ರಿ ಆವಾಸ್ ಯೋಜನೆ ಅರ್ಬನ್ 2.0 ಭಾರತದಲ್ಲಿ ನಗರ ಜನಸಂಖ್ಯೆಗೆ ಕೈಗೆಟುಕುವ ವಸತಿಗಳನ್ನು ರಚಿಸಲು ನಗರ ವಸತಿಗಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಎರಡನೇ ಹಂತವಾಗಿದೆ. ಆರಂಭಿಕ PMAY ಹಂತಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯ ದೊರೆತ ನಂತರ ಕೇಂದ್ರ ಸಚಿವ ಸಂಪುಟವು PMAY ಅರ್ಬನ್ 2.0 ಅನ್ನು ಆಗಸ್ಟ್ 9, 2024 ರಂದು ಜಾರಿಗೆ ತಂದಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅರ್ಬನ್ 2.0 ನಗರ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಪಕ್ಕಾ ಮನೆಗಳನ್ನು ನೀಡುವ ಗುರಿಯನ್ನು ಹೊಂದಿದೆ.
PMAY-U 2.0 ನಲ್ಲಿ 3 ಮುಖ್ಯ ಭಾಗಗಳಿವೆ
* ಹೊಸ ಮನೆ ನಿರ್ಮಾಣ
* ಹಳೆಯ ಮನೆಯ ದುರಸ್ತಿ ಮತ್ತು ವಿಸ್ತರಣೆ
* ಬಡಾವಣೆಯಲ್ಲಿ ಪ್ಲಾಟ್ + ಸ್ವಂತ ನಿರ್ಮಾಣ
PMAY-U 2.0 ಯೋಜನೆಯ ಅರ್ಹತೆ…?
* ಕುಟುಂಬದ ವಾರ್ಷಿಕ ಆದಾಯ 3 ಲಕ್ಷದ ಒಳಗೆ ಇರಬೇಕು
* ನಗರ ಪ್ರದೇಶದಲ್ಲಿ ವಾಸವಿರಬೇಕು (BBMP, ಸಿಟಿ ಕಾರ್ಪೊರೇಷನ್, ಪುರಸಭೆ, ಟೌನ್ ಪಂಚಾಯಿತಿ ಒಳಗೆ)
* ಮನೆಯಲ್ಲಿ ಸೋರಿಕೆ, ಅಪಾಯಕಾರಿ ಸ್ಥಿತಿ ಇದ್ದಾಗ
* ಕಳೆದ 10 ವರ್ಷಗಳಲ್ಲಿ PMAY ಅಥವಾ ಇನ್ನಾವುದೇ ಹೌಸಿಂಗ್ ಯೋಜನೆಯ ಲಾಭ ಪಡೆದಿರಬಾರದು
* ವಿಧವೆಯರು, ವೃದ್ಧರು, ಅಂಗವಿಕಲರು, ಏಕಮಾತೃ ಕುಟುಂಬಗಳು ವಿಶೇಷ ಪ್ರಾಶಸ್ತ್ಯ ಅಡಿಯಲ್ಲಿ ಬರುತ್ತದೆ
ಮಾಡುವ ಕೆಲಸದ ಆಧಾರದ ಮೇಲೆ ಸಬ್ಸಿಡಿ ಲಭ್ಯವಾಗುತ್ತದೆ
* ಛಾವಣಿ ದುರಸ್ತಿ ಮತ್ತು ವಾಟರ್ ಪ್ರುಪಿಂಗ್ ಗೆ 1.20 ಲಕ್ಷ ಸಬ್ಸಿಡಿ ನೀಡಲಾಗುತ್ತದೆ.
* ಗೋಡೆ ಮರುನಿರ್ಮಾಣಕ್ಕೆ 80,000 ಸಬ್ಸಿಡಿ ನೀಡಲಾಗುತ್ತದೆ.
* ಹಾಸಿಗೆ, ಬಾಗಿಲು, ಕಿಟಕಿ ಬದಲಾವಣೆಗೆ 50,000 ಸಬ್ಸಿಡಿ ನೀಡಲಾಗುತ್ತದೆ.
* ಟಾಯ್ಲೆಟ್ ಅಥವಾ ಕಿಚನ್ ಬದಲಾವಣೆ ಮಾಡಲು 50,000 ಸಬ್ಸಿಡಿ ನೀಡಲಾಗುತ್ತದೆ.
* ಮೇಲ್ಚಾವಣಿ ಹಾಕಿ ರೂಮ್ ನಿರ್ಮಾಣ ಮಾಡಲು 1.00 ಲಕ್ಷ ಸಬ್ಸಿಡಿ ನೀಡಲಾಗುತ್ತದೆ.
ಕರ್ನಾಟಕದಲ್ಲಿ ಅರ್ಜಿ ಸಲ್ಲಿಸಲು 3 ಸುಲಭ ಮಾರ್ಗ
* https://pmay-urban.gov.in/ ಅಥವಾ https://ashraya.karnataka.gov.in/ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
* SBI, Canara Bank, Union Bank, Bank of Baroda, HDFC, Axis ಬ್ಯಾಂಕ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
* ನಗರಾಡಳಿತ ಕಚೇರಿ / CSC ಕೇಂದ್ರ ( ನಿಮ್ಮ ವಾರ್ಡ್‌ನ ಕಮನ್ ಸರ್ವಿಸ್ ಸೆಂಟರ್‌ಗೆ ತೆರಳಿ) ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು
* ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್
* ಆದಾಯ ಪ್ರಮಾಣ ಪತ್ರ
* ಮನೆಯ ಫೋಟೋ
* ಆಸ್ತಿ ದಾಖಲೆ
* ರೇಷನ್ ಕಾರ್ಡ್
* ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
ಅರ್ಜಿ ಹಾಕಿದ ನಂತರ ಸ್ಟೇಟಸ್ ಚೆಕ್ ಮಾಡುವ ವಿಧಾನ
https://pmay-urban.gov.in/ ಗೆ ಭೇಟಿ ನೀಡಿ Track Your Assessment → Application ID ಅಥವಾ ಆಧಾರ್ ಸಂಖ್ಯೆ ಹಾಕಿ ಚೆಕ್ ಮಾಡಿಕೊಳ್ಳಿ. ಅಥವಾ ಕರ್ನಾಟಕ ಪೋರ್ಟಲ್ (https://ashraya.karnataka.gov.in/) ಗೆ ಭೇಟಿ ನೀಡಿ ಚೆಕ್ ಮಾಡಿಕೊಳ್ಳಿ.
PMAY-U 2.0 ಕರ್ನಾಟಕದಲ್ಲಿ 2025 ರ ಗುರಿ
* ಬೆಂಗಳೂರು ನಗರ 1.5 ಲಕ್ಷ ಮನೆಗಳು
* ಮೈಸೂರು, ಹುಬ್ಬಳ್ಳಿ – ಧಾರವಾಡ, ಮಂಗಳೂರು ತಲಾ 50,000 ಕ್ಕೂ ಅಧಿಕ
* ಉಳಿದ ಜಿಲ್ಲಾ ಕೇಂದ್ರಗಳಲ್ಲಿ 10,000 ದಿಂದ 20,000
* ಇದುವರೆಗೆ 2.8 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ
Disclaimer: This information is provided for awareness purposes only. For personalised legal advice, consult a qualified professional and refer to official government notifications.

