PNB Auction: ಕಡಿಮೆ ಬೆಲೆಗೆ ಸಾಲ ತೀರಿಸದವರ ಆಸ್ತಿ ಹರಾಜಿಗಿಟ್ಟಿದೆ ಈ ಬ್ಯಾಂಕ್! ಖರೀದಿಸಲು ಜನರ ಪೈಪೋಟಿ.

ಮೆಗಾ ಹರಾಜು ಪ್ರಕ್ರಿಯೆ ಆರಂಭಿಸಿದ ಪಂಜಾಬ್ ನ್ಯಾಷನಲ್ ಬ್ಯಾಂಕ್.

PNB Bank Mega e- Auction: ದೇಶದ ಪ್ರತಿಷ್ಠಿತ ಸರ್ಕಾರೀ ಬ್ಯಾಂಕ್ ಆಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB Bank) ಇತ್ತೀಚಿಗೆ ಹೊಸ ಹೊಸ ನಿಯಮವನ್ನು ಜಾರಿಗೊಳಿಸುತ್ತಿದೆ. ಹೊಸ ನಿಯಮಗಳ ಜೊತೆ ಬ್ಯಾಂಕ್ ತನ್ನ ಗ್ರಾಹಕರಿಗಾಗಿ ವಿವಿಧ ಸೌಲಭ್ಯವನ್ನು ನೀಡುತ್ತಿದೆ. ಇದೀಗ ಪಿಎನ್ ಬಿ ಬ್ಯಾಂಕ್ ಜನಸಾಮಾನ್ಯರಿಗೆ ಮಹತ್ವದ ಮಾಹಿತಿಯನ್ನು ಘೋಷಿಸಿದೆ. ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದೆ.

PNB Bank Mega e- Auction
Image Credit: Thehindubusinessline

ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೆಗಾ ಹರಾಜು
ಇದೀಗ ಪಂಜಾಬ್ ನ್ಯಾಷನಲ್ ಬ್ಯಾಂಕ್ ಜನರಿಗೆ ವಸತಿ ಆಸ್ತಿ, ವಾಣಿಜ್ಯ ಆಸ್ತಿ, ಕೈಗಾರಿಕಾ ಆಸ್ತಿ ಮತ್ತು ಕೃಷಿ ಆಸ್ತಿಯನ್ನು ಖರೀದಿಸಲು ಅವಕಾಶ ನೀಡುತ್ತಿದೆ. ಅನೇಕ ಜನರು ಬ್ಯಾಂಕ್ ನಿಂದ ಆಸ್ತಿಗಾಗಿ ಸಾಲವನ್ನು ಪಡೆಯುತ್ತಾರೆ. ಆದರೆ ಸಾಲ ಪಡೆದವರು ಕಾರಣಾಂತರಗಳಿಂದ ಸಾಲವನ್ನು ಮರುಪಾವತಿ ಮಾಡುವುದಿಲ್ಲ.

ಸಾಲದ ಮರುಪಾವತಿ ಆಗದೆ ಇದ್ದ ಸಮಯದಲ್ಲಿ ಬ್ಯಾಂಕ್ ಸಾಲ ಪಡೆದವರ ಜಮೀನು ಅಥವಾ ನಿವೇಶವನ್ನು ಸ್ವಾಧೀನಪಡಿಸಿಕೊಳ್ಳುತ್ತದೆ. ಈ ರೀತಿಯ ಆಸ್ತಿಯನ್ನು ಬ್ಯಾಂಕ್ ಹರಾಜಿಗೆ ಹಾಕುತ್ತದೆ. ಇದೀಗ ಪಂಜಾಬ್ ನ್ಯಾಷನಲ್ ಬ್ಯಾಂಕ್ ಜನರಿಗೆ ಈ ಆಸ್ತಿ ಖರೀದಿಗೆ ಅವಕಾಶವನ್ನು ನೀಡುತ್ತಿದೆ.

ಮಾರುಕಟ್ಟೆಗಿಂತ ಅತಿ ಕಡಿಮೆ ಬೆಲೆಗೆ ಸಿಗಲಿದೆ ಆಸ್ತಿ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಇದೀಗ ಮೆಗಾ ಇ ಹರಾಜು (PNB Mega e- Auction) ಪ್ರಕ್ರಿಯೆಯನ್ನು ಆರಂಭಿಸಿದೆ. PNB ಮೆಗಾ ಇ ಹರಾಜು ಮೂಲಕ ಜನರು ಮಾರುಕಟ್ಟೆಗಿಂತ ಅತಿ ಕಡಿಮೆ ಬೆಲೆಗೆ ಆಸ್ತಿ ಅಥವಾ ಮನೆಯನ್ನು ಪಡೆಯಬಹುದು. PNB ಮೆಗಾ ಇ ಹರಾಜಿನ ಬಗ್ಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕೃತ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಜುಲೈ 20 ರಂದು ಅಗ್ಗದ ಬೆಲೆಯ ಆಸ್ತಿ ಖರೀದಿಗಾಗಿ ಬಿಡ್ ಮಾಡಬಹುದಾಗಿದೆ.

Join Nadunudi News WhatsApp Group

PNB Bank Mega e- Auction
Image Credit: Deccanherald

ಯಾವ ಯಾವ ಆಸ್ತಿಗಳು ಖರೀದಿಗೆ ಲಭ್ಯವಿದೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಬರೋಬ್ಬರಿ 12,022 ಮನೆಗಳು, 2,313 ಅಂಗಡಿಗಳು, 1,171 ಕೈಗಾರಿಕಾ ಆಸ್ತಿಗಳು ಮತ್ತು 103 ಕೃಷಿ ಭೂಮಿಯನ್ನು ಮಾರಾಟ ಮಾಡುತ್ತಿದೆ. PNB ಮೆಗಾ ಇ ಹರಾಜಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಧಿಕೃತ ವೆಬ್ ಸೈಟ್ https://ibapi.in/ ಭೇಟಿ ನೀಡುವ ಮೂಲಕ ಪಡೆಯಬಹುದು. PNB ಮೆಗಾ ಇ ಹರಾಜು SARFAESI ಕಾಯ್ದೆ ಅಡಿಯಲ್ಲಿ ನೆರವೇರಲಿದೆ.

Join Nadunudi News WhatsApp Group