Poco M6 Pro: ಮಾರುಕಟ್ಟೆಗೆ ಬಂದೇ ಬಿಡ್ತು ಪೋಕೋ ಮೊಬೈಲ್ , ಅತೀ ಕಡಿಮೆ ಬೆಲೆಗೆ ಸಖತ್ ಫೀಚರ್ಸ್
ಕಡಿಮೆ ಬೆಲೆಯಲ್ಲಿ ಖರೀದಿಗೆ ಸಿಗುತ್ತಿದೆ 5000 mAh ಬ್ಯಾಟರಿ ಸಾಮರ್ಥ್ಯದ ಹೊಸ ಸ್ಮಾರ್ಟ್ ಫೋನ್.
Poco M6 Pro 5G Smart Phone: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ (Smart Phone) ಗಳು ಮಾರುಕಟ್ಟೆಯಲ್ಲಿ ಹೆಚ್ಚು ಹೆಚ್ಚು ಬಿಡುಗಡೆಗೊಳ್ಳುತ್ತಿವೆ. ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಮೊಬೈಲ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇತ್ತೀಚೆಗಂತೂ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ಕೈಯಲ್ಲಿಯೂ ಸಹ ಸ್ಮಾರ್ಟ್ ಫೋನ್ ಗಳನ್ನ ಕಾಣಬಹುದು. ಅವರು ಸ್ಮಾರ್ಟ್ ಫೋನ್ ನಲ್ಲಿಯೇ ತಮ್ಮ ದಿನವನ್ನ ಕಳೆಯುತ್ತಾರೆ.
ಇದೀಗ ನೀವು ಸ್ಮಾರ್ಟ್ ಫೋನ್ ಖರೀದಿ ಮಾಡುವ ನಿರೀಕ್ಷೆಯಲ್ಲಿದ್ದರೆ, ಕಡಿಮೆ ಬೆಲೆಯಲ್ಲಿ ಕಳೆದ ವಾರವಷ್ಟೇ ಬಿಡುಗಡೆಯಾದ ಈ ಸ್ಮಾರ್ಟ್ ಫೋನ್ ನ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
Poco M6 Pro 5G ಸ್ಮಾರ್ಟ್ ಫೋನ್
Poco M6 Pro 5G ಸ್ಮಾರ್ಟ್ ಫೋನ್ ಅನ್ನು ಕಳೆದ ವಾರವಷ್ಟೇ ಬಿಡುಗಡೆ ಮಾಡಲಾಗಿತ್ತು. ಇಂದು ಈ ಸ್ಮಾರ್ಟ್ ಫೋನ್ ಅನ್ನು ಮಾರಾಟಕ್ಕೆ ಇರಿಸಲಾಗಿದೆ. ಈ ಸ್ಮಾರ್ಟ್ ಫೋನ್ ನ ಮಾರಾಟ ಇಂದು ಮಧ್ಯಾಹ್ನ 12 ಗಂಟೆಯಿಂದ ಪ್ರಾರಂಭವಾಗಿದೆ. ಈ ಮೊಬೈಲ್ ಅನ್ನು ಖರೀದಿಸಲು ಹೆಚ್ಚು ಖರ್ಚು ಮಾಡಬೇಕಿಲ್ಲ. ಏಕೆಂದರೆ ಕಂಪನಿ ಈ ಸ್ಮಾರ್ಟ್ ಫೋನ್ ಅನ್ನು ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡುತ್ತಿದ್ದೆ.
Poco M6 Pro 5G ಸ್ಮಾರ್ಟ್ ಫೋನ್ ಬೆಲೆ
Poco M6 Pro 5G ಸ್ಮಾರ್ಟ್ ಫೋನ್ ಸದ್ಯ ಎರಡು ರೂಪಾಂತರದಲ್ಲಿ ಲಭ್ಯವಿದೆ. 4 GB RAM ಹಾಗೂ 64 GB ಸ್ಟೋರೇಜ್ ಗೆ ಕಂಪನಿಯು 10999 ರೂ. ನಿಗದಿಮಾಡಿದೆ, ಮತ್ತು 6 GB RAM ಹಾಗೂ 128 GB ಸ್ಟೋರೇಜ್ ಹೊಂದಿರುವ ಕಂಪನಿಯ ಟಾಪ್ ರೂಪಾಂತರದ ಬೆಲೆ 12999 ರೂಪಾಯಿ ಎಂದು ಕಂಪನಿ ನಿಗದಿ ಮಾಡಿದೆ. ಈ ಸ್ಮಾರ್ಟ್ ಫೋನ್ ಗಳನ್ನ ನೀವು ICICI ಬ್ಯಾಂಕ್ ಬಳಸಿ ಖರೀದಿಸಿದರೆ ಎರಡು ರೂಪಾಂತರಗಳ ಮೇಲೆ 1000 ರಿಯಾಯಿತಿಯನ್ನ ಪಡೆಯಬಹುದು.
Poco M6 Pro ಸ್ಮಾರ್ಟ್ ಫೋನ್ ನ ಕ್ಯಾಮರಾ ಹಾಗೂ ಬ್ಯಾಟರಿ ಸಾಮರ್ಥ್ಯ
Poco M6 Pro ಸ್ಮಾರ್ಟ್ ಫೋನ್ Android 13 ಅನ್ನು ಆಧರಿಸಿದೆ. ಹಾಗೆ ಇದರ ಕ್ಯಾಮರಾ ಬಗ್ಗೆ ಹೇಳುದಾದರೆ ಫೋನ್ ನ ಹಿಂಭಾಗವು 50 -ಮೆಗಾ ಪಿಕ್ಸೆಲ್ Al ಸಂವೇದಕ ಮತ್ತು 2 -ಮೆಗಾ ಪಿಕ್ಸೆಲ್ ಆಳ ಸಂವೇದಕವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8 -ಮೆಗಾ ಪಿಕ್ಸೆಲ್ ಕ್ಯಾಮರವನ್ನ ಪಡೆದಿದೆ.
Poco M6 Pro ಸ್ಮಾರ್ಟ್ ಫೋನ್ 5000 mAh ಬ್ಯಾಟರಿ ಸಾಮರ್ಥ್ಯವನ್ನ ಹೊಂದಿದೆ. ಇದು 18W ವೇಗದ ಚಾರ್ಜಿಂಗ್, IP53 ಧೂಳು ಮತ್ತು ಸ್ಪ್ಲಾಶ್ ರೆಸಿಸ್ಟೆಂಟ್ ಪಡೆದಿದೆ. ಇದು ಸೈಡ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹಾಗೂ 5G ಮತ್ತು ಡ್ಯುವೆಲ್ ಬ್ಯಾಂಡ್ ವೈಫೈ ಹೊಂದಿದೆ. Poco M6 Pro ಸ್ಮಾರ್ಟ್ ಫೋನ್ 90Hz 6 .79 -ಇಂಚಿನ HD ಡಿಸ್ಪ್ಲೇ ಅನ್ನು ಹೊಂದಿದೆ ಹಾಗೆ ಪವರ್ ಬ್ಲಾಕ್ ಮತ್ತು ಫಾರೆಸ್ಟ್ ಗ್ರೀನ್ ಬಣ್ಣಗಳ ಆಯ್ಕೆಯಲ್ಲಿ ಈ ಸ್ಮಾರ್ಟ್ ಫೋನ್ ಲಭ್ಯವಿದೆ.