Pomegranate Farming: 42 ರೂ ಗೆ ಸಿಗುವ ಈ ಗಿಡ ನೆಟ್ಟರೆ ಲಕ್ಷ ಲಕ್ಷ ಆದಾಯ ಗ್ಯಾರಂಟಿ

ದಾಳಿಂಬೆ ಕೃಷಿ ಬಗ್ಗೆ ಉಪಯುಕ್ತ ಮಾಹಿತಿ ಇಲ್ಲಿದೆ.

ದೇಹದಲ್ಲಿ ರಕ್ತ ಹೆಚ್ಚಿಸಲು ಮತ್ತು ಬಹಳಷ್ಟು ದೇಹ ಆರೋಗ್ಯ ಪ್ರಯೋಜನ ಪಡೆಯುವ ನೆಲೆಯಲ್ಲಿ ದಾಳಿಂಬೆ ಬಹಳ ಉಪಯುಕ್ತವಾದ ಒಂದು ಹಣ್ಣು ಎನ್ನಬಹುದು. ದಾಳಿಂಬೆ ಹಣ್ಣು ತಿನ್ನಲು ಬಲುರುಚಿಯಾಗಿದ್ದು ಜ್ಯೂಸ್ , ಮಿಲ್ಕ್ ಶೇಕ್ ಫ್ರುಟ್ಸ್ ಸಲಾಡ್ ಇನ್ನಿತರ ಸಿಹಿ ಪದಾರ್ಥಕ್ಕೆ ದಾಳಿಂಬೆ ಬಳಸಲಾಗುತ್ತಿದೆ. ತಿನ್ನಲು ರುಚಿ ಇದ್ದಷ್ಟೇ ಇದರ ಇಳುವರಿ ಕೂಡ ಅತ್ಯುತ್ತಮವಾಗಿದೆ. ದಾಳಿಂಬೆ ಕೃಷಿ(Pomegranate Farming) ಬಗ್ಗೆ ಉಪಯುಕ್ತ ಮಾಹಿತಿ ಇಲ್ಲಿದೆ.

ಉತ್ತಮ ಕೃಷಿ

ದಾಳಿಂಬೆಗಿಡದಲ್ಲಿ ಅನೇಕ ವಿಧ ಇದ್ದು ಅವೆವರ ಭೂಮಿ ವ್ಯವಸ್ಥೆ ಮೇಲೆ ದಾಳಿಂಬೆ ಕೃಷಿ ಮಾಡಬಹುದು. ಎಕರೆಗೆ 380 ಗಿಡ ನೆಡಬಹುದು. ಬೇರಿನ ಮತ್ತು ಬೇವಿನ ಹಿಂಡಿಯನ್ನು ಈ ಗಿಡ ಒಂದು ಗಿಡಕ್ಕೆ 42 ರೂ.ನಂತೆ ಮಾರುಕಟ್ಟೆಯಲ್ಲಿ ಲಭ್ಯ ಇರಲಿದೆ. ನವೆಂಬರ್ ಡಿಸೆಂಬರ್ ಅವಧಿಯಲ್ಲಿ ಮಳೆ ಕಡಿಮೆ ಇದ್ದಾಗ ನಾಟಿ ಮಾಡುವುದು ಉತ್ತಮ. 21ತಿಂಗಳ ಬಳಿಕ ಇಳುವರಿ ಸಿಗಲಿದೆ.

Pomegranate Farming
Image Source: News18

ಹೇಗೆ ಮಾಡಬೇಕು?

ಗಿಡದಿಂದ ಗಿಡಕ್ಕೆ 8ರಿಂದ 13 ಅಡಿ ಅಂತರ ಅಗತ್ಯವಾಗಿದೆ. ಗಿಡಕ್ಕೆ ಸಪೋರ್ಟ್ ಆಗಿ ಬಿದಿರು ಅಥವಾ ಕಂಬ ನೆಡಬಹುದು. ಸಸಿಗೆ ಆರು ತಿಂಗಳ ಬಳಿಕ ಕೊಟ್ಟಿಗೆ ಗೊಬ್ಬರ, ಹಿಂಡಿ ಇತ್ಯಾದಿ ನೈಸರ್ಗಿಕ ಪೋಷಣೆ ಅಗತ್ಯ. ಮಣ್ಣಿನ ವಿಚಾರಕ್ಕೆ ಬಂದರೆ ಕೆಂಪು ಮಣ್ಣು ಕಲ್ಲು ಮಿಶ್ರಿತ ಇರುವುದು ಉತ್ತಮ.ಮರಳು ಭೂಮಿ ಮತ್ತು ಕಪ್ಪು ಮಣ್ಣಿನಲ್ಲಿ ಉತ್ತಮ ಇಳುವರಿ ಬರಲಾರದು.

Join Nadunudi News WhatsApp Group

ನೀರು ಎಷ್ಟು ಬೇಕು?

ವರ್ಷಕ್ಕೊಂದು ಬೆಳೆಯಾಗಿದ್ದು ಎಪ್ರಿಲ್ ಮೇ ನಲ್ಲಿ ಕಟಾವು ಮಾಡುವುದು ಉತ್ತಮ. ನೀರಿನ ಅಂಶದಲ್ಲಿ ಹೆಚ್ಚು ನೀರು ಅಗತ್ಯ ಇಲ್ಲ ಎರಡು ಗಂಟೆ ನೀರು ಸಾಕು ವಾತಾವರಣಕ್ಕೆ ಅನುಗುಣವಾಗಿ ನೀರಿನ ಬಳಕೆ ಯಾಗಲಿದೆ. ಅದೇ ರೀತಿ ಗಿಡಕ್ಕೆ ಹುಳ ಬಾಧೆ ತಪ್ಪಿಸಲು 3 ರಿಂದ 5ದಿನಕ್ಕೆ ಸ್ಪ್ರೆ ಮಾಡಬೇಕು. ಭೂಮಿ ಫಲವತ್ತತೆ ಇಲ್ಲದಿದ್ದರೆ ಮಾತ್ರ ಸಮಸ್ಯೆ ಆಗಲಿದೆ.

Pomegranate Farming
Image Source: Youtube

ಬಂಡವಾಳ ಎಷ್ಟು?

ಒಟ್ಟಾರೆಯಾಗಿ ಇಂದು ಮಾರುಕಟ್ಟೆಯಲ್ಲಿ ದಾಳಿಂಬೆ ಹಣ್ಣಿಗೆ ಬೇಡಿಗೆ ಅನ್ವಯ 180ರೂ. ಎಲ್ಲ ಕಿ. ಲೋಗೆ ಸಿಗುತ್ತಿದ್ದು ಒಂದೊಂದು ಗಿಡದ ಮೇಲೆ ಅಧಿಕ ಲಾಭ ಸಿಗಲಿದೆ. ಒಂದು ಎಕರೆ ಕೃಷಿಯಲ್ಲಿ 3-4ಲಕ್ಷ ಹಣ ಬಂಡವಾಳ ಅಗತ್ಯವಾಗಿದೆ. ಕಂಬ , ಸಸಿ, ಪೈಪು, ಗೊಬ್ಬರ ಇತರ ಖರ್ಚು ಇದೆ. ಬೆಳೆ ಬೆಳೆಯಲು ಸರಿಯಾಗಿ ಶ್ರಮ ವಹಿಸದಿದ್ದರೆ ನಷ್ಟ ಆಗುವ ಸಾಧ್ಯತೆ ಇದೆ.ಹಾಗಾಗಿ ಮನಸ್ಸು ಇಟ್ಟು ಬೆಳೆ ತೆಗೆಯುವುದು ಕೂಡ ಮುಖ್ಯ ಎನ್ನಬಹುದು.

Join Nadunudi News WhatsApp Group