Portable Water Bottle: ಪ್ಯಾಕೇಜ್ಡ್ ವಾಟರ್ ಬಾಟಲ್ ನಲ್ಲಿ ನೀರು ಕುಡಿಯುವವರಿಗೆ ಹೊಸ ನಿಯಮ
ಪ್ಯಾಕೇಜ್ಡ್ ವಾಟರ್ ಬ್ಯಾಟಲ್ ನಲ್ಲಿ ನೀರು ಕುಡಿಯುವವರಿಗೆ ಮಹತ್ವದ ಮಾಹಿತಿ.
Portable Water Bottle Rule: ಸಾಮಾನ್ಯವಾಗಿ ಪ್ರಯಾಣ ಮಾಡುವ ಸಮಯದಲ್ಲಿ ಹೊರಗಡೆ ನೀರನ್ನು ಖರೀದಿಸಿ ಬಾಟಲ್ ನೀರನ್ನು ಕುಡಿಯುತ್ತಾರೆ. ಪ್ರಯಾಣಿಕರು ಹೆಚ್ಚಾಗಿ ಪ್ಯಾಕ್ ಮಾಡಿರುವ ಬಾಟಲಿ ನೀರನ್ನು ಕುಡಿಯುತ್ತಾರೆ. ಇದೀಗ ಸರ್ಕಾರ ಪ್ಯಾಕೇಜ್ಡ್ ವಾಟರ್ ಬ್ಯಾಟಲ್ (Portable Water Bottle) ನಲ್ಲಿ ನೀರು ಕುಡಿಯುವವರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. ಪ್ಯಾಕೇಜ್ಡ್ ವಾಟರ್ ಬ್ಯಾಟಲ್ ನಲ್ಲಿನ ನೀರಿನಲ್ಲಿ ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ.
ಪ್ಯಾಕೇಜ್ಡ್ ವಾಟರ್ ಬ್ಯಾಟಲ್ ನಲ್ಲಿ ನೀರು ಕುಡಿಯುವವರಿಗೆ ಹೊಸ ಸುದ್ದಿ
ನೀವು ಪ್ಯಾಕೇಜ್ಡ್ ವಾಟರ್ ಬ್ಯಾಟಲ್ ನಲ್ಲಿ ನೀರು ಕುಡಿಯುವವರಾಗಿದ್ದರೆ ಈ ಸುದ್ದಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಿ. ಗುಣಮಟ್ಟವಿಲ್ಲದ ವಸ್ತುಗಳ ಆಮದನ್ನು ತಡೆಯಲು ಸರ್ಕಾರ ಗುಣಮಟ್ಟದ ಮಾನದಂಡವನ್ನು ಜಾರಿಗೆ ತಂದಿದೆ. ಗುಣಮಟ್ಟವಿಲ್ಲದ ವಸ್ತುಗಳ ಆಮದನ್ನು ನಿಷೇದಿಸುದರೊಂದಿಗೆ ದೇಶದಲ್ಲಿ ಉತ್ತಮ ಗುಣಮಟ್ಟದ ವಸ್ತುಗಳ ಉತ್ಪಾದನೆಗೆ ಉತ್ತೇಜನ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.
ಉತ್ತಮ ಗುಣಮಟ್ಟದ ವಸ್ತುಗಳ ಉತ್ಪಾದನೆಗೆ ಉತ್ತೇಜನಕ್ಕಾಗಿ ಕುಡಿಯುವ ನೀರಿನ ಬಾಟಲಿಗಳು ಮತ್ತು ಜ್ವಾಲೆ ಉತ್ಪಾದಿಸುವ ಲೈಟರ್ ಗಳಿಗೆ ಅಗತ್ಯ ಗುಣಮಟ್ಟದ ಮಾನದಂಡವನ್ನು ನೀಡಲಾಗಿದೆ. ಈ ನಿಟ್ಟಿನಲ್ಲಿ ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (ಡಿಪಿಎಐಐಟಿ) ಜುಲೈ 5 ರಂದು ಅಧಿಸೂಚನೆ ಹೊರಡಿಸಿದೆ.
ನಿಯಮ ಉಲ್ಲಂಘಿಸಿದರೆ ದಂಡದ ಜೊತೆಗೆ ಜೈಲು ಶಿಕ್ಷೆ ಖಚಿತ
ಇನ್ನು BIS ಮಾರ್ಕ್ ಹೊಂದಿರದ ಎರಡು ವಸ್ತುಗಳ ಉತ್ಪಾದನೆ, ಮಾರಾಟ,ವ್ಯಾಪಾರ, ಆಮದು ಅಥವಾ ಸಂಗ್ರಹಣೆ ಮಾಡಲು ಸಾಧ್ಯವಿಲ್ಲ. BIS ಕಾಯ್ದೆ 2016 ರ ಪ್ರಕಾರ BIS ಪ್ರಮಾಣೀಕರಿಸದ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ ಮತ್ತು ಮಾರಾಟವನ್ನು ನಿಷೇದಿಸಲಾಗಿದೆ. BIS ಕಾಯ್ದೆಯ ನಿಯಮವನ್ನು ಉಲ್ಲಂಘಿಸಿದರೆ ಮೊದಲ ಅಪರಾಧಕ್ಕೆ 2 ವರ್ಷ ಜೈಲು ಶಿಕ್ಷೆ ಅಥವಾ 2 ಲಕ್ಷ ರೂ. ದಂಡವನ್ನು ಪಾವತಿಸಬೇಕಾಗುತ್ತದೆ.