QR Code Scan: ಅಂಚೆ ಇಲಾಖೆಯಿಂದ ಗುಡ್ ನ್ಯೂಸ್, ಇನ್ನುಮುಂದೆ ಕ್ಯೂಆರ್ ಕೋಡ್ ಬಳಸಿ ಹಣ ಸ್ವೀಕರಿಸಬಹುದು.

ಅಂಚೆ ಕಚೇರಿಯಲ್ಲಿ ಕ್ಯೂಆರ್ ಕೋಡ್ ಬಳಸಿ ಹಣ ಪಡೆಯಬಹುದು.

Post Office QR Code Scan: ಅಂಚೆ ಇಲಾಖೆಯು (Post Office) ಜನರಿಗೆ ಈಗಾಗಲೇ ಸಾಕಷ್ಟು ರೀತಿಯ ಸೌಲಭ್ಯಗಳನ್ನು ಜಾರಿಗೊಳಿಸಿದೆ. ಇದೀಗ ಅಂಚೆ ಇಲಾಖೆ ಹೊಸ ಸೇವೆಯನ್ನು ಆರಂಭಿಸಿದೆ. ನಗದು ರಹಿತ ಹಣದ ವ್ಯವಹಾರ ಮಾಡಲು ಅಂಚೆ ಇಲಾಖೆ ನಿರ್ಧರಿಸಿದೆ.

ಅಂಚೆ ಇಲಾಖೆಯು ಈ ಹೊಸ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದೆ. ಇನ್ನು ಅಂಚೆ ಇಲಾಖೆ ನೀಡಿರುವ ಈ ಹೊಸ ಸೌಲಭ್ಯದ ಬಗ್ಗೆ ಮಾಹಿತಿ ತಿಳಿಯೋಣ.

Post Office QR Code Scan
Image Credit: timesnownews

ಅಂಚೆ ಇಲಾಖೆಯಿಂದ ಗುಡ್ ನ್ಯೂಸ್
ಕೇಂದ್ರ ಸರ್ಕಾರವು ದೇಶದಾದ್ಯಂತ ನಗದು ರಹಿತ ಹಣದ ವ್ಯವಹಾರ ಮಾಡುವ ಬಗ್ಗೆ ಉತ್ತೇಜನ ನೀಡಿದೆ. ಭಾರತೀಯ ಅಂಚೆ ಇಲಾಖೆ ಹಾಗು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೂಲಕ ವ್ಯಾಪಾರಿಗಳಿಗೆ, ರಿಕ್ಷಾ ಚಾಲಕರಿಗೆ, ತರಕಾರಿ, ಹೂ, ಹಣ್ಣು ಅಂಗಡಿಗಳಿಗೆ, ಮೊಬೈಲ್ ಅಂಗಡಿ ಇತ್ಯಾದಿಗಳಲ್ಲಿ ಕ್ಯೂಆರ್ ಕೋಡ್ ಬಳಸಿ ಹಣ ಸ್ವೀಕರಿಸುವ ವ್ಯವಸ್ಥೆಯನ್ನು ಪ್ರಾರಂಭಿಸಿದೆ.

ಕ್ಯೂಆರ್ ಕೋಡ್ ಬಳಸಿ ಹಣ ಸ್ವೀಕರಿಸಬಹುದು
ಅಂಚೆ ಇಲಾಖೆಯು ಕ್ಯೂಆರ್ ಕೋಡ್ ಸೌಲಭ್ಯವನ್ನು ಒದಗಿಸಲಿದೆ. ಈ ಸೇವೆಯನ್ನು ಪ್ರಾರಂಭಿಸಲು ಐಪಿಪಿಬಿ (ಇಂಡಿಯಾ ಪೋಸ್ಟಲ್ ಪೇಮೆಂಟ್ಸ್ ಬ್ಯಾಂಕ್) ಖಾತೆಯನ್ನು ಹೊಂದಿರಬೇಕು. ಹಾಗೂ ಅಂಚೆ ಸಿಬ್ಬಂದಿಯವರು ಖಾತೆಗೆ ಕ್ಯೂಆರ್ ಕೋಡ್ ಅನ್ನು ಸಂಯೋಜಿಸಿ ಕೊಡುತ್ತಾರೆ. ಈ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಸ್ವೀಕರಿಸಬಹುದು.

Payment can be received using QR code
Image Credit: ippbonline

ವ್ಯಾಪಾರಿಗಳು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಸ್ವೀಕರಿಸಲಾದ ಮೊತ್ತವನ್ನು ಹತ್ತಿರದ ಅಂಚೆ ಕಚೇರಿ ಅಥವಾ ಪೋಸ್ಟ್ ಮ್ಯಾನ್ ನ ಮುಕಾಂತರ ಸ್ವೀಕರಿಸಬಹುದು. ಇನ್ನು ಮೊಬೈಲ್ ಫೋನ್ ನಲ್ಲಿ ಐಪಿಪಿಬಿ ಖಾತೆಯ ಕ್ಯೂಆರ್ ಕೋಡ್ ಬಳಸಿ ಯಾವುದೇ ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡಬಹುದು.

Join Nadunudi News WhatsApp Group

ಸ್ಥಳದಲ್ಲೇ ಐಪಿಪಿಬಿ ಖಾತೆಯನ್ನು ಕೂಡ ಮಾಡಿಕೊಡಲಾಗುವುದು. ಇನ್ನು ಮುಂದೆ ಕ್ಯೂಆರ್ ಕೋಡ್ ಬಳಸಿ ಸುಲಭವಾಗಿ ಹಣ ಪಡೆಯಬಹುದು.

Join Nadunudi News WhatsApp Group