Ads By Google

Bal Jeevan: ಪೋಸ್ಟ್ ಆಫೀಸ್ ಮಗುವಿನ ಹೆಸರಿನಲ್ಲಿ 6 ರೂ ಹೂಡಿಕೆ ಮಾಡಿ, ಕೊನೆಯಲ್ಲಿ ಸಿಗಲಿದೆ 6 ಲಕ್ಷ ರೂ

Bal Jeevan Bima Yojana Details

Image Credit: Original Source

Ads By Google

Post Office Bal Jeevan Bima Yojana Details: ಉಳಿತಾಯದ ಹಣವನ್ನು ಪ್ರತಿ ತಿಂಗಳು ಹೂಡಿಕೆಯಲ್ಲಿ ವ್ಯಯಿಸಿದರೆ ಭಾವಿಷ್ಯದಲ್ಲಿ ಆರ್ತಿಕ ಸಮಸ್ಯೆ ಬಂದರೆ ಪರಿಹಾರವನ್ನು ಕಂಡುಕೊಳ್ಳ್ಬಹುದು. ಹಣದ ಉಳಿತಾಯಕ್ಕೆ ಸಾಕಷ್ಟು ಯೋಜನೆಗಳು ಈಗಾಗ್ಲೇ ಜಾರಿಯಲ್ಲಿವೆ. ಬ್ಯಾಂಕ್ ಹಾಗೂ ವಿವಿಧ ಸಂಸ್ಥೆಗಳು ಹಣದ ಉಳಿತಾಯಕ್ಕೆ ಆಕರ್ಷಕ ಯೋಜನೆಗಳನ್ನು ನೀಡುತ್ತದೆ.

ಇನ್ನು ಭಾರತೀಯ ಅಂಚೆ ಇಲಾಖೆಯು ಕೂಡ ಜನರಿಗಾಗಿ ವಿಶೇಷ ಹೂಡಿಕೆಯ ಯೋಜನೆಗಳನ್ನು ಪರಿಚಯಿಸುತ್ತಿದೆ. ಸದ್ಯ ನವೀಗ ಈ ಲೇಖನದಲ್ಲಿ ಮಕ್ಕಳಿಗಾಗಿ ಲಭ್ಯವಿರುವ ವಿಶೇಷ ಹೂಡಿಕೆಯ ಯೋಜನೆ ಬಗ್ಗೆ ಮಾಹಿತಿ ನೀಡಲಿದ್ದೇವೆ. ನಿಮ್ಮ ಮನೆಯಲ್ಲಿ ಇಬ್ಬರು ಮಕ್ಕಳಿದ್ದರೆ ನೀವು ಈ ಯೋಜನೆಯಲ್ಲಿ ಹೂಡಿಕೆಯನ್ನು ಮಾಡಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು.

Image Credit: Pothunalam

ನಿಮ್ಮ ಮನೆಯಲ್ಲಿ ಇಬ್ಬರು ಮಕ್ಕಳಿದ್ದರೆ ಈ ಯೋಜನೆಯ ಬಗ್ಗೆ ತಿಳಿದುಕೊಳ್ಳಿ
ಬ್ಯಾಂಕ್ ನ ಸ್ಥಿರ ಠೇವಣಿಗೆ ಹೋಲಿಸಿದರೆ Post office Scheme ಗಳಲ್ಲಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು. ನಾವೀಗ Post Office Bal Jeevan Bima Yojana ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಯೋಜನೆಯಲ್ಲಿ ನಿಮ್ಮ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಮಕ್ಕಳ ಭವಿಷ್ಯಕ್ಕೆ ಸಹಕಾರಿಯಾಗಲಿದೆ. ಈ ಯೋಜನೆಯಲ್ಲಿ ಎಷ್ಟು ರೂ. ಹೂಡಿಕೆ ಅಗತ್ಯ…? ಎಷ್ಟು ಲಾಭ ಸಿಗಲಿದೆ..? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ಕೇವಲ 6 ರೂ. ಹೂಡಿಕೆಯಲ್ಲಿ ಪಡೆಯಿರಿ 6 ಲಕ್ಷ
Post Office Bal Jeevan Bima ಯೋಜನೆಯಲ್ಲಿ ದಿನಕ್ಕೆ ಕೇವಲ 6 ರೂಪಾಯಿಗಳನ್ನು ಉಳಿಸಿದರೆ ಸಾಕು, ನೀವು ಮುಕ್ತಾಯದ ಸಮಯದಲ್ಲಿ ಕನಿಷ್ಠ 1 ಲಕ್ಷ ರೂಪಾಯಿಗಳ ಲಾಭವನ್ನು ಪಡೆಯುತ್ತೀರಿ. ಹಾಗೆಯೆ 18 ರೂಪಾಯಿ ಉಳಿಸಿದರೆ 3 ಲಕ್ಷ ರೂಪಾಯಿ ಪಡೆಯಬಹುದು. ಸೇವರ್ ಅನ್ನು ಅವಲಂಬಿಸಿ ದಿನಕ್ಕೆ 6 ಅಥವಾ 18 ರೂಪಾಯಿಗಳನ್ನು ಉಳಿಸಬಹುದು. ನೀವು ಎರಡು ಮಕ್ಕಳಿಗೆ ದಿನಕ್ಕೆ 36 ರೂಪಾಯಿ ಉಳಿಸಿದರೆ ಅವಧಿ ಮುಗಿಯುವ ಸಮಯದಲ್ಲಿ ಇಬ್ಬರೂ 6 ಲಕ್ಷದವರೆಗೆ ಪಡೆಯಬಹುದು.

Image Credit: Timesbull

ಯೋಜನೆಯ ಹೂಡಿಕೆಗೆ ಷರತ್ತುಗಳು ಅನ್ವಯ
•ಈ ಯೋಜನೆಯಲ್ಲಿ ಮಕ್ಕಳ ಹೆಸರಿನಲ್ಲಿ ಮಾತ್ರ ಉಳಿತಾಯ ಮಾಡಬೇಕು.

•ಮಗುವಿನ ವಯಸ್ಸು 5 ರಿಂದ 20 ವರ್ಷಗಳ ನಡುವೆ ಇರಬೇಕು.

•ಈ ಯೋಜನೆ ಹೂಡಿಕೆಗೆ ಪೋಷಕರ ವಯಸ್ಸನ್ನು ಸಹ ಪರಿಗಣಿಸಲಾಗುತ್ತದೆ. ಪೋಷಕರ ವಯಸ್ಸು 45 ವರ್ಷ ಮೀರಬಾರದು.

•ಈ ಯೋಜನೆಯು ಕುಟುಂಬದ ಬಹು ಮಕ್ಕಳಿಗೆ ಅನ್ವಯಿಸುವುದಿಲ್ಲ.

•ಈ ಯೋಜನೆಯು ಇಬ್ಬರು ಮಕ್ಕಳಿಗೆ ಮಾತ್ರ ಅನ್ವಯಿಸುತ್ತದೆ.

Image Credit: Timesbull
Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in