Post Office: ಪೋಸ್ಟ್ ಆಫೀಸ್ ಡಬಲ್ ಸ್ಕೀಮ್ ಯೋಜನೆ, ಇದರಲ್ಲಿ 4 ಲಕ್ಷ ಹೂಡಿಕೆ ಮಾಡಿದರೆ 8 ಲಕ್ಷ ಸಿಗಲಿದೆ.

ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಸಿಗಲಿದೆ ಡಬಲ್ ಹಣ.

Post Office Money Double Scheme: ಪೋಸ್ಟ್ ಆಫೀಸ್ (Post Office) ನಲ್ಲಿ ಹಲವು ಯೋಜನಗಳಿವೆ. ಸಾಕಷ್ಟು ಜನರು ಪೋಸ್ಟ್ ಆಫೀಸ್ ನ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಲಾಭ ಪಡೆಯುತ್ತಿದ್ದಾರೆ.

ಪೋಸ್ಟ್ ಆಫೀಸ್ ನ ಹಲವು ಯೋಜನೆಯಲ್ಲಿ ಕಡಿಮೆ ಹಣವನ್ನು ಹೂಡಿಕೆ ಮಾಡುವ ಮೂಲಕ ಅಧಿಕ ಲಾಭವನ್ನು ಪಡೆಯಬಹುದು. ಇದರಲ್ಲಿ ಪೋಸ್ಟ್ ಆಫೀಸ್ Double Scheme ಯೋಜನೆ ಸಹ ಒಂದು. ಇದರಲ್ಲಿ ಹೂಡಿಕೆದಾರರು ಹೂಡಿಕೆ ಮಾಡುವ ಮೂಲಕ ಸುರಕ್ಷಿತ ಮತ್ತು ಹೆಚ್ಚಿನ ಆದಾಯವನ್ನು ಪಡೆಯಬಹುದು.

If you invest in this scheme of post office, you will get double money.
Image Credit: Moneylife

ಕಿಸಾನ್ ವಿಕಾಸ್ ಪತ್ರ
ಏಪ್ರಿಲ್ 1 2023 ರಿಂದ ರೈತರ ಹೆಸರಿನಲ್ಲಿ ನಡೆಯುತ್ತಿರುವ ಅಂಚೆ ಕಚೇರಿಯ ಸರ್ಕಾರೀ ಯೋಜನೆಯಾದ ಕಿಸಾನ್ ವಿಕಾಸ್ ಪತ್ರ ಸೇರಿದಂತೆ ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಸರ್ಕಾರ ಹೆಚ್ಚಿಸಿದೆ. ಕೇಂದ್ರ ಸರ್ಕಾರವು ಏಪ್ರಿಲ್ 1 2023 ರಿಂದ ವಾರ್ಷಿಕವಾಗಿ ಕಿಸಾನ್ ವಿಕಾಸ್ ಪತ್ರದ ಮೇಲಿನ ಬಡ್ಡಿಯನ್ನು ಶೇಕಡಾ 7.2 ರಿಂದ ಶೇಕಡಾ 7.5 ಕ್ಕೆ ಹೆಚ್ಚಿಸಿದೆ. ಅಂದರೆ ಈಗ ಈ ಯೋಜನೆಯಲ್ಲಿ ನಿಮ್ಮ ಹಣವು ದ್ವಿಗುಣಗೊಳ್ಳುತ್ತದೆ.

ಕಿಸಾನ್ ವಿಕಾಸ್ ಪತ್ರ ಯೋಜನೆಯ ಲಾಭ
ಕಿಸಾನ್ ವಿಕಾಸ್ ಪತ್ರವು ಭಾರತ ಸರ್ಕಾರದಿಂದ ನಡೆಸಲ್ಪಡುವ ಒಟ್ಟು ಮೊತ್ತದ ಹೂಡಿಕೆ ಯೋಜನೆಯಾಗಿದೆ. ಈ ಯೋಜನೆಯಲ್ಲಿ ನೀವು ನಿಗದಿತ ಅವಧಿಯಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಬಹುದಾಗಿದೆ. ಕಿಸಾನ್ ವಿಕಾಸ್ ಪಾತ್ರ ಯೋಜನೆಯು ದೇಶದ ಎಲ್ಲಾ ಅಂಚೆ ಕಚೇರಿಗಳು ಮತ್ತು ದೊಡ್ಡ ಬ್ಯಾಂಕ್ ಗಳಲ್ಲಿ ಹೂಡಿಕೆಗೆ ಲಭ್ಯವಿದೆ.

If you invest in this scheme of post office, you will get double money.
Image Credit: Emka

ಈ ಯೋಜನೆಯನ್ನು ವಿಶೇಷವಾಗಿ ರೈತರಿಗಾಗಿ ಮಾಡಲಾಗಿದ್ದು, ಇದರಿಂದ ಅವರು ತಮ್ಮ ಹಣವನ್ನು ದೀರ್ಘಾವಧಿಯಲ್ಲಿ ಉಳಿಸಬಹುದು. ಇದರಲ್ಲಿ ಕನಿಷ್ಠ ಹೂಡಿಕೆ 1000 ರೂ. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ.

Join Nadunudi News WhatsApp Group

ಕಿಸಾನ್ ವಿಕಾಸ್ ಯೋಜನೆಯಲ್ಲಿ ಬಡ್ಡಿದರವನ್ನು ಸರ್ಕಾರ ಏಪ್ರಿಲ್ 1 ರಿಂದ ಹೆಚ್ಚಿಸಿದೆ. ಈಗ ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ 7 .5 % ದರದಲ್ಲಿ ಆದಾಯವನ್ನು ಪಡೆಯಬಹುದು. ನೀವು ಈ ಯೋಜನೆಯಲ್ಲಿ 4 ಲಕ್ಷ ಹಾಕಿದರೆ 115 ತಿಂಗಳಲ್ಲಿ 8 ಲಕ್ಷ ವಾಪಸ್ ಸಿಗುತ್ತದೆ.

Join Nadunudi News WhatsApp Group