Franchise: 10 ಸಾವಿರ ರೂ ಠೇವಣಿ ಇಟ್ಟು ಅಂಚೆ ಕಚೇರಿ ಫ್ರಾಂಚೈಸಿ ತೆರೆಯಿರಿ, ಲಕ್ಷದ ತನಕ ಲಾಭ ಗಳಿಸಬಹುದು.
ಅಂಚೆ ಕಚೇರಿ ಪ್ರಾಂಚೈಸಿ ಬಿಸಿನೆಸ್ ನಿಂದ ನೀವು ಲಕ್ಷ ಲಕ್ಷ ಆದಾಯ ಗಳಿಸಬಹುದಾಗಿದೆ.
Post Office Franchise Scheme: ದೇಶದಲ್ಲಿ ಸಾಕಷ್ಟು ಜನರು ಉದ್ಯೋಗದ ಹುಡುಕಾಟದಲ್ಲಿರುತ್ತಾರೆ. ಸಾಕಷ್ಟು ಉದ್ಯೋಗಳು ಇನ್ನೂ ಕೂಡ ಖಾಲಿಯಾಗಿಯೇ ಇದೆ. ಉದ್ಯೋಗಳು ಇದ್ದರೂ ಕೂಡ ಅದರ ಬಗ್ಗೆ ಸೂಕ್ತ ಮಾಹಿತಿ ಇಲ್ಲದ ಕಾರಣ ಜನರು ನಿರುದ್ಯೋಗಿಗಳಾಗಿಯೇ ಇದ್ದಾರೆ. ಇದೀಗ ನಾವು ಅಂಚೆ ಕಚೇರಿ (Post Office) ಯ ಸಹಯೋಗದೊಂದಿಗೆ ಮಾಡಬಹುದಾದ ಒಂದು ಉತ್ತಮ ವ್ಯಾಪಾರದ ಬಗ್ಗೆ ಮಾಹಿತಿ ತಿಳಿಯೋಣ. ಅತಿ ಕಡಿಮೆ ಬಂಡವಾಳದೊಂದಿಗೆ ನೀವು ಉತ್ತಮ ವ್ಯಾಪಾರವನ್ನು ಕಂಡುಕೊಳ್ಳಬಹುದು.
10 ಸಾವಿರ ರೂ ಠೇವಣಿ ಇಟ್ಟು ಅಂಚೆ ಕಚೇರಿ ಫ್ರಾಂಚೈಸಿ ತೆರೆಯಿರಿ
ದೇಶದಲ್ಲಿ ಸರಿಸುಮಾರು 1.55 ಲಕ್ಷದಷ್ಟು ಅಂಚೆ ಕಚೇರಿಗಳಿವೆ. ಆದರೆ ಅಂಚೆ ಕಚೇರಿಗಳು ನಗರ ಪ್ರದೇಶದಲ್ಲಿ ಹೆಚ್ಚಿರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಅಂಚೆ ಕಚೇರಿಗಳ ಸಂಖ್ಯೆ ಕಡಿಮೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಅಂಚೆ ಕಚೇರಿ ತೆರೆಯಲು ಬೇಡಿಕೆಗಳು ಸಾಕಷ್ಟಿವೆ. ಈ ಹಿನ್ನಲೆ ಪೋಸ್ಟ್ ಆಫೀಸ್ ಫ್ರ್ಯಾಂಚೈಸ್ ಔಟ್ ಲೆಟ್ ಗಳನ್ನು ಸ್ಥಾಪಿಸಲು 1 ಫೆಬ್ರವರಿ 1 2024 ರಿಂದ ಹೊಸ ಫ್ರ್ಯಾಂಚೈಸ್ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ.
ಹತ್ತನೇ ತರಗತಿ ಪಾಸ್ ಆಗಿರುವ ವ್ಯಕ್ತಿಯು ಅಂಚೆ ಕಚೇರಿ ಫ್ರಾಂಚೈಸಿ ತೆರೆಯಲು ಅರ್ಹತೆ ಪಡೆದಿರುತ್ತಾರೆ. ಇಂಗ್ಲಿಷ್ ನಲ್ಲಿ ಉತ್ತಮವಾಗಿದ್ದು, ಪ್ಯಾನ್ ಕಾರ್ಡ್ ಹೊಂದಿರುವ ಯಾವುದೇ ವ್ಯಕ್ತಿಯು ಪ್ರಾಂಚೈಸಿಯಾಗಲು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಕೇವಲ 10,000 ರೂ. ಅಂಚೆ ಕಚೇರಿಯಲ್ಲಿ ಭದ್ರತಾ ಠೇವಣಿ ಮಾಡಬೇಕಾಗುತ್ತದೆ. ಕೇವಲ 10 ಸಾವಿರ ಠೇವಣಿ ಮಾಡುವ ಮೂಲಕ ನೀವು ಅಂಚೆ ಕಚೇರಿ ಫ್ರಾಂಚೈಸಿ ತೆರೆದರೆ ಪ್ರತಿ ತಿಂಗಳು ಆದಾಯವನ್ನು ಗಳಿಸಬಹದು. ಅಂಚೆ ಕಚೇರಿ ಫ್ರಾಂಚೈಸಿಯಿಂದ ಯಾವ ರೀತಿ ಆದಾಯವನ್ನು ಗಳಿಸಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.
ಫ್ರಾಂಚೈಸಿಯಿಂದ ಯಾವ ರೀತಿ ಆದಾಯವನ್ನು ಗಳಿಸಬಹುದು..?
ನೀವು ಪ್ರಾಂಚೈಸಿಯನ್ನು ತೆರೆದರೆ ಪ್ರತಿ ನೋಂದಾಯಿತ ಪತ್ರಕ್ಕೆ ರೂ 3.00, ಹಾಗೂ ರೂ. 200 ಕ್ಕಿಂತ ಹೆಚ್ಚಿನ ಮೌಲ್ಯದ ಪ್ರತಿ ಮನಿ ಆರ್ಡರ್ ಗೆ ರೂ. 5.00 ಮತ್ತು ಅಂಚೆ ಚೀಟಿಗಳು ಮತ್ತು ಸ್ಟೇಷನರಿಗಳ ಮಾರಾಟದ ಮೇಲೆ 5% ಕಮಿಷನ್ ಪಡೆಯುತ್ತೀರಿ. ಬುಕ್ ಮಾಡಿದ ಸ್ಪೀಡ್ ಪೋಸ್ಟ್ ಐಟಂಗಳಿಗೆ ಕಮಿಷನ್ ದರವು ತುಂಬಾ ಹೆಚ್ಚಿರುತ್ತದೆ. ಫ್ರಾಂಚೈಸಿ ಅವರು ಮಾಡಿದ ಮಾಸಿಕ ವ್ಯವಹಾರದ 7% ರಿಂದ 25% ರಷ್ಟು ಲಾಭವನ್ನು ಪಡೆಯುತ್ತಾರೆ.