Grama Suraksha: 50 ರೂ ಹೂಡಿಕೆ ಮಾಡಿ 35 ಲಕ್ಷ ಪಡೆದುಕೊಳ್ಳಿ, ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಯೋಜನೆ ಬಿಡುಗಡೆ.

ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಕಡಿಮೆ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಲಾಭವನ್ನು ಪಡೆಯಬಹುದು.

Post Office Grama Suraksha Scheme: ಅಂಚೆ ಕಚೇರಿಯು (Post Office) ಜನಸಾಮಾನ್ಯರಿಗಾಗಿ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಲೇ ಇದೆ. ಪೋಸ್ಟ್ ಆಫೀಸ್ ಈಗಾಗಲೇ ಸಾಕಷ್ಟು ಯೋಜನೆಗಳನ್ನು ಬಿಡುಗಡೆ ಮಾಡಿದೆ. ಕಡಿಮೆ ಹಣದಲ್ಲಿ ಹೂಡಿಕೆ ಮಾಡಲು ಪೋಸ್ಟ್ ಆಫೀಸ್ ನಲ್ಲಿ ಸಾಕಷ್ಟು ಯೋಜನೆಗಳಿವೆ.

ಸಾರ್ವಜನಿಕರು ಅಂಚೆ ಕಚೇರಿಯ ಸಾಕಷ್ಟು ಯೋಜನೆಗಳ ಲಾಭವನ್ನು ಪಡೆಯುತ್ತಾರೆ. ಅಂಚೆ ಕಚೇರಿಯಲ್ಲಿನ ಹೂಡಿಕೆಯು ಲಾಭದಾಯಕ ಹಾಗೂ ಸುರಕ್ಷಿತವಾಗಿರುತ್ತದೆ. ನಿಮ್ಮ ಉಳಿತಾಯದ ಮೊತ್ತದ ಮೇಲೆ ಹೆಚ್ಚಿನ ಬಡ್ಡಿ ನೀಡಲು ಅಂಚೆ ಕಚೇರಿಯು ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ.

Profitable scheme available at post office
Image Credit: Lokmat

ಅಂಚೆ ಕಚೇರಿಯಲ್ಲಿ ಲಭ್ಯವಿದೆ ಲಾಭದಾಯಕ ಯೋಜನೆ
ಭಾರತೀಯ ಅಂಚೆ ಇಲಾಖೆ ಜನಸಾಮಾನ್ಯರಿಗೆ ಹಲವಾರು ಸುರಕ್ಷಿತ ಉಳಿತಾಯ ಯೋಜನೆಗಳನ್ನು ಜಾರಿಗೆ ತಂದಿದೆ. ನೀವು ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವ ಯೋಜನೆಯಲ್ಲಿದ್ದರೆ ಇದೀಗ ಪೋಸ್ಟ್ ಆಫೀಸ್ ಗ್ರಾಮ ಭದ್ರತಾ (ಸುರಕ್ಷಾ) ಯೋಜನೆಯನ್ನು ಜಾರಿಗೊಳಿಸಿದೆ. ಈ ಗ್ರಾಮ ಭದ್ರತಾ ಯೋಜನೆಯು ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭವನ್ನು ನೀಡುತ್ತದೆ.

ಗ್ರಾಮ ಸುರಕ್ಷಾ ಯೋಜನೆ (Grama Suraksha Yojana) 
ಗ್ರಾಮ ಸುರಕ್ಷಾ ಯೋಜನೆಗೆ ಸೇರಲು ಪಾಲಿಸಿದಾರನ ವಯಸ್ಸು 19 ವರ್ಷವಾಗಿರಬೇಕು. ಗರಿಷ್ಠ ಪ್ರವೇಶ ವಯಸ್ಸು 55 ವರ್ಷಗಳನ್ನು ಮೀರಬಾರದು. ಕನಿಷ್ಠ ವಿಮಾ ಮೊತ್ತ ರೂ. 10,000 ಮತ್ತು ಗರಿಷ್ಟ ವಿಮ ಮೊತ್ತ ರೂ. 10 ಲಕ್ಷ. ಪಾಲಿಸಿದಾರರು ನಾಲ್ಕು ವರ್ಷಗಳ ಕವರೇಜ್ ನಂತರ ಸಾಲ ಸೌಲಭ್ಯವನ್ನು ಪಡೆಯಬಹುದು.

Profitable scheme available at post office
Image Credit: Tv9telugu

ಕೇವಲ 50 ರೂ. ಹೂಡಿಕೆಯಲ್ಲಿ ಸಿಗಲಿದೆ 35 ಲಕ್ಷ
ಗ್ರಾಮ ಸುರಕ್ಷಾ ಯೋಜನೆಯಡಿ ಪಾಲಿಸಿದಾರರಿಗೆ ಕೇವಲ 50 ರೂಪಾಯಿ ಪಾವತಿ ಮಾಡುವುದರಿಂದ ನೀವು 35 ಲಕ್ಷ ಹಣ ಗಳಿಸಬಹುದು. ದಿನಕ್ಕೆ 50 ರೂ. ಅಂದರೆ ಪ್ರತಿ ತಿಂಗಳಿಗೆ 1,515 ರೂ. ಪಾವತಿಸಿದರೆ ಪಾಲಿಸಿ ಮೆಚ್ಯುರಿಟಿ ನಂತರ ರೂ. 34.60 ಲಕ್ಷ ಲಾಭ ಪಡೆಯಬಹುದು.

Join Nadunudi News WhatsApp Group

ನೀವು ಈ ಯೋಜನೆಗೆ ಸೇರ್ಪಡೆಗೊಂಡರೆ ಮತ್ತು ಐದು ವರ್ಷಗಳಲ್ಲಿ ಅದನ್ನು ತೊರೆದರೆ ನೀವು ಬೋನಸ್ ಗೆ ಅರ್ಹರಾಗಿರುವುದಿಲ್ಲ. ಪ್ರತಿ ಸಾವಿರ ರೂಪಾಯಿಗೆ ರೂ. 60 ವರೆಗೆ ಬೋನಸ್ ನೀಡಲಾಗುತ್ತದೆ.

Join Nadunudi News WhatsApp Group