Ads By Google

Post Office Job: 8 ನೇ ತರಗತಿ ಪಾಸ್ ಆದವರಿಗೆ ಪೋಸ್ಟ್ ಆಫೀಸ್ ನಲ್ಲಿ ಉದ್ಯೋಗಾವಕಾಶ, ತಿಂಗಳಿಗೆ 63000 ರೂ ಸಂಬಳ

Post office recruitment 2024

Image Credit: Original Source

Ads By Google

Post Office Job Application 2024: ಉದೋಗ್ಯ ಹುಡುಕುತ್ತಿರುವವರಿಗೆ ಅಂಚೆ ಇಲಾಖೆಯಲ್ಲಿ ಉತ್ತಮ ಆಯ್ಕೆಗಳಿವೆ. ಅಂಚೆ ಇಲಾಖೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಮೋಟಾರ್ ವೆಹಿಕಲ್ ಮೆಕ್ಯಾನಿಕ್ (ಸ್ಕಿಲ್ಡ್​ ಆರ್ಟಿಸನ್ ಗ್ರೇಡ್-3) ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 10, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ . ಆಸಕ್ತರು ಆಫ್​ಲೈನ್​/ ಪೋಸ್ಟ್​ ಮೂಲಕ ಅರ್ಜಿ ಹಾಕಬೇಕು.

Image Credit: Thehindubusinessline

ಅಂಚೆ ಇಲಾಖೆಗೆ ಅರ್ಜಿ ಹಾಕಲು ಬೇಕಾಗಿರುವ ಶೈಕ್ಷಣಿಕ ಅರ್ಹತೆ ಹಾಗು ವಯೋಮಿತಿ

ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 8ನೇ ತರಗತಿ ಪಾಸಾಗಿರಬೇಕು. ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜುಲೈ 1, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಿರಬಾರದು.

ಅರ್ಜಿ ಸ್ಥಳ ಹಾಗು ವೇತನದ ಬಗ್ಗೆ ಮಾಹಿತಿ

ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಛತ್ತೀಸ್​ಗಢದ ದರ್ಗ್​ನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹19,900-63,200 ಸಂಬಳ ಕೊಡಲಾಗುತ್ತದೆ.ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ನಾಳೆಯೊಳಗೆ ಕಳುಹಿಸಬೇಕು.
ಮ್ಯಾನೇಜರ್ (ಗ್ರೂಪ್​-A)
ಮೇಲ್ ಮೋಟಾರ್ ಸೇವೆಗಳು
GPO ಕಾಂಪೌಂಡ್
ಸುಲ್ತಾನಿಯಾ ರಸ್ತೆ
ಭೋಪಾಲ್-462001

Image Credit: News 18

ಅಂಚೆ ಕಚೇರಿಯ ಉದ್ಯೋಗದ ಬಗ್ಗೆ ಅರ್ಜಿ ಶುಲ್ಕದ ವಿವರಗಳು

ಪರೀಕ್ಷಾ ಶುಲ್ಕ:Nil , SC/ST/ಮಹಿಳಾ ಅಭ್ಯರ್ಥಿಗಳು: Nil, ಇತರ ಅಭ್ಯರ್ಥಿಗಳು ರೂ.400/-, ಎಲ್ಲಾ ಅಭ್ಯರ್ಥಿಗಳು: ರೂ.100/- ಆಗಿದ್ದು ಪಾವತಿ ವಿಧಾನ ಭಾರತೀಯ ಪೋಸ್ಟಲ್ ಆರ್ಡರ್ ಆಗಿರುತ್ತದೆ.

Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in