RD Investment: ಪೋಸ್ಟ್ ಆಫೀಸ್ ನಲ್ಲಿ RD ಖಾತೆ ಇದ್ದವರಿಗೆ ಬಂಪರ್ ಗುಡ್ ನ್ಯೂಸ್, ಯಾವುದೇ ದಾಖಲೆ ಇಲ್ಲದೆ ಸಾಲ ಪಡೆದುಕೊಳ್ಳಿ.
ಪೋಸ್ಟ್ ಆಫೀಸ್ RD ಖಾತೆ ಇದ್ದವರಿಗೆ ಯಾವುದೇ ದಾಖಲೆ ಇಲ್ಲದೆ ಲೋನ್ ಸಿಗಲಿದೆ.
Post Office RD Investment: ಸಾಮಾನ್ಯವಾಗಿ ಜನರು ಸಣ್ಣ ಉಳಿತಾಯದ ಮೂಲದ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಯೋಚಿಸುತ್ತಾರೆ. ಭವಿಷ್ಯಕ್ಕಾಗಿ ವಿವಿಧ ಸಣ್ಣಾ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಉತ್ತಮ.
ಇನ್ನು ನೀವು ನಿಮ್ಮ ಭವಿಷ್ಯಕ್ಕಾಗಿ ಸಣ್ಣ ಉಳಿತಾಯ ಯೋಜನೆನ್ನು ಹುಡುಕುತ್ತಿದ್ದರೆ ಇದೀಗ ನಾವು Post Office ನಲ್ಲಿ ಲಭ್ಯವಿರುವ ಉತ್ತಮ ಉಳಿತಾಯ ಯೋಜನೆಯ ಬಗ್ಗೆ ಹೇಳಲಿದ್ದೇವೆ. Post Office ನ ಈ ಯೋಜನೆಯ ಹೆಸರು RD Investment ಆಗಿದೆ. RD ಖಾತೆಯಲ್ಲಿ ನೀವು ಹೂಡಿಕೆ ಮಾಡುವುದರಿಂದ ದೊಡ್ಡ ಮೊತ್ತದ ಹಣವನ್ನು ಉಳಿಸಬಹುದಾಗಿದೆ.
Post Office RD
ಸಾಮಾನ್ಯವಾಗಿ ಭಾರತೀಯ ಅಂಚೆ ಇಲಾಖೆ ಗ್ರಾಹಕರಿಗಾಗಿ Recurring Deposit ಆಯ್ಕೆಯನ್ನು ನೀಡುತ್ತದೆ. ನೀವು ಮಾಸಿಕವಾಗಿ RD ಖಾತೆಯಲ್ಲಿ ಹೂಡಿಕೆ ಮಾಡುದರಿಂದ ಲಕ್ಷಕ್ಕೂ ಅಧಿಕ ಲಾಭವನ್ನು ಪಡೆಯಬಹುದಾಗಿದೆ. ಸದ್ಯ Post office ಈ ನವೆಂಬರ್ ಮತ್ತು ಡಿಸೇಂಬರ್ ತರಿಮಾಸಿಕದಲ್ಲಿ ಬಡ್ಡಿದರವನ್ನು ಶೇ. 6.5 ರಿಂದ ಶೇ. 6.7 ಕ್ಕೆ ಹೆಚ್ಚಿಸಿದೆ. ಭಾರತೀಯ ಪ್ರಜೆಯಾದ ಯಾರೊಬ್ಬರೂ ಕೂಡ Post office ನಲ್ಲಿ RD ಖಾತೆಯನ್ನು ತೆರೆಯುವ ಮೂಲಕ 6.7 ಬಡ್ಡಿದರದಲ್ಲಿ ಲಾಭವನ್ನು ಪಡೆಯಬಹುದು.
ಪೋಸ್ಟ್ ಆಫೀಸ್ ನಲ್ಲಿ RD ಖಾತೆ ಇದ್ದವರಿಗೆ ಬಂಪರ್ ಗುಡ್ ನ್ಯೂಸ್
ಇನ್ನು 10 ವರ್ಷ ಮೇಲ್ಪಟ್ಟ ಪ್ರತಿ ಭಾರತೀಯ ಪ್ರಜೆ ಪೋಸ್ಟ್ ಆಫೀಸ್ ನ RD ಖಾತೆ ತೆರೆಯಲು ಅರ್ಹರಾಗಿರುತ್ತಾರೆ. Post Office RD 5 ವರ್ಷದ ಯೋಜನೆಯಾಗಿದೆ. ನೀವು ಈ ಯೋಜನೆಯಡಿ ಹೂಡಿಕೆ ಮಾಡಿದರೆ ಕಷ್ಟದ ಸಮಯದಲ್ಲಿ ಸಾಲವನ್ನು ಪಡೆಯಬಹುದು ಎನ್ನುವ ಬಗ್ಗೆ ನಿಮಗೆ ತಿಳಿದಿದೆಯೇ..?
ಹೌದು ನೀವು ಅಂಚೆ ಕಛೇರಿಯ ಐದು ವರ್ಷಗಳ ಮರುಕಳಿಸುವ ಠೇವಣಿ ಯೋಜನೆಯಲ್ಲಿ ನೀವು ಸತತ 12 ಕಂತುಗಳನ್ನು ಠೇವಣಿ ಮಾಡಿದರೆ ನಿಮಗೆ ಸಾಲ ಸೌಲಭ್ಯ ಸಿಗುತ್ತದೆ. ಒಂದು ವರ್ಷದ ನಂತರ ನಿಮ್ಮ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತದ 50 ಪ್ರತಿಶತದವರೆಗೆ ನೀವು ಸಾಲವನ್ನು ತೆಗೆದುಕೊಳ್ಳಬಹುದು. ನೀವು ಸಾಲದ ಮೊತ್ತವನ್ನು ಒಟ್ಟು ಮೊತ್ತದಲ್ಲಿ ಅಥವಾ ಸಮಾನ ಮಾಸಿಕ ಕಂತುಗಳಲ್ಲಿ ಪಾವತಿಸಬಹುದು.
ಯಾವುದೇ ದಾಖಲೆ ಇಲ್ಲದೆ ಸಾಲ ಪಡೆದುಕೊಳ್ಳಿ
RD ಖಾತೆಗೆ ಅನ್ವಯವಾಗುವ 2% RD ಬಡ್ಡಿ ದರದಲ್ಲಿ ಸಾಲದ ಮೊತ್ತದ ಮೇಲಿನ ಬಡ್ಡಿಯು ಅನ್ವಯವಾಗುತ್ತದೆ. ಹಿಂಪಡೆಯುವ ದಿನಾಂಕದಿಂದ ಮರುಪಾವತಿಯ ದಿನಾಂಕದವರೆಗೆ ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ. ನೀವು ಸಾಲವನ್ನು ತೆಗೆದುಕೊಂಡ ನಂತರ ಸಮಯಕ್ಕೆ ಮರುಪಾವತಿ ಮಾಡದಿದ್ದರೆ, ನಂತರ RD ಮೆಚ್ಯೂರ್ ಆಗುವಾಗ, ಸಾಲದ ಮೊತ್ತವನ್ನು ಬಡ್ಡಿಯೊಂದಿಗೆ ಕಡಿತಗೊಳಿಸಲಾಗುತ್ತದೆ. RD ಮೇಲಿನ ಸಾಲದ ಸೌಲಭ್ಯವನ್ನು ಪಡೆಯಲು ನೀವು Passbook ನೊಂದಿಗೆ ಅರ್ಜಿ ನಮೂನೆಯನ್ನು ಭರ್ತಿಮಾಡಿ ಮತ್ತು ಅಂಚೆ ಕಚೇರಿಗೆ ಸಲ್ಲಿಸಬೇಕು.